ನೆಲಮಂಗಲ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ದೇಶದ ಅತೀ ದೊಡ್ಡ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪನೆ ಮಾಡಿದೆ.
ಬೆಂಗಳೂರು ಹೊರವಲಯ ತುಮಕೂರು ರಸ್ತೆಯ ಮಾದವಾರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ತಾತ್ಕಾಲಿಕ ಕೋವಿಡ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಕೋವಿಡ್ ಕೇರ್ ಕೇಂದ್ರದ ಉಸ್ತುವಾರಿಯನ್ನ ಬಿಬಿಎಂಪಿ ವಹಿಸಿಕೊಂಡಿದೆ. ಒಟ್ಟು 10,100 ಹಾಸಿಗೆ ಸಾಮಾರ್ಥ್ಯ ಹೊಂದಿದ್ದು, ಇಲ್ಲಿ ಕೊರೂನಾ ರೋಗ ಲಕ್ಷಣಗಳಿಲ್ಲದ ಸೋಂಕಿತರ ಆರೈಕೆ ಮಾಡಲಾಗುತ್ತೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಬಿಎಂಪಿಯಿಂದ ವೈದ್ಯರ ನೇಮಕಾತಿ ನಡೆದಿದೆ. ಮೊದಲ ತಂಡದಲ್ಲಿ 1002 ವೈದ್ಯರು ನೇಮಕವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಉತ್ಸುಕರಾಗಿದ್ದಾರೆ.
10,100 ರೋಗಿಗಳ ಆರೈಕೆ ಮಾಡಲು ಬಿಬಿಎಂಪಿ ವೈದ್ಯರು, ನರ್ಸ್ಗಳ ನೇಮಕಾತಿ ಆರಂಭಿಸಿದೆ. 300 ವೈದ್ಯರು, 500 ನರ್ಸ್ಗಳು, 300 ಸಹಾಯಕರು, 400 ಶುಚಿತ್ವ ಸಿಬ್ಬಂದಿ, 300 ಆರಕ್ಷಕರು, 300 ಮಾರ್ಷಲ್ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಮೊದಲ ತಂಡವಾಗಿ 100 ವೈದ್ಯರು ನೇಮಕವಾಗಿದ್ದು, ಕೋವಿಡ್ ಕೇರ್ ಕೇಂದ್ರದಲ್ಲಿ ಕೆಲಸಕ್ಕೆ ಹಾಜರಾಗಿ ತರಬೇತಿ ಪಡೆಯುತ್ತಿದ್ದಾರೆ.