ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸಿದರೆ ದಂಡದ ಪ್ರಮಾಣ ದುಪ್ಪಟ್ಟಾಗಲಿದೆ. ಐದು ನೂರು ರೂಪಾಯಿ ಇದ್ದ ದಂಡದ ಹಣವನ್ನ ಒಂದು ಸಾವಿರಕ್ಕೆ ಏರಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಅಧಿಕೃತ ಆದೇಶ ಪ್ರಕಟವಾಗಿದೆ.
ಗಮನಿಸಿ.. ಸೀಟ್ ಬೆಲ್ಟ್ ಧರಿಸದಿದ್ದರೆ ಇನ್ಮುಂದೆ ದುಪ್ಪಟ್ಟು ದಂಡ - central govt
ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ ಒಂದು ಸಾವಿರ ರೂ. ದಂಡ ವಿಧಿಸಲು ರಾಜ್ಯದ ಎಲ್ಲ ಕಮೀಷನರೇಟ್ ಮತ್ತು ಎಸ್ಪಿಗಳಿಗೆ ಆದೇಶಿಸಲಾಗಿದೆ.
ಸೀಟ್ ಬೆಲ್ಟ್
ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ ಒಂದು ಸಾವಿರ ರೂ. ದಂಡ ವಿಧಿಸಲು ರಾಜ್ಯದ ಎಲ್ಲ ಕಮೀಷನರೇಟ್ ಮತ್ತು ಎಸ್ಪಿಗಳಿಗೆ ಆದೇಶಿಸಲಾಗಿದೆ. ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ಐದು ನೂರು ರೂ. ದಂಡ ಹಾಕಲಾಗುತ್ತಿತ್ತು. ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದಲೇ ನೂತನ ದಂಡವನ್ನ ನಿಗದಿಪಡಿಸಲಾಗಿದೆ.
ಓದಿ:ಸೀಟ್ ಬೆಲ್ಟ್ ಹಾಕದ ಠಾಣಾಧಿಕಾರಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್!