ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕರಗ ಉತ್ಸವಕ್ಕೆ ಅಗತ್ಯ ಅನುದಾನ ನೀಡಿ ನಮ್ಮ ನಾಡಿನ ಕಲೆ ಸಂಸ್ಕೃತಿ, ಸಂಪ್ರದಾಯ ಉಳಿಸಲು ರಾಜ್ಯ ಸರ್ಕಾರ ಬದ್ದ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕರಗ ಉತ್ಸವಕ್ಕೆ ಅನುದಾನ ನೀಡುವ ಕುರಿತಂತೆ ಸಚಿವ ಕಾರಜೋಳ ವಿಧಾನಪರಿಷತ್ ಅಧಿವೇಶನದಲ್ಲಿ ಮಾತನಾಡಿರುವುದು.. ಇಂದು ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಕರಗ ಆಚರಣೆ ವಿಚಾರ ಕುರಿತು ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಪ್ರಸ್ತಾಪಿಸಿದರು. ಇದಕ್ಕೆ ಲಿಖಿತ ಉತ್ತರ ಕೊಟ್ಟಿದ್ದಾರೆ. ಸಂಸ್ಕೃತಿ ಇಲಾಖೆಯ ಸಚಿವರು ಬರುವುದಿಲ್ಲ. ಮುಂದಿನ ವಾರ ನಿಮಗೆ ಉತ್ತರ ಕೊಡುತ್ತಾರೆ ಎಂದು ಸಭಾಪತಿ ತಿಳಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಿ.ಆರ್.ರಮೇಶ್, ಒಂದು ವಾರದಲ್ಲಿ 150ಕ್ಕೂ ಹೆಚ್ಚು ಕಡೆ ಕರಗ ಉತ್ಸವ ನಡೆಯುತ್ತವೆ. ಇಂತಹ ಸಂದರ್ಭಗಳಲ್ಲಿ ಸಚಿವರಿಗೆ ಅಸಡ್ಡೆ ಯಾಕೆ? ಬಿಸೋ ದೊಣ್ಣೆಯಿಂದ ಪಾರಾಗಲು ಸರ್ಕಾರ ಯತ್ನಿಸುತ್ತದೆ ಎಂದರು.
ಸಚಿವರು ಬಂದ ಮೇಲೆ ತೆಗೆದುಕೊಳ್ಳುತ್ತೇನೆ ಎಂದು ಸಭಾಪತಿ ಹೊರಟ್ಟಿ ತಿಳಿಸಿದರು. ನಂತರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕರಗ ಉತ್ಸವಕ್ಕೆ ಅನುದಾನ ನೀಡುವುದರ ಕುರಿತಂತೆ ಸರ್ಕಾರದ ಪರವಾಗಿ ಉತ್ತರಿಸಿದರು.
ಇದನ್ನೂ ಓದಿ:ವಿವಿಧ ವಸತಿ ಯೋಜನೆ: ನಾಳೆಯೇ ಆದಾಯ ಮಿತಿ ಹೆಚ್ಚಳ ಆದೇಶ - ಸಚಿವ ವಿ. ಸೋಮಣ್ಣ