ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಂಗಳಮುಖಿಯರ 'ಒಂದೆಡೆ' ಸಂಘಟನೆ ಸಂಸ್ಥಾಪಕಿ ಡಾ.ಅಕೈ ಪದ್ಮಶಾಲಿ ಅವರು ಶುಕ್ರವಾರ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಡಿಕೆಶಿ ಭೇಟಿ ಮಾಡಿ ಸಮಾಲೋಚಿಸಿದ ಡಾ.ಅಕೈ ಪದ್ಮಶಾಲಿ - D.K.shivakumar news
ಸರ್ಕಾರದಿಂದ ಒಂದಿಷ್ಟು ಸೌಲಭ್ಯ, ಸಹಕಾರ ಸಿಕ್ಕರೆ ನಾವು ಕೂಡ ಸರ್ವ ಕ್ಷೇತ್ರಗಳಲ್ಲಿಯೂ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರುವ ಕಾರ್ಯವನ್ನು ತಾವು ಮಾಡಬೇಕು ಎಂದು ಮನವಿ ಮಾಡಿದರು..
ಎರಡು ವಾರದ ಹಿಂದೆ ಭೇಟಿ ಮಾಡಿ ಶಿವಕುಮಾರ್ ಜೊತೆ ಚರ್ಚೆ ನಡೆಸಿದ್ದ ಅಕೈ ಪದ್ಮಶಾಲಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದರು. ಇದಕ್ಕೆ ಡಿ ಕೆ ಶಿವಕುಮಾರ್ ಸ್ಪಂದಿಸಿದ್ದರು. ಈ ಹಿನ್ನೆಲೆ ಮತ್ತೊಮ್ಮೆ ಇಂದು ಭೇಟಿ ಮಾಡಿದ ಅವರು, ಮಂಗಳಮುಖಿಯರ ಸಮಸ್ಯೆ ಕುರಿತು ಪ್ರಸಕ್ತ ಅಧಿವೇಶನದಲ್ಲಿ ಗಮನ ಸೆಳೆದು, ತಮ್ಮ ಪರವಾಗಿ ಸರ್ಕಾರದ ಗಮನ ಸೆಳೆಯುವಂತೆ ಇನ್ನೊಮ್ಮೆ ಒತ್ತಾಯಿಸಿದರು.
ಸಮಾಜದಲ್ಲಿ ಮಂಗಳಮುಖಿಯರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಉದ್ಯೋಗಾವಕಾಶ ದೊರಕುತ್ತಿಲ್ಲ. ಸಮಾಜ ಎಷ್ಟೇ ಪ್ರಗತಿ ಹೊಂದಿದರು, ಮಂಗಳಮುಖಿಯರನ್ನು ನೋಡುವ ದೃಷ್ಟಿ ಬದಲಾಗಿಲ್ಲ. ಸರ್ಕಾರದಿಂದ ಒಂದಿಷ್ಟು ಸೌಲಭ್ಯ, ಸಹಕಾರ ಸಿಕ್ಕರೆ ನಾವು ಕೂಡ ಸರ್ವ ಕ್ಷೇತ್ರಗಳಲ್ಲಿಯೂ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರುವ ಕಾರ್ಯವನ್ನು ತಾವು ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಡಾ. ಬಿ ಎಲ್ ಶಂಕರ್ ಹಾಗೂ ಶಾಸಕಿ ಸೌಮ್ಯರೆಡ್ಡಿ ಇದ್ದರು.