ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದ ಸಂಬಂಧ ಬಿಗ್ ಬಾಸ್ ಜನಪ್ರಿಯತೆಯ ಆ್ಯಡಂ ಪಾಷಾನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿ ಮಾಹಿತಿ ಕಲೆಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವು ಪಾರ್ಟಿಗಳಲ್ಲಿ ಭಾಗವಹಿಸಿರುವ ಈತ ಅಲ್ಲಿಗೆ ಬರುವ ವ್ಯಕ್ತಿಗಳನ್ನು ಅನಿಕಾಗೆ ಪರಿಚಯ ಮಾಡಿಸುತ್ತಿದ್ದನಂತೆ.
ಅನಿಕಾಳಿಂದ ಡ್ರಗ್ಸ್ ಪಡೆದು ಗಿರಾಕಿಗಳಿಗೆ ಸಪ್ಲೈ ಮಾಡ್ತಿದ್ನಾ ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ?
ಎಲ್ಎಸ್ಡಿ ಟ್ಯಾಬ್ಲೆಟ್ ಅನ್ನು ಅನಿಕಾಳಿಂದ ತೆಗೆದುಕೊಂಡು ತದ ನಂತರ ಕೆಲ ಗಿರಾಕಿಗಳಿಗೆ ಸಪ್ಲೈ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಡ್ರಗ್ ಮಾಫಿಯಾ ಪ್ರಕರಣದ ಸಂಬಂಧ ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ
ಅಷ್ಟು ಮಾತ್ರವಲ್ಲದೇ, ಎಲ್ಎಸ್ಡಿ ಟ್ಯಾಬ್ಲೆಟ್ ಅನ್ನು ಅನಿಕಾಳಿಂದ ತೆಗೆದುಕೊಂಡು ನಂತರ ಕೆಲ ಗಿರಾಕಿಗಳಿಗೆ ಪೂರೈಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಆತನನ್ನು ಕರೆದು ವಿಚಾರಣೆ ಮಾಡಿ ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಷ್ಟು ಮಾತ್ರವಲ್ಲದೇ, ಅನಿಕಾಳ ಜೊತೆ ಇಂದಿರಾನಗರ, ಕೋರಮಂಗಲ ಹಾಗು ನಗರದ ಹೊರವಲಯದಲ್ಲಿ ನಡೆಯುವ ಫೇಜ್ ಥ್ರೀ ಪಾರ್ಟಿಗಳಲ್ಲಿ ಭಾಗಿಯಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನಂತೆ. ಸದ್ಯ ಆರೋಪಿಯನ್ನು ನವೆಂಬರ್ 3 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
TAGGED:
Sandalwood drug case updates