ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಡಬಲ್ ಮ್ಯುಟೇಷನ್ ವೈರಸ್‌‌ ಕಂಟಕ : ಬೆಂಗಳೂರು-ಕಲುಬುರಗಿ ಕ್ಲಸ್ಟರ್​ನಲ್ಲಿ ಪತ್ತೆ - Double mutant virus found in bengalore

ದೇಹಕ್ಕೆ ಒಂದೇ ರೀತಿಯ ಹಾನಿ ಮಾಡಿದರೂ, ಇದು ಈ‌ ಹಿಂದಿನ ವೈರಸ್​ಗಿಂತ ಬಹು ವೇಗವಾಗಿ ಹರಡುವ ಸಾಧ್ಯತೆ ಇರಲಿದೆ. ಮೊದಲು ಸೋಂಕಿನಿಂದ ಹಾನಿಯಾಗೋದು ಶ್ವಾಸಕೋಶಕ್ಕೆ, ಇದರಿಂದ ಉಸಿರಾಟಕ್ಕೆ ಪೆಟ್ಟು ಬೀಳುತ್ತೆ..

double-mutant-virus-found-in-bengalore
ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ಕನ್ಸಲ್ಟೆಂಟ್ ಡಾ. ಸಂಜೀವ್ ರಾವ್

By

Published : Apr 28, 2021, 3:36 PM IST

ಬೆಂಗಳೂರು : ಕೊರೊನಾ 2ನೇ ಅಲೆ ನಡುವೆ ರಾಜ್ಯದಲ್ಲಿ ಇದೀಗ ಡಬಲ್ ಮ್ಯುಟೇಷನ್ ಕಂಟಕ ಎದುರಾಗಿದೆ. ಕರ್ನಾಟಕದಲ್ಲೂ ಕಾಣಿಸಿಕೊಂಡಿರುವ B.1.617 ಮ್ಯುಟೇಟ್ ವೈರಸ್, ಮಹಾರಾಷ್ಟ್ರ, ಕೇರಳ, ದೆಹಲಿ, ಆಂಧ್ರದಲ್ಲಿ ಮಾತ್ರ ಪತ್ತೆಯಾಗಿತ್ತು.

ಈಗ ಕರ್ನಾಟಕದಲ್ಲಿ 20 ಜನರ ಸ್ಯಾಂಪಲ್ಸ್‌ನಲ್ಲಿ ಮ್ಯುಟೇಟ್ ವೈರಸ್ ಪತ್ತೆಯಾಗಿದೆ. ನಗರದ ನಿಮ್ಹಾನ್ಸ್ ಲ್ಯಾಬ್​ನಲ್ಲಿ ನಡೆಸಿದ ಜೀನೋಮಿಕ್ ಸೀಕ್ವೆನ್ಸಿಂಗ್​ನಲ್ಲಿ ಡಬಲ್ ಮ್ಯುಟೇಟ್ ಪತ್ತೆಯಾಗಿದೆ‌.

ಮಹಾರಾಷ್ಟ್ರದಿಂದಲೇ ಡಬಲ್ ಮ್ಯುಟೇಷನ್ ವೈರಸ್ ಎಂಟ್ರಿ:ರಾಜ್ಯದ ಗಡಿಭಾಗಕ್ಕೆ ಅಂಟಿಕೊಂಡಿರುವ ಮಹಾರಾಷ್ಟ್ರದಿಂದಲೇ ಡಬಲ್ ಮ್ಯುಟೇಷನ್ ವೈರಸ್ ಎಂಟ್ರಿಯಾಗಿರುವುದಂತು ಖಚಿತ.

ಯಾಕೆಂದರೆ, ಕಲ್ಬುರ್ಗಿ ಮತ್ತು ಬೆಂಗಳೂರಿನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಇನ್ನಷ್ಟು ಆತಂಕ ಹೆಚ್ಚಿಸಿದೆ. ಇತ್ತ ರಾಜ್ಯದಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ 30 ಸಾವಿರ ಗಡಿದಾಟುತ್ತಿದೆ. ಈ ಡಬಲ್ ಮ್ಯುಟೇಟ್ ವೈರಸ್​ನಿಂದಲೇ ಸೋಂಕು ಹರಡುತ್ತಿದ್ಯಾ ಎಂಬುದನ್ನ ಪತ್ತೆ ಮಾಡಲಾಗ್ತಿದೆ.

ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ಕನ್ಸಲ್ಟೆಂಟ್ ಡಾ. ಸಂಜೀವ್ ರಾವ್.

ಮ್ಯುಟೇಟ್ ವೈರಸ್ ದೇಹಕ್ಕೆ ಹೆಚ್ಚು ಹಾನಿ:ಮಣಿಪಾಲ್ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ಕನ್ಸಲ್ಟೆಂಟ್ ಆಗಿರುವ ಡಾ. ಸಂಜೀವ್ ರಾವ್ ಮಾತನಾಡಿದ್ದು, ಸಾಮಾನ್ಯವಾಗಿ ಕೋವಿಡ್ ಸೋಂಕು ದಿನ ಕಳೆದಂತೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತೆ.‌ ಡಬಲ್ ಮ್ಯುಟೇಟ್ ವೈರಸ್ ಬಹಳ ಶಕ್ತಿಶಾಲಿಯಾಗುತ್ತಿದ್ದು, ಬಹುಬೇಗ ಹರಡುತ್ತಿದೆ ಅಂತ ತಿಳಿಸಿದರು.

ಈ ಸೋಂಕು ಹೆಚ್ಚು ಶಕ್ತಿಶಾಲಿಯಾಗಿರುವ ಕಾರಣಕ್ಕೆ ಮುಖ್ಯವಾಗಿ ದೇಹಕ್ಕೆ, ಜೀವಕೋಶಗಳಿಗೆ ಹೆಚ್ಚು ಹಾನಿ ಮಾಡುತ್ತೆ ಅಂತ ಎಚ್ಚರಿಕೆಯನ್ನು ನೀಡಿದ್ದಾರೆ.

ಆರ್​ಟಿಪಿಸಿಆರ್ ನಲ್ಲೂ ಪತ್ತೆಯಾಗೋಲ್ಲ ಮ್ಯುಟೇಟ್ ವೈರಸ್:ಕಾಲ ಕಾಲಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆದಂತೆಲ್ಲ ಸಾಮಾನ್ಯವಾಗಿ ಪರೀಕ್ಷಾ ವಿಧಾನಗಳು ಬದಲಾಗಬೇಕಿದೆ. ಮೊದಲ ಸ್ವರೂಪದಲ್ಲಿ ಸೋಂಕು ನಂತರ ದಿನದಲ್ಲಿ ವಾತಾವರಣಕ್ಕೆ ತಕ್ಕಂತೆ ಹೊಸದಾಗಿ ರೂಪಾಂತರಗೊಳ್ಳಲಿದೆ.

ಹೀಗೆ ಪ್ರತಿ ಸಲ ರೂಪಾಂತರಗೊಂಡಾಗೆಲ್ಲ ಹೆಚ್ಚು ಶಕ್ತಿಶಾಲಿ ಆಗುತ್ತಾ ಹೋಗುತ್ತೆ. ಹೀಗಾಗಿ, ಸದ್ಯ ನಡೆಸುತ್ತಿರುವ ರ್ಯಾಪಿಡ್ ಆ್ಯಂಟಿಜನ್, ಆರ್​ಟಿಪಿಸಿಆರ್ ಟೆಸ್ಟ್​ನಿಂದಲೂ ಈಗಿನ ಡಬಲ್ ಮ್ಯುಟೇಟ್ B.1.617 ಸೋಂಕು ಪತ್ತೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ, ಸಿಟಿ ಸ್ಕ್ಯಾನ್​ನಂತಹ ಟೆಸ್ಟ್​ಗಳ ಮೊರೆ ಹೋಗಬಹುದು ಅಂತ ಸಲಹೆ ನೀಡಿದ್ದಾರೆ. ದೇಹಕ್ಕೆ ಒಂದೇ ರೀತಿಯ ಹಾನಿ ಮಾಡಿದರೂ, ಇದು ಈ‌ ಹಿಂದಿನ ವೈರಸ್​ಗಿಂತ ಬಹು ವೇಗವಾಗಿ ಹರಡುವ ಸಾಧ್ಯತೆ ಇರಲಿದೆ. ಮೊದಲು ಸೋಂಕಿನಿಂದ ಹಾನಿಯಾಗೋದು ಶ್ವಾಸಕೋಶಕ್ಕೆ, ಇದರಿಂದ ಉಸಿರಾಟಕ್ಕೆ ಪೆಟ್ಟು ಬೀಳುತ್ತೆ.

ಇದಾದ ಬಳಿಕ ಹೃದಯ, ಮೆದುಳಿನ ಅಂಗಗಳಿಗೆ ತೊಂದರೆ ಆಗುತ್ತೆ‌‌‌. ಇದರಿಂದ ಮತ್ತೆ ಸಾವಿನ ಸಂಖ್ಯೆ ಹೆಚ್ಚಾಗುತ್ತೆ. ಹೀಗಾಗಿ, ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಸಲಹೆಯನ್ನ ನೀಡಿದ್ದಾರೆ.

ಓದಿ:ರಾಜ್ಯ ಸರ್ಕಾರದ ಪಾಪದ ಫಲವನ್ನು ಜನರು ಅನುಭವಿಸಬೇಕಾಗಿರುವುದು ದುರಂತ : ದಿನೇಶ್ ಗುಂಡೂರಾವ್

ABOUT THE AUTHOR

...view details