ಬೆಂಗಳೂರು: 'ವೈದ್ಯೋ ನಾರಾಯಣೋ ಹರಿ' ಎಂಬ ಮಾತಿದೆ. ಆದರೆ, ಕಾಮುಕ ವೈದ್ಯನೊಬ್ಬ ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಹೀಗೆ ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ಕೀಚಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಹೊಟ್ಟೆ ನೋವು ಎಂದು ಹೋಗಿದ್ದ ಯುವತಿಯನ್ನು ಚಿಕಿತ್ಸೆ ನೀಡುವುದಾಗಿ ಬೆಡ್ ಮೇಲೆ ಮಲಗಿಸಿ ಡ್ರಿಪ್ಸ್ ಹಾಕಿದ್ದಾನೆ. ಈ ವೇಳೆ ಅಜ್ಜಿಯನ್ನ ಹೊರ ಕೂರುವಂತೆ ಹೇಳಿ ಕಾಮುಕ ವೈದ್ಯ ಯುವತಿಯ ಮೈ ಕೈ ಮುಟ್ಟಿ ಕುಚೇಷ್ಠೆ ಮೆರೆದಿದ್ದಾನೆ.
ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ನೀನು ಮೇಲೆ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತದೆ ಎಂದು ಹೆದರಿಸಿದ್ದಾನೆ. ಅಲ್ಲದೇ ಇಲ್ಲಿ ನಡೆದ ವಿಷಯವನ್ನು ಯಾರಿಗಾದರೂ ಹೇಳಿದರೆ ಸರಿ ಇರಲ್ಲ ಎಂದು ಹೆದರಿಸಿ ಮನೆಗೆ ಕಳಿಸಿದ್ದಾನೆ. ವೈದ್ಯನಿಗೆ ಹೆದರಿ ಯುವತಿ ಯಾರಿಗೂ ಹೇಳದೆ ಸುಮ್ಮನಿದ್ದಳು. ನಂತರ ಘಟನೆಯಿಂದ ಭೀತಿಗೊಂಡಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡಿತ್ತು.