ಕರ್ನಾಟಕ

karnataka

ETV Bharat / state

ತಾಯಂದಿರ ದಿನವೇ ತಂದೆ-ತಾಯಿಯನ್ನು ಹೊಡೆದು ಕೊಂದನಾ ನೀಚ ಮಗ? - ಬೆಂಗಳೂರಿನಲ್ಲಿ ಜೋಡಿ ಕೊಲೆ ಸುದ್ದಿ

ಆರ್​​ಬಿಐ ನಿವೃತ್ತ ನೌಕರ ಹಾಗೂ ಆತನ ಪತ್ನಿಯ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆಯ ಆರ್​ಬಿಐ ಲೇಔಟ್​​ನಲ್ಲಿ ನಡೆದಿದೆ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಮಗನೇ ತಂದೆ, ತಾಯಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.

double murder in Bengaluru
ಬೆಂಗಳೂರಿನಲ್ಲಿ ಜೋಡಿ ಕೊಲೆ

By

Published : May 11, 2020, 8:27 AM IST

Updated : May 11, 2020, 11:10 AM IST

ಬೆಂಗಳೂರು: ವಿಶ್ವ ತಾಯಂದಿರ ದಿನದಂದೇ ಹೆತ್ತ ತಂದೆ, ತಾಯಿಯನ್ನು ಮಗನೊಬ್ಬ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ನೀಚ ಮಗನನ್ನು ಕೋಣನಕುಂಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋವಿಂದಪ್ಪ ಮತ್ತು ಶಾಂತಮ್ಮ ಕೊಲೆಯಾದವರು‌.‌ ಕೋಣನಕುಂಟೆಯ ಆರ್​ಬಿಐ ಲೇಔಟ್​​ನಲ್ಲಿ ವಾಸವಾಗಿದ್ದ 65 ವರ್ಷದ ಗೋವಿಂದಪ್ಪ ‌ಆರ್​ಬಿಐ ನಿವೃತ್ತ ನೌಕರರಾಗಿದ್ದು ಹಲವು ವರ್ಷಗಳಿಂದ ಇದೇ ಏರಿಯಾದಲ್ಲಿ ವಾಸವಾಗಿದ್ದರು‌‌.

ಮೃತಪಟ್ಟ ದಂಪತಿಗೆ ನವೀನ್ ಎಂಬ ಮಗನಿದ್ದು, ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ವಿಚಾರಕ್ಕಾಗಿ ಮನೆಯಲ್ಲಿ ಅಗಾಗ ಗಲಾಟೆ ನಡೆಯುತಿತ್ತು. ಮನೆಯಿಂದ ಹೊರಗಡೆ ಹೋಗಿದ್ದ ಮಗ ರಾತ್ರಿ 9 ಗಂಟೆ ವೇಳೆ ಮದ್ಯದ ನಶೆಯಲ್ಲಿ ಮನೆಗೆ ಬಂದಿದ್ದಾನೆ. ಆಗ ಮತ್ತೆ ಕಲಹ ಉಂಟಾಗಿದ್ದು, ಈ ವೇಳೆ ಹರಿತವಾದ ಆಯುಧದಿಂದ ಹೊಡೆದು ಪೋಷಕರನ್ನು ನವೀನ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ. ಕುಡಿದ ಆಮಲಿನಲ್ಲಿದ್ದ ನವೀನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Last Updated : May 11, 2020, 11:10 AM IST

ABOUT THE AUTHOR

...view details