ಬೆಂಗಳೂರು:ಲಾಕ್‌ಡೌನ್ ಅವಧಿಯಲ್ಲಿ ಹೈಕೋರ್ಟ್ನಲ್ಲಿ ದಾಖಲಾದ ಪ್ರಕರಣಗಳೆಷ್ಟು ಎಂಬ ವಕೀಲ ಸಮುದಾಯದ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ. ಹಾಗೆಯೇ ಈ ಅವಧಿಯಲ್ಲಿ ಎಷ್ಟು ಪ್ರಕರಣಗಳು ದಾಖಲಾದವು, ಎಷ್ಟು ಪ್ರಕರಣಗಳನ್ನು ವಿಚಾರಣೆ ನಡೆಸಲಾಯಿತು ಮತ್ತು ವಿಚಾರಣೆಯಾದ ಪ್ರಕರಣಗಳಲ್ಲಿ ಎಷ್ಟು ಇತ್ಯರ್ಥಗೊಂಡವು ಎಂಬುದರ ಬಗ್ಗೆ ಹೈಕೋರ್ಟ್ ಮಾಹಿತಿ ನೀಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಹೈಕೋರ್ಟ್ ನಡೆಸಿದ ಕಲಾಪಗಳ ಕುರಿತು ರಿಜಿಸ್ಟ್ರಾರ್ ಜನರಲ್ ಮಾಹಿತಿ ನೀಡಿದ್ದಾರೆ. ಅದರಂತೆ ಮಾರ್ಚ್ 26ರಿಂದ ಮೇ 31ರ ವರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಮತ್ತು ಧಾರವಾಡ ಪೀಠಗಳಲ್ಲಿ ಒಟ್ಟು 1,973 ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ ಫಿಸಿಕಲ್ ಫೈಲಿಂಗ್ ಮೂಲಕ 788 ಪ್ರಕರಣಗಳು ದಾಖಲಾಗಿದ್ದರೆ, 1,185 ಪ್ರಕರಣಗಳು ಇ-ಫೈಲಿಂಗ್ ಮೂಲಕ ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನು ನ್ಯಾಯಮೂರ್ತಿಗಳು ಕೋವಿಡ್-19 ಸಮಸ್ಯೆ ಬದಿಗಿಟ್ಟು 1,336 ಪ್ರಕರಣಗಳನ್ನು ವಿಚಾರಣೆ ನಡೆಸಿ ಒಟ್ಟು 532 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.