ಕರ್ನಾಟಕ

karnataka

ETV Bharat / state

ಕೆಲಸವಿಲ್ಲವೆಂದು ಬೆಂಗಳೂರು ಬಿಡಬೇಡಿ: ಸಚಿವ ಆರ್​​.ಅಶೋಕ್ ಮನವಿ - Bengalore latest news

ದಯವಿಟ್ಟು ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ. ಒಂದು ವೇಳೆ ಊರುಗಳಿಗೆ ಹೋಗಲು ನಿರ್ಧಾರ ಮಾಡಿದ್ದರೆ ಇವತ್ತೇ ಹೊರಟುಬಿಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

revenue minister R Ashok
ಕಂದಾಯ ಸಚಿವ ಆರ್. ಅಶೋಕ್

By

Published : Jul 13, 2020, 12:02 PM IST

ಬೆಂಗಳೂರು: ಕೆಲಸವಿಲ್ಲವೆಂದು ಯಾರೂ ಸಿಲಿಕಾನ್​ ಸಿಟಿಯನ್ನು ಬಿಟ್ಟು ಹೋಗಬೇಡಿ ಎಂದು ಕಂದಾಯ ಸಚಿವ ಆರ್.ಅಶೋಕ್, ತಮ್ಮ ತಮ್ಮ ಊರುಗಳಿಗೆ ಹೋಗುತ್ತಿರುವ ಜನರಿಗೆ ಮನವಿ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಯವಿಟ್ಟು ಯಾರೂ ಹೋಗಬೇಡಿ. ಒಂದು ವೇಳೆ ಊರುಗಳಿಗೆ ಹೋಗಲು ನಿರ್ಧಾರ ಮಾಡಿದ್ದರೆ ಇವತ್ತೇ ಹೊರಟುಬಿಡಿ ಎಂದು ತಿಳಿಸಿದ್ದಾರೆ.

ಸಿಎಂ‌ ನೇತೃತ್ವದಲ್ಲಿ ಡಿಸಿಗಳ ಸಭೆ ನಡೆಯುತ್ತದೆ. ಹೆಚ್ಚು ಪಾಸಿಟಿವ್ ಕೇಸ್​ಗಳು ಬಂದಿರುವ ಜಿಲ್ಲೆಗಳ ಕುರಿತು ಈಗ ಸಭೆ ಮಾಡಲಾಗುತ್ತದೆ. ಸ್ವಲ್ಪ ಕಡಿಮೆ ಕೇಸ್​​ಗಳು ಇರುವ ಜಿಲ್ಲೆಗಳ ಬಗ್ಗೆ ಸಂಜೆ ಸಭೆ ನಡೆಸಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಒಂದು ವಾರ ಲಾಕ್​ಡೌನ್​​ ಮಾಡಲಾಗಿದೆ. ಕೆಲ‌ ಜಿಲ್ಲೆಗಳಲ್ಲಿ ಕೂಡ ಪ್ರಕರಣ ಹೆಚ್ಚಾಗುತ್ತಾ ಇದೆ. ಈ ಬಗ್ಗೆ ಡಿಸಿಗಳ ಸಭೆ ಬಳಿಕ ಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಇಡೀ ರಾಜ್ಯ ಲಾಕ್​ಡೌನ್​​ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದಿನ ತೀರ್ಮಾನದಿಂದ ಸಾಕಷ್ಟು ದಿನಗೂಲಿ ನೌಕರರಿಗೆ ಸಮಸ್ಯೆ ಆಗಿದೆ. ಹಾಗಾಗಿ ಈ ಬಾರಿ ಏನೇ ತೀರ್ಮಾನ ಮಾಡಿದರೂ ಸೂಕ್ತ ಕ್ರಮ ಕೈಗೊ‌ಳ್ಳುತ್ತೇವೆ ಎಂದರು.

ABOUT THE AUTHOR

...view details