ಬೆಂಗಳೂರು : ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಲಾಕ್ಡೌನ್ನಲ್ಲಿ ತೊಂದರೆಗೆ ಸಿಲುಕಿರುವ ಸವಿತಾ ಸಮಾಜದ ಜನರಿಗೆ ಆಹಾರ ಪೂರೈಕೆ ಮಾಡಲಾಯಿತು. ಸವಿತಾ ಸಮಾಜದ ಈ ಕಾರ್ಯವನ್ನು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಶ್ಲಾಘಿಸಿದ್ದಾರೆ.
ಸವಿತಾ ಸಮಾಜದ ಕಾರ್ಯಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಮೆಚ್ಚುಗೆ - ಡಾ. ಅಶ್ವತ್ಥ್ ನಾರಾಯಣ್
ಲಾಕ್ಡೌನ್ನಿಂದ ತೊಂದರೆಗೆ ಸಿಲುಕಿರುವ ಸವಿತಾ ಸಮಾಜದ ಜನರಿಗೆ ಅದೇ ಸಮಾಜದ ವತಿಯಿಂದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಯಿತು.
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್
ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೋವಿಡ್-18 ಎಲ್ಲೆಡೆ ತಲ್ಲಣ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಸವಿತಾ ಸಮಾಜ ವೃತ್ತಿ ಇಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದೆ. ಹೀಗಾಗಿ ಇದೇ ಸಮಾಜದವರು ಬಡವರಿಗೆ ರೇಷನ್ ಕೊಡುವ ವ್ಯವಸ್ಥೆ ಮಾಡಿದ್ದು ನಿಜವಾಗಿಯೂ ಮೆಚ್ಚುವಂತಹ ಕೆಲಸ ಎಂದರು.
ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ನಮ್ಮಲ್ಲಿ 27 ಉಪಜಾತಿಗಳಿವೆ. ರಾಜಕಾರಣಿಗಳಲ್ಲಿ ಕೆಲವರು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.