ಬೆಂಗಳೂರು:ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕದ ಬಗ್ಗೆ ನಿಮ್ಮ ಈ ಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದೆ.
ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಲಿದೆ. ಒಂದು ಕಡೆ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ಚುನಾವಣಾ ಆಯೋಗ ಮತದಾನದ ಜಾಗೃತಿ ಕೆಲಸದಲ್ಲಿ ತೊಡಗಿದೆ. ಯಾರೊಬ್ಬರೂ ಮತದಾನದಿಂದ ವಂಚಿತರಾಗಬೇಡಿ ಅಂತಾ ಮನವಿ ಮಾಡುತ್ತಿದೆ. ಇವೆಲ್ಲದರ ನಡುವೆ ನಮ್ಮ ಜನರಿಗೆ ಮತದಾನ ಯಾವಾಗ ಅಂತಾ ಗೊತ್ತಿದೆಯಾ ಗೊತ್ತಿಲ್ವಾ ಅಂತಾ ಈ ಟಿವಿ ಭಾರತ ಒಂದು ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ಹಿರಿಯ ನಾಗರಿಕರು ಸರಿಯಾದ ದಿನವನ್ನ ತಿಳಿಸಿದರೆ, ಇನ್ನು ಕೆಲವರು ನಮ್ಮ ಕ್ಷೇತ್ರದ ದಿನಾಂಕ ಗೊತ್ತು ಅಷ್ಟೇ ಅಂತಾ ಉತ್ತರ ಕೊಟ್ಟಿದ್ದಾರೆ.