ಬೆಂಗಳೂರು:ಲಾಲ್‌ಬಾಗ್‌ನಲ್ಲಿ ಇಷ್ಟು ದಿನ ಫ್ಲವರ್ ಶೋ ನೋಡೋಕೆ ಬರುತ್ತಿದ್ದ ಮಂದಿ, ಇವತ್ತು ಸಿಆರ್ಪಿಎಫ್ ತಂಡ ಆಯೋಜಿಸಿದ್ದ ಶ್ವಾನ ಪ್ರದರ್ಶನವನ್ನು ಬೆರಗುಗಣ್ಣುಗಳಿಂದ ವೀಕ್ಷಿಸಿದ್ರು. ಹಚ್ಚಹಸಿರಿಂದ ಕೂಡಿರುವ ಗಿಡಮರಗಳ ಸೌಂದರ್ಯ ಸವಿಯೋಕೆ ಬಂದವರಿಗೆ ಇಂದು, ಸಿಆರ್ಪಿಎಫ್ನ ಶ್ವಾನಗಳ ಸಮರಾಭ್ಯಾಸ ಪ್ರದರ್ಶನ ರೋಮಾಂಚನಗೊಳಿಸಿತು.
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಬಬಾಯ್ ಪಟೇಲ್ ಅವರ ಜನ್ಮದಿನ. ಇದರ ಅಂಗವಾಗಿ ಇದೇ ಮೊದಲ ಬಾರಿಗೆ ಸಿಆರ್ಪಿಎಫ್ ವತಿಯಿಂದ ಡಾಗ್ ಶೋ, ಶಸ್ತ್ರಗಳ ಶೋ, ಬ್ಯಾಂಡ್ ಶೋ ಹಾಗೂ ಉಚಿತ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿತ್ತು.
ಲಾಲ್ ಬಾಗ್ನಲ್ಲಿ ಶ್ವಾನಗಳ ಶೋ ಶ್ವಾನ ಪ್ರದರ್ಶನದಲ್ಲಿ ಒಂದು ಶ್ವಾನ ಬೆಂಕಿಯ ರಿಂಗ್ ಒಳಗಿನಿಂದ ಹೊರಗೆ ಜಂಪ್ ಮಾಡಿ ಸಾಹಸ ತೋರಿಸಿದರೆ, ಮತ್ತೊಂದು ಶ್ವಾನ 10 ಅಡಿ ಬಸ್ ಮೇಲಿಂದ ಜಿಗಿದು ಉಗ್ರರಿಂದ ತನ್ನ ಮಾಲೀಕನನ್ನ ಕಾಪಾಡುವ ಬಗೆಯನ್ನು ತೋರಿಸಿತು. ಜೊತೆಗೆ ಮಾಲೀಕನು ಮಾತು ಬಿಟ್ಟರೆ ಅಪರಿಚಿತರ ಆಜ್ಞೆಯನ್ನು ಪಾಲಿಸದಿರುವ ದೃಶ್ಯವನ್ನೆಲ್ಲ ಶ್ವಾನಗಳು ತೋರಿಸಿದ್ವು. ಶ್ವಾನಗಳ ಚುರುಕು ಬುದ್ದಿಗೆ, ಸಾಹಸಕ್ಕೆ ಅಲ್ಲಿದ್ದವರೆಲ್ಲ ಶಹಭಾಷ್ ಅಂತ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ರು.
ಇನ್ನು ಶ್ವಾನಗಳ ಪ್ರತಿಯೊಂದು ಆ್ಯಕ್ಟ್‌ನಲ್ಲೂ ಯುದ್ಧಕ್ಕೆ ಎಷ್ಟೆಲ್ಲಾ ತರಬೇತಿ ನೀಡಿರುತ್ತಾರೆ ಅನ್ನೊದ್ರ ಬಗ್ಗೆಯೂ ಮಾಹಿತಿ ನೀಡಿದರು. ಮತ್ತೊಂದು ವಿಶೇಷ ಅಂದ್ರೆ, ಈ ಶ್ವಾನಗಳು 5 ತಿಂಗಳು ಇರುವಾಗಲೇ ಅವುಗಳಿಗೆ ತರಬೇತಿ ಆರಂಭಿಸಲಾಗುತ್ತದೆ. ಆ ಶ್ವಾನ ಬೆಳೆದು ದೊಡ್ಡದಾದ ನಂತರ ಯುದ್ಧದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತೆ ಎಂದು ಸಿಆರ್ಪಿಎಫ್ನ ಡಿಐಜಿ ರವೀಂದ್ರ ತಿಳಿಸಿದರು.