ಬೆಂಗಳೂರು: ಖಾಸಗಿ ಆಸ್ಪತ್ರೆಯ ನ್ಯೂರೋ ಸೆಂಟರ್ನಲ್ಲಿ ಹಿರಿಯ ವೈದ್ಯನಾಗಿ ಕೆಲಸ ಮಾಡುತ್ತಿರುವ ಡಾಕ್ಟರ್ವೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಪ್ರೀತಿ ನೆಪದಲ್ಲಿ ಅತ್ಯಾಚಾರ ಆರೋಪ: ಮದುವೆ ಆಗು ಅಂದಿದ್ದಕ್ಕೆ ವರಸೆ ಬದಲಿಸಿದ ವೈದ್ಯ! - bangalore crime news
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ, ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಮದುವೆ ಆಗು ಅಂದ್ರೆ ವರಸೆ ಬದಲಿಸಿದ್ದಾರೆ ಎಂದು ಈಗ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.
![ಪ್ರೀತಿ ನೆಪದಲ್ಲಿ ಅತ್ಯಾಚಾರ ಆರೋಪ: ಮದುವೆ ಆಗು ಅಂದಿದ್ದಕ್ಕೆ ವರಸೆ ಬದಲಿಸಿದ ವೈದ್ಯ! Doctor rape on girl in name of love](https://etvbharatimages.akamaized.net/etvbharat/prod-images/768-512-8955007-thumbnail-3x2-nin.jpg)
ನ್ಯೂರೋ ಸೆಂಟರ್ನಲ್ಲಿ ಟ್ರೈನಿಯಾಗಿದ್ದ ಯುವತಿಯನ್ನ ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾರೆ. ಇದಾದ ನಂತರ ನಿನ್ನನ್ನೇ ಮದುವೆಯಾಗುತ್ತೇನೆ ಯಾರಿಗೂ ಹೇಳಬೇಡ ಎಂದು ಹೇಳಿ ಸುಮ್ಮನಿರಿಸಿದ್ದಾರೆ. ಆದರೆ, ಯುವತಿ ಮದುವೆ ಆಗು ಎಂದು ಹಠಕ್ಕೆ ಬಿದ್ದಾಗ ವೈದ್ಯ ತನ್ನ ವರಸೆ ಬದಲಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಆದರೆ, ಸಿದ್ದಾಪುರ ಪೊಲೀಸರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾಳೆ.
ಸದ್ಯ ಡಿಸಿಪಿ ಮೊರೆ ಹೋಗಿರುವ ಯುವತಿ ತನಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದ್ದಾಳೆ. ದೈಹಿಕ ಸಂಪರ್ಕಕ್ಕೆ ಆಗಾಗ್ಗೆ ನನಗೆ ಒತ್ತಾಯ ಮಾಡಿದ್ದಲ್ಲದೆ, ಅಸಭ್ಯ ವಿಡಿಯೋಗಳನ್ನ ನನ್ನ ಮೊಬೈಲ್ಗೆ ವೈದ್ಯ ಕಳುಹಿಸುತ್ತಿದ್ದರು. ಇದರಿಂದ ಹಿಂಸೆಯಾಗಿ ನಾನು ಆಸ್ಪತ್ರೆಯ ಆಡಳಿತ ಮಂಡಳಿಗೂ ತಿಳಿಸಿದ್ದೆ. ಆದರೆ, ಅವರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.