ಬೆಂಗಳೂರು: ಸ್ಟೂಡೆಂಟ್, ಬಿಸಿನೆಸ್ ಸೇರಿದಂತೆ ವಿವಿಧ ವೀಸಾದಡಿ ಭಾರತಕ್ಕೆ ಬರುವ ವಿದೇಶಿಯರು ಡ್ರಗ್ಸ್ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ಸೈಬರ್ ಕ್ರೈಂ, ಗಡುವು ಮೀರಿ ಅಕ್ರಮ ವಾಸ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ.
ಕಳೆದ 11 ತಿಂಗಳಲ್ಲಿ 3398 ಕೇಸ್‌ಗಳಲ್ಲಿ 4480 ಆರೋಪಿಗಳನ್ನು ಬಂಧಿಸಲಾಗಿದೆ. ಟೂರಿಸ್ಟ್, ಮೆಡಿಕಲ್ ವಿಸಾ, ಸ್ಟೂಡೆಂಟ್ ವಿಸಾದಡಿ ಭಾರತಕ್ಕೆ ಬರುವ ವಿದೇಶಿಯರು ವಿಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಯೂರಿರುವ 601 ಮಂದಿ ಪೈಕಿ 467 ಅಕ್ರಮವಾಗಿ ಅಫ್ರಿಕಾದವರೇ ಹೆಚ್ಚಾಗಿದ್ದಾರೆ.
ಈ ಪೈಕಿ ನೈಜೀರಿಯಾ 120 ಮಂದಿ ಅಕ್ರಮವಾಗಿ ನೆಲೆಯೂರಿದರೆ ಕಾಂಗೋ 91, ಸುಡಾನ್ 77 ಯೆಮನ್ 59, ಉಗಾಂಡ 25 ಮಂದಿ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳು ಕಾನೂನುಬಾಹಿರವಾಗಿ ವಾಸ್ತವ್ಯ ಹೂಡಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ 571 ವಿದೇಶಿಯರನ್ನು ಬಂಧಿಸಲಾಗಿದೆ.
ಡ್ರಗ್ಸ್ ಕೇಸ್‌ಗಳಲ್ಲಿ ಹೆಚ್ಚು ವಿದೇಶಿಯರ ಬಂಧನ: ಪೂರ್ವ ಆಫ್ರಿಕಾದ ಕೆಲ ದೇಶಗಳಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತು ಸೇವನೆ ಹಾಗೂ ಮಾರಾಟ ಸಾಮಾನ್ಯವಾಗಿದೆ. ಡ್ರಗ್ಸ್ ಚಟ ಅಂಟಿಸಿಕೊಂಡೇ ವಿವಿಧ ಕಾರಣಗಳಿಗಾಗಿ ಬರುವ ಭಾರತಕ್ಕೆ ಎಡತಾಕುವ ವಿದೇಶಿಯರು ಇಲ್ಲಿನ ಕಾನೂನಿಗೆ ತಲೆಬಾಗದೆ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಳ್ಳುವವರ ಪ್ರಮಾಣ ಅಧಿಕವಾಗಿದೆ.