ಬೆಂಗಳೂರು: ಬಂಧಿತ ಶಂಕಿತ ಉಗ್ರ, ಐ ಸ್ಪೆಷಲಿಸ್ಟ್ ಅಬ್ದುಲ್ ರೆಹಮಾನ್ ಉಗ್ರರ ಜೊತೆ ನಂಟು ಹೊಂದಿದ್ದ ಬಗ್ಗೆ ನಮಗೆ ಯಾವುದೇ ವಿಚಾರ ತಿಳಿದಿಲ್ಲ ಎಂದು ರಾಮಯ್ಯ ಆಸ್ಪತ್ರೆ ಆಡಳಿತ ಮಂಡಳಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಬಂಧಿತ ರೆಹಮಾನ್ಗೆ ಉಗ್ರ ನಂಟು ಇದ್ದ ಬಗ್ಗೆ ತಿಳಿದಿಲ್ಲ: ರಾಮಯ್ಯ ಆಸ್ಪತ್ರೆ ಸ್ಪಷ್ಟನೆ - ಉಗ್ರರೊಂದಿಗೆ ವೈದ್ಯನ ಸಂಪರ್ಕ
ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿ ಕಾರ್ಯನಿರ್ವಸುತ್ತಿದ್ದ ಅಬ್ದುಲ್ ರೆಹಮಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಶಂಕಿಸಲಾಗಿದ್ದು, ಎನ್ಐಎ ತನಿಖೆ ಮುಂದುವರೆಸಿದೆ.
ಈತ ಬಸವನಗುಡಿ ಬಳಿ ವಾಸ ಮಾಡುತ್ತಿದ್ದು, ಸರ್ಕಾರಿ ಕೋಟಾದಲ್ಲಿ ಸೀಟು ಗಿಟ್ಟಿಸಿದ್ದನು. ಹಾಗೇ 2014ರಲ್ಲಿ ಎಂಬಿಬಿಎಸ್ ಮುಗಿಸಿ, 2017ರಲ್ಲಿ ಎಂಎಸ್ ಮಾಡಿ ಕಣ್ಣಿನ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.
ಸದ್ಯ ಬೆಂಗಳೂರಿನ ಗುರಪ್ಪನಪಾಳ್ಯದ ಬಳಿ ಇರುವ ಆತನ ಸ್ನೇಹಿತ ಅಪ್ರೋಜ್ ನನ್ನು ಕೂಡ ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದೆ. ಇಬ್ಬರು ಕೂಡ ಸ್ನೇಹಿತರಾಗಿದ್ದು, ಹಲವಾರು ಚಟುವಟಿಕೆಯಲ್ಲಿ ಒಟ್ಡಿಗೆ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಮೂಲತ: ಬೆಂಗಳೂರಿನ ನಿವಾಸಿಯಾಗಿದ್ದು, ಟರ್ಕಿ, ಸಿರಿಯಾ ಉಗ್ರ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ನಗರದಲ್ಲಿ ಹಲವಾರು ಅಹಿತಕರ ಘಟನೆ ನಡೆಸಲು ಯೋಜನೆ ಮಾಡಿದ್ದ. ಸದ್ಯ ರಾಷ್ಟ್ರೀಯ ತನಿಕಾ ದಳ ಹೆಚ್ಚಿನ ವಿಚಾರಣೆ ಕೈಗೆತ್ತಿಕೊಂಡಿದೆ. ಈತ ವೃತ್ತಿಯಲ್ಲಿ ವೈದ್ಯನಾಗಿದ್ದರೂ ತಂತ್ರಜ್ಞಾನದ ಅರಿವು ಪಡೆದಿದ್ದ ಎನ್ನಲಾಗಿದೆ. ಈತನಿಗೆ ಸಂಬಂಧಿಸಿದ ಮೂರು ಕಡೆ ಎನ್ಐಎ ಶೋಧ ಕಾರ್ಯ ನಡೆಸಿದೆ.