ಕರ್ನಾಟಕ

karnataka

ETV Bharat / state

30 ವರ್ಷದ ಸಮಸ್ಯೆಗೆ ಮುಕ್ತಿ...ದೊಡ್ಡಗಟ್ಟಿಗನಬ್ಬಿ ಗ್ರಾಮಕ್ಕೆ ಸಿಕ್ತು ಸ್ವಾತಂತ್ರ್ಯ

ಕಳೆದ 30 ವರ್ಷಗಳಿಂದ ರಸ್ತೆ ಸೌಲಭ್ಯವಿಲ್ಲದ ಗ್ರಾಮಕ್ಕೆ ಮಾಜಿ ಶಾಸಕ ಎಂಟಿಬಿ ನಾಗರಾಜ್​ ರಸ್ತೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಎಂಟಿಬಿ ನಾಗರಾಜ್

By

Published : Nov 6, 2019, 5:13 AM IST

ಹೊಸಕೋಟೆ:ಹೊಸಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಗನಬ್ಬಿ ಗ್ರಾಮದ ರಸ್ತೆಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಚಾಲನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂಟಿಬಿ ನಾಗರಾಜ್

ಹೊಸಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಗಟ್ಟಿಗನಬ್ಬಿ ಗ್ರಾಮ ಪಂಚಾಯಿತಿಯ ದೊಡ್ಡಗನಬ್ಬಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ರಸ್ತೆಯಿಲ್ಲದೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಆಶ್ವಾಸನೆ ನೀಡುವ ರಾಜಕೀಯ ಮುಖಂಡರು ಇಲ್ಲಿನ ಜನರ ಮತ ಪಡೆದು ಮತ್ತೆ ಇತ್ತ ಮುಖ ಮಾಡದೆ ಹೋಗುತ್ತಿದ್ದರು. ಇಂತಹ ಸಮಸ್ಯೆಯನ್ನು ಸ್ಥಳೀಯ ಮುಖಂಡ ಜನಾರ್ದನ್, ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರ ಗಮನಕ್ಕೆ ತಂದು ಸ್ಥಳೀಯರಾದ ರಾಹುಲ್ ಕುಟುಂಬ ಹಾಗೂ ಬಿಲ್ಡರ್ಸ್​ರಲ್ಲಿ ಮನವಿ ಮಾಡಿಕೊಂಡಿದ್ದರು. ಬಳಿಕ ಆ ಜಾಗ ಬಿಡಿಸಿ ದೊಡ್ಡಗಟ್ಟಿನಬ್ಬಿ ಪಂಚಾಯಿತಿ ಪಕ್ಕದಿಂದ ಹಿಂಭಾಗದ ಮೂಲಕ ಗ್ರಾಮಕ್ಕೆ ತಲುಪುವ ರಸ್ತೆ ಮಾಡಿಕೊಟ್ಟಿದ್ದಾರೆ.

ಇದೇ ವೇಳೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿ, ದೊಡ್ಡಗನಬ್ಬಿ ಗ್ರಾಮದ ಮುಖಂಡರು, 30 ವರ್ಷಗಳಿಂದ ಇಪ್ಪತ್ತು ಕುಟುಂಬಗಳು ರಸ್ತೆ ಇಲ್ಲದೆ ಕಾಲು ದಾರಿಯಲ್ಲಿ ಓಡಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಕೂಡಲೇ ರಸ್ತೆ ಹಾದುಹೋಗುವ ಜಮೀನಿನ ಮಾಲಿಕರನ್ನು ಕರೆದು ಅವರಿಗೆ ಮನವರಿಕೆ ಮಾಡಿ ಸುಮಾರು ಹನ್ನೆರಡು ಲಕ್ಷ ರೂ. ವೆಚ್ಚದಲ್ಲಿ ಒಂದು ರಸ್ತೆಯನ್ನು ಮಾಡಿಕೊಟ್ಟು ಅವರ ಸಮಸ್ಯೆಯನ್ನು ನಿವಾರಿಸಿದ್ದೇನೆ ಎಂದರು. ಮೂವತ್ತು ವರ್ಷಗಳಿಂದ ರಾಜಕೀಯ ಮಾಡಿ ಗ್ರಾಮಸ್ಥರಿಗೆ ತೊಂದರೆ ಆಗಿರುವುದು‌ ತುಂಬಾ ಬೇಸರವಾಗಿದೆ ಎಂದರು.

ಸಮಸ್ಯೆ ಬಗೆಹರಿಸಿದ ಎಂಟಿಬಿ ನಾಗರಾಜ್ ಹಾಗೂ ರಸ್ತೆಗೆ ಜಾಗ ನೀಡಿದ ಕುಟುಂಬದವರನ್ನು ಬೆಳ್ಳಿ ರಥದಲ್ಲಿ ಗ್ರಾಮಸ್ಥರು ಮೆರವಣಿಗೆ ನಡೆಸಿದ್ದಾರೆ. ರಾಜಕೀಯಕ್ಕೆ ತುತ್ತಾಗಿದ್ದ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮಾಜಿ ಶಾಸಕ ಎಂಟಿಬಿ ನಾಗರಾಜ್ ಜನರ ಮನಸ್ಸು ಗೆದ್ದಿದ್ದಾರೆ.

ABOUT THE AUTHOR

...view details