ಕರ್ನಾಟಕ

karnataka

ETV Bharat / state

ಮುಂದಿನ ವಿಚಾರಣೆವರೆಗೂ ಅರ್ಜಿದಾರರ ನಿವೇಶನ ತೆರವು ಮಾಡಬೇಡಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ - ಬಿಬಿಎಂಪಿ

ಬೆಂಗಳೂರಿನ ಮುನ್ನೇಕೊಳಲಿನ ವೀರಪ್ಪರೆಡ್ಡಿ ಬಡಾವಣೆಯಲ್ಲಿರುವ ಮನೆಯ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​, ಮುಂದಿನ ವಿಚಾರಣೆವರೆಗೂ ತೆರವು ಮಾಡಬಾರದು ಎಂದು ಬಿಬಿಎಂಪಿ ನಿರ್ದೇಶನ ನೀಡಿದೆ.

do-not-vacate-without-giving-notice-high-court-instructs-bbmp
ನೋಟಿಸ್​ ನೀಡದೆ ತೆರವು ಮಾಡಬಾರದು : ​ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

By

Published : Sep 14, 2022, 9:13 PM IST

Updated : Sep 14, 2022, 10:34 PM IST

ಬೆಂಗಳೂರು:ನಗರದ ಮುನ್ನೇನಕೊಳಲಿನ ಸರ್ವೇ 35(1ಬಿ)ಯಲ್ಲಿರುವ ಮನೆಯನ್ನು ಮುಂದಿನ ವಿಚಾರಣೆ ವರೆಗೂ ತೆರವು ಮಾಡಬಾರದು ಎಂದು ಹೈಕೋರ್ಟ್ ಬಿಬುಎಂಪಿಗೆ ಸೂಚಿಸಿದೆ.

ಬೆಂಗಳೂರಿನ ಮುನ್ನೇನಕೊಳಲಿನ ವೀರಪ್ಪರೆಡ್ಡಿ ಬಡಾವಣೆಯಲ್ಲಿರುವ ಮನೆಯ ಮಾಲೀಕ ಎನ್​.ಅನೀಲ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೇಮಂತ್​ ಚಂದನಗೌಡ ಈ ಸೂಚನೆ ನೀಡಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಿ.ಕಾರ್ತಿಕ್​ ವಾದ ಮಂಡಿಸಿ, ಅರ್ಜಿದಾರರು ಕಳೆದ 50 ವರ್ಷದ ಹಿಂದೆ ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಈವರೆಗೂ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಆರೋಪವಿಲ್ಲ. ಅಲ್ಲದೆ, ಕಳೆದ ಮೂರು ತಿಂಗಳ ಹಿಂದೆ ಸರ್ವೇ ನಡೆಸಿದ್ದ ಬಿಬಿಎಂಬಿ ಕಂದಾಯ ವಿಭಾಗದ ಅಧಿಕಾರಿಗಳು ಸರ್ವೇ 35(1ಬಿ)ರಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಇದು ಖಾಸಗಿ ಸ್ವತ್ತು ಎಂಬುದಾಗಿ ತಿಳಿಸಿದ್ದರು.

ಆದರೆ, ಸೆ.13ರಂದು(ಮಂಗಳವಾರ) ಸರ್ವೇ ನಡೆಸಿರುವ ಅಧಿಕಾರಿಗಳು ನಿವೇಶನದಲ್ಲಿ ಮನೆ ನಿರ್ಮಾಣವಾಗಿರುವ ಜಾಗದಲ್ಲಿ ಶೇ.60ರಷ್ಟು ಭಾಗ ರಾಜಕಾಲುವೆ ಒತ್ತುವರಿಯಾಗಿದೆ ಎಂಬುದಾಗಿ ಗುರುತಿಸಿದ್ದಾರೆ. ಈ ಸಂಬಂಧ ಪ್ರಶ್ನಿಸಿದರೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ವಾದ ಮಂಡಿಸಿದರು.

ನೋಟಿಸ್​ ನೀಡದೆ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಕಾನೂನು ಬಾಹಿರ ಮತ್ತು ಸಂವಿಧಾನದ ಪರಿಚ್ಛೇದ 14(ಸಮಾನತೆ),19(ಸ್ವಾತಂತ್ರ್ಯ), ಮತ್ತು 21(ಬದುಕುವ ಹಕ್ಕು)ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದವನ್ನು ಆಲಿಸಿದ ನ್ಯಾಯಪೀಠ, ಅರ್ಜಿದಾರರ ನಿವೇಶನವನ್ನು ಮುಂದಿನ ವಿಚಾರಣೆವರೆಗೂ ತೆರವು ಮಾಡಬಾರದು ಎಂದು ಸೂಚನೆ ನೀಡಿದ ಹೈಕೋರ್ಟ್​ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ:13 ವಿಐಪಿ ಅಕ್ರಮ ವಿಲ್ಲಾಗಳ ತೆರವು ಕಾರ್ಯ: ಕಂದಾಯ ಇಲಾಖೆ ಆದೇಶಕ್ಕೆ ಕಾಯುತ್ತಿರುವ ಪಾಲಿಕೆ ಅಧಿಕಾರಿಗಳು

Last Updated : Sep 14, 2022, 10:34 PM IST

ABOUT THE AUTHOR

...view details