ಬೆಂಗಳೂರು :ಬಾಬಾ ರಾಮ್ದೇವ್ ವಿರುದ್ಧ ರಾಷ್ಟ್ರವ್ಯಾಪಿ ವೈದ್ಯರ ಪ್ರೊಟೆಸ್ಟ್ ಜೋರಾಗಿದೆ. ನಗರದ ಹಲವು ಆಸ್ಪತ್ರೆಗಳಲ್ಲಿ ಕೂಡ ಪಿಪಿಇ ಕಿಟ್ ಮೇಲೆ ಕಪ್ಪುಪಟ್ಟಿ ಧರಿಸಿ ವೈದ್ಯರು ಡ್ಯೂಟಿಗೆ ಹಾಜರಾಗಿದ್ದರು.
ಬಾಬಾ ರಾಮ್ದೇವ್ ವಿರುದ್ಧ ವೈದ್ಯರ ಆಕ್ರೋಶ : ಕಪ್ಪುಪಟ್ಟಿ ಧರಿಸಿ ಪ್ರೊಟೆಸ್ಟ್ - Doctors Outrage
ಅಲೋಪತಿ ವೈದ್ಯರನ್ನು ಆಯುರ್ವೇದ ವೈದ್ಯರನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದಿರುವ ಬಾಬಾ ರಾಮ್ ದೇವ್ ಹೇಳಿಕೆಗೆ ದೇಶಾದ್ಯಂತ ವೈದ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. #Arrestbabaramdev ಎಂಬ ಬೋರ್ಡ್ ಹಿಡಿದು ಸಾಂಕೇತಿಕ ಪ್ರತಿಭಟನೆಗೆ ನಗರದ ಹಲವು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಕೈಜೋಡಿಸಿದ್ದಾರೆ..

ಬಾಬಾ ರಾಮ್ದೇವ್
ಅಲೋಪತಿ ವೈದ್ಯರನ್ನು ಆಯುರ್ವೇದ ವೈದ್ಯರನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದಿರುವ ಬಾಬಾ ರಾಮ್ ದೇವ್ ಹೇಳಿಕೆಗೆ ದೇಶಾದ್ಯಂತ ವೈದ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. #Arrestbabaramdev ಎಂಬ ಬೋರ್ಡ್ ಹಿಡಿದು ಸಾಂಕೇತಿಕ ಪ್ರತಿಭಟನೆಗೆ ನಗರದ ಹಲವು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಕೈಜೋಡಿಸಿದ್ದಾರೆ.
ಬಾಬಾರಾಮದೇವ್ ಹೇಳಿಕೆಯಿಂದ ನಮ್ಮಂತ ವೈದ್ಯರಿಗೆ ಅವಮಾನವಾಗಿದೆ. ಇಂತಹ ಸಂದರ್ಭದಲ್ಲೂ ನಾವು ಎದೆಗುಂದದೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮವರನ್ನು ಕಳೆದುಕೊಂಡಿದ್ದೇವೆ.
ಕಪ್ಪು ಪಟ್ಟಿ ಧರಿಸಿ ವೈದ್ಯರುಗಳಿಂದ ಪ್ರೊಟೆಸ್ಟ್