ಬೆಂಗಳೂರು: ತುಳಸಿ ಎಲೆ ಅಥವಾ ಪುದೀನ ಎಲೆ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಕೊರೊನಾ ವೈರಸ್ ನಿಯಂತ್ರಣ ಮಾಡಬಹುದು ಎಂದು ಆಯುರ್ವೇದಿಕ್ ವೈದ್ಯ ಡಾ. ಅನಂತ ದೇಸಾಯಿ ಹೇಳಿದ್ದಾರೆ.
ಪುದೀನ ಎಲೆ ಹಬೆ ತೆಗೆದುಕೊಳ್ಳುವುದರಿಂದ ಕೊರೊನಾ ನಿಯಂತ್ರಿಸಬಹುದು: ಡಾ. ಅನಂತ ದೇಸಾಯಿ - Ayurvedic oil
ಅರ್ಕೇ ಹಜೀಬ್ ಎಂಬ ಆಯುರ್ವೇದಿಕ್ ತೈಲ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಕೊರೊನಾಗೆ ಒಳ್ಳೆಯದು ಎಂದು ಆಯುರ್ವೇದಿಕ್ ವೈದ್ಯ ಡಾ. ಅನಂತ ದೇಸಾಯಿ ಹೇಳಿದ್ದಾರೆ.
ಡಾ. ಅನಂತ ದೇಸಾಯಿ
ವಿಕಾಸಸೌಧದಲ್ಲಿ ಇಂದು ಸಂಜೆ ನಡೆದ ಆರೋಗ್ಯ ಸಚಿವರ ಸಭೆ ನಂತರ ಮಾಹಿತಿ ನೀಡಿದ ಅವರು, ಸ್ಟೀಮ್ ಇನ್ಹೇಲೇಶನ್ ಮಾಡುವುದು ಬಹಳ ಸೂಕ್ತ ಎಂದರು.
ಅರ್ಕೇ ಹಜೀಬ್ ಎಂಬ ಆಯುರ್ವೇದಿಕ್ ತೈಲ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬಹುದು. ಇದು ಕೊರೊನಾ ಸೋಂಕಿತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.