ಬೆಂಗಳೂರು : ಅನೇಕ ಜನರಿಗೆ ಎರಡನೇ ಡೋಸ್ ಲಸಿಕೆ ಇನ್ನೂ ಸಿಕ್ಕಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಎರಡನೇ ಡೋಸ್ ಪಡೆಯಲು ವಿಳಂಬವಾದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಈಟಿವಿ ಭಾರತದ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ ಮಾಡಿದರು.
ಕೋವಿಡ್ 2 ನೇ ಡೋಸ್ ಲಸಿಕೆ ಪಡೆಯಲು ವಿಳಂಬವಾದ್ರೂ ಗಾಬರಿ ಬೇಡ : ಸಚಿವ ಸುಧಾಕರ್ ಈಗಾಗಲೇ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಪಡೆಯಲು 12 ರಿಂದ 16 ವಾರಗಳ ಅಂತರವನ್ನ ಸರ್ಕಾರ ನಿಗದಿಪಡಿಸಿದೆ. ಕೋವಿಶೀಲ್ಡ್ 2ನೇ ಲಸಿಕೆ ಪಡೆಯಲು ಹೆಚ್ಚು ಸಮಯಾವಕಾಶವಿದೆ.
ಕೋವ್ಯಾಕ್ಸಿನ್ ಎರಡನೇ ಲಸಿಕೆ ಪಡೆಯಲು 4 ರಿಂದ 6 ವಾರವಿರುವ ಕಾರಣ ಇನ್ನು ಎರಡನೇ ಲಸಿಕೆ ಪಡೆದಿಲ್ಲ ಎಂದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.
ಇದನ್ನೂ ಓದಿ:ಸೋಂಕು ತಡೆಗೆ ಲಾಕ್ಡೌನ್ ಮುಂದುವರೆಯಲಿ: ಮಾಜಿ ಸಚಿವ ರಮೇಶ ಜಾರಕಿಹೊಳಿ
ಒಂದೆರಡು ದಿನ ವಿಳಂಬವಾದರೂ ಲಸಿಕೆಯ ಸಾಮರ್ಥ್ಯ ಕಡಿಮೆ ಆಗಲ್ಲ. ಸದ್ಯಕ್ಕೆ ಎರಡನೇ ಲಸಿಕೆ ನೀಡಲು ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ಹೋಗಿ ಎರಡನೇ ಲಸಿಕೆ ಪಡೆಯಬಹುದು ಎಂದರು.