ಬೆಂಗಳೂರು :ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿಯವರ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಚಾಮರಾಜಪೇಟೆ ಚಿತಾಗಾರದಲ್ಲಿ ಸಕಲ ಸಿದ್ಧತೆ ನಡೆಸಿದೆ.
ದೊರೆಸ್ವಾಮಿ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಕೋವಿಡ್ ನಿಯಾಮವಳಿ ಹಿನ್ನೆಲೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದೆ, ಜಯದೇವ ಆಸ್ಪತ್ರೆಯಿಂದ ನೇರವಾಗಿ ಚಾಮರಾಜಪೇಟೆ ಚಿತಾಗಾರಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ.
ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ, ದೊರೆಸ್ವಾಮಿಯವರ ಮನೆ ಬಳಿ ಆಪ್ತರು, ಹೋರಾಟಗಾರರು ಜಮಾವಣೆಗೊಂಡು ದೊರೆಸ್ವಾಮಿ ಭಾವಚಿತ್ರಕ್ಕೆ ನಮಿಸಿ ದೊರೆಸ್ವಾಮಿ ಅಮರ್ ರಹೇ ಎಂದು ಘೋಷಣೆ ಕೂಗಿದ್ದಾರೆ.
ಓದಿ:"ನೀವಿಲ್ಲದೇ ಅನಾಥರಾಗಿದ್ದೇವೆ"… ದೊರೆಸ್ವಾಮಿ ನಿಧನಕ್ಕೆ ಸುಮಲತಾ, ಪ್ರಕಾಶ್ ರೈ ಕಂಬನಿ