ಬೆಂಗಳೂರು:ಕ್ಯಾನ್ಸರ್ ರೋಗವನ್ನು ಕೋವಿಡ್ ಕಾರಣ ನೀಡಿ ನಿರ್ಲಕ್ಷಿಸಬೇಡಿ ಎಂದು ನಾಡಿನ ಜನತೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್ ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕ ಈ ಮನವಿ ಮಾಡಿರುವ ಅವರು, ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ; ಭಯ ಬೇಡ, ಅರಿವು ಮೂಡಿಸಿ. ಇತ್ತೀಚಿನ ಜೀವನಶೈಲಿಯಿಂದಾಗಿ ಕ್ಯಾನ್ಸರ್ ಹೆಚ್ಚುತ್ತಿದ್ದು, ಎಲ್ಲರಿಗೂ ಈ ರೋಗದ ಬಗ್ಗೆ ಅರಿವು ಬೇಕಾಗಿದೆ. ಪ್ರಸ್ತುತ ಎಲ್ಲೆಡೆ ಕೊರೋನಾ ಸೋಂಕು ಇದೆ. ಕ್ಯಾನ್ಸರ್ ಕಡೆಗಣಿಸಬೇಡಿ. ಮಾಸ್ಕ್ ಹಾಕಿಕೊಂಡು, ಅಂತರ ಕಾಪಾಡಿ ಎಂದಿದ್ದಾರೆ.