ಬೆಂಗಳೂರು:ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅಮಾನವೀಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗಿದ್ದು, ನಗರದ ಬೆಂಗಳೂರು ಮೆಡಿಕಲ್ ಕಾಲೇಜು ವೈದ್ಯರು ಇಂದು ಮೌನ ಪ್ರತಿಭಟನೆ ನಡೆಸಿದರು.
ಭಾರತದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಿ: ಕ್ಯಾಂಡಲ್ ಹಿಡಿದು ವೈದ್ಯರ ಮೌನ ಪ್ರತಿಭಟನೆ - Doctors silent protest in Bangalore
ನಾವೆಲ್ಲ ಎಂತಹ ಅದ್ಭುತ ಸಮಾಜದಲ್ಲಿ ಇದ್ದೇವೆ. ಬದುಕುತ್ತಿದ್ದೇವೆ ಅನ್ನೋದನ್ನ ಒಮ್ಮೆ ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಸಂವಿಧಾನವಿರುವ ದೇಶದಲ್ಲೇ ಹೆಣ್ಮುಮಕ್ಕಳಿಗೆ ರಕ್ಷಣೆ ಇಲ್ಲ. ಅದನ್ನ ಜೋರು ಧ್ವನಿಯಲ್ಲಿ ವಿರೋಧ ಮಾಡಲು ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವೈದ್ಯರ ಮೌನ ಪ್ರತಿಭಟನೆ
ಜಸ್ಟೀಸ್ ಫಾರ್ ಇಂಡಿಯಸ್ ಡಾಟರ್ಸ್ ಹೆಸರಲ್ಲಿ ಕ್ಯಾಂಡಲ್ ಹಿಡಿದು ನ್ಯಾಯಕ್ಕಾಗಿ ಒತ್ತಾಯಿಸಿದರು. ಯುಪಿಯಲ್ಲಿ ನಡೆದಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂತಹದ್ದು. ನಾವೆಲ್ಲ ಎಂತಹ ಅದ್ಭುತ ಸಮಾಜದಲ್ಲಿ ಇದ್ದೇವೆ. ಬದುಕುತ್ತಿದ್ದೇವೆ ಅನ್ನೋದನ್ನ ಒಮ್ಮೆ ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಸಂವಿಧಾನವಿರುವ ದೇಶದಲ್ಲೇ ಹೆಣ್ಮುಮಕ್ಕಳಿಗೆ ರಕ್ಷಣೆ ಇಲ್ಲ. ಅದನ್ನ ಜೋರು ಧ್ವನಿಯಲ್ಲಿ ವಿರೋಧ ಮಾಡಲು ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.