ಬೆಂಗಳೂರು:ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ಮನವಿಗೆ ಪಿಇಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೊರೆಸ್ವಾಮಿ ಹಾಗೂ ರಾಜಕಾರಣಿ ಎಂಟಿಬಿ ನಾಗರಾಜ್ ಸ್ಪಂದಿಸಿದ್ದಾರೆ.
ಕೋವಿಡ್ ಪರಿಹಾರ ನಿಧಿಗೆ ಪಿಇಎಸ್ ಸಂಸ್ಥೆ 3 ಕೋಟಿ, ಎಂಟಿಬಿ 1 ಕೋ.ರೂ ದೇಣಿಗೆ - ಎಂಟಿಬಿ ನಾಗರಾಜ್ 1 ಕೋ.ರೂ
ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡುವಂತೆ ಸಿಎಂ ಕೋರಿಕೆಗೆ ಸ್ಪಂದಿಸಿದ ಪಿಇಎಸ್ ಶಿಕ್ಷಣ ಸಂಸ್ಥೆ 3 ಕೋಟಿ.ರೂ ಹಾಗೂ ಎಂಟಿಬಿ ನಾಗರಾಜ್ 1 ಕೋಟಿ ರೂ ಧನಸಹಾಯ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ದೊರೆಸ್ವಾಮಿ, ಮುಖ್ಯಮಂತ್ರಿ ಭೇಟಿಯಾಗಿ 3 ಕೋಟಿ ರೂ.ಗಳ ಚೆಕ್ ನೀಡಿದರು. ಬಳಿಕ ಆಗಮಿಸಿದ ಮಾಜಿ ಸಚಿವ ಎಂಟಿಬಿ ನಾಗರಾಜ್ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದರು.