ಕರ್ನಾಟಕ

karnataka

ETV Bharat / state

ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್​ ಅಕೌಂಟ್ ಇಲ್ಲ.. ಸುಳ್ಳು ಪೋಸ್ಟ್​ ನಂಬದಿರಿ - ಕೆ.ಸಿವನ್ ಟ್ವಿಟ್ಟರ್

ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ ಎಂದು ಇಸ್ರೋ ಮಾಹಿತಿ ನೀಡಿದೆ.

ಕೆ.ಸಿವನ್

By

Published : Sep 9, 2019, 4:48 PM IST

ಬೆಂಗಳೂರು: ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ ಅಷ್ಟೇ ಅಲ್ಲ ಅವರ ಬಳಿ ಫೇಸ್​ಬುಕ್ ಅಥವಾ ವಾಟ್ಸ್​ ಆ್ಯಪ್ ಕೂಡ ಇಲ್ಲ, ಹೀಗೆಂದು ಇಸ್ರೋ ಹೇಳಿದೆ.

ಚಂದ್ರಯಾನ-2 ಬೆನ್ನಲ್ಲೆ ಟ್ವಿಟರ್​ನಲ್ಲಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಶುರುವಾಗಿವೆ. ಅಚ್ಚರಿಯ ವಿಷಯವೆಂದರೆ ಇಸ್ರೋ ಅಧ್ಯಕ್ಷ ಕೆ.ಸಿವನ್ ಟ್ವಿಟ್ಟರ್ ಹಾಗೂ ಫೇಸ್​ಬುಕ್​ ಇರಲಿ ವಾಟ್ಸ್​ಆ್ಯಪ್ ಸಹಿತ ಬಳಸುವುದಿಲ್ಲ. ವಿಕ್ರಮ್​ ಲ್ಯಾಂಡರ್ ಸಂಪರ್ಕ ಕಡಿತ ಬೆನ್ನಲ್ಲೆ ಟ್ವಿಟ್ಟರ್​ನಲ್ಲಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನ ಖಾತೆಗಳಿಂದ ಸುಳ್ಳು ಸುದ್ದಿಗಳು ಹಾಗೂ ಆಧಾರವಿಲ್ಲದ ಮಾಹಿತಿಗಳು ಹೊರಹೊಮ್ಮುತ್ತಿವೆ.

ಈಗಾಗಲೆ ಐದರಿಂದ ಆರು ನಕಲಿ ಟ್ವಿಟ್ಟರ್​ ಖಾತೆಗಳು ಪ್ರಚಲಿತದಲ್ಲಿದ್ದು, ದಿನಕ್ಕೆ ಐದರಿಂದ ಆರು ಟ್ವೀಟ್​ಗಳು ಹೊರಹೊಮ್ಮುತ್ತಿದೆ. ಈ ಎಲ್ಲಾ ನಕಲಿ ಟ್ವಿಟ್ಟರ್ ಖಾತೆಗಳಿಗೆ ಹಾಗೂ ಸುಳ್ಳು ಮಾಹಿತಿಗೆ ಕಡಿವಾಣ ಹಾಕಲು, ಇಸ್ರೋ ದೂರು ಕೊಡುವುದಕ್ಕೆ ಮುಂದಾಗಿದೆ.

ಇಸ್ರೋ ಟ್ವಿಟರ್ ಖಾತೆಯಿಂದ ಯಾವುದೇ ರೀತಿಯ ಮಾಹಿತಿ ಬಂದರೆ ಮಾತ್ರ ಅದನ್ನ ದೃಢೀಕರಿಸಬಹುದಾಗಿರುತ್ತದೆ.

ABOUT THE AUTHOR

...view details