ಕರ್ನಾಟಕ

karnataka

ETV Bharat / state

ಸಿಎಂ ಪರಿಹಾರ ನಿಧಿಗೆ ಹರಿದು ಬರುತ್ತಿದೆ ದೇಣಿಗೆಗಳ ಮಹಾಪೂರ - ಮುಖ್ಯಮಂತ್ರಿಗಳ ಪರಿಹಾರ ನಿಧಿ

ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯ ಪ್ರವಾಹವೇ ಹರಿದು ಬಂತು. ವಿಧಾನಸೌಧದಲ್ಲಿ ವಿವಿಧ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳ ನಿಯೋಗ ಸಿಎಂರನ್ನು ಭೇಟಿಯಾಗಿ ಚೆಕ್​ ನೀಡಿದರು.

ಪರಿಹಾರ ನಿಧಿಗೆ ದೇಣಿಗೆ

By

Published : Aug 22, 2019, 10:20 PM IST

ಬೆಂಗಳೂರು: ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯ ಪ್ರವಾಹವೇ ಹರಿದು ಬಂತು.

ವಿಧಾನಸೌಧದಲ್ಲಿ ವಿವಿಧ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳ ನಿಯೋಗ ಸಿಎಂರನ್ನು ಭೇಟಿಯಾಗಿ ಚೆಕ್​ ನೀಡಿದರು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ ರಾಮಚಂದ್ರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 17.51 ಲಕ್ಷ ರೂ. ದೇಣಿಗೆ ನೀಡಿದರು.

ಸಿಎಂ ಭೇಟಿಯಾಗಿ ಪರಿಹಾರ ನಿಧಿಗೆ ಚೆಕ್​ ವಿತರಣೆ

ಇನ್ನು ಸಿಎಂ ಅವರನ್ನು ಭೇಟಿಯಾದ ಕರ್ನಾಟಕ ಜೈನ್ ಅಸೋಸಿಯೇಷನ್ ನಿಯೋಗ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 16.25 ಲಕ್ಷ ರೂ. ದೇಣಿಗೆಯ ಚೆಕ್ ನೀಡಿದರು. ಇತ್ತ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ಸ್ವೀಕರಿಸಿದರು.

ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 15.48 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೆ, ಚೆಕ್/ ಡಿಡಿ ರೂಪದಲ್ಲಿ 4.13 ಕೋಟಿ ರೂ. ಸ್ವೀಕಾರವಾಗಿದೆ.

ಆಗಸ್ಟ್ 9 ರಿಂದ ಈ ವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಪ್ರವಾಹ ಪರಿಹಾರಕ್ಕಾಗಿ 34.43 ಕೋಟಿ ರೂ. ಸಂದಾಯವಾಗಿದೆ. ಅಲ್ಲದೆ ಈ ಅವಧಿಯಲ್ಲಿ 55.93 ಕೋಟಿ ರೂ. ಮೌಲ್ಯದ ಚೆಕ್/ ಡಿಡಿಗಳನ್ನು ಸ್ವೀಕರಿಸಲಾಗಿದೆ.

ABOUT THE AUTHOR

...view details