ಕರ್ನಾಟಕ

karnataka

ETV Bharat / state

ಪಟಾಕಿ ಸಿಡಿಸದೆ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ: ಸಚಿವ ಬೈರತಿ ಬಸವರಾಜ್ - Eco-friendly Diwali with Lighted Lights

ಕೊರೊನಾ ಈಗಾಗಲೇ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದರ ಮಧ್ಯೆ ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಿಂದ ಜನರಿಗೆ ಇನ್ನಷ್ಟು ಆರೋಗ್ಯ ಹದಗೆಡುತ್ತದೆ ಆದ್ದರಿಂದ ದೀಪ ಹಚ್ಚಿ ದೀಪಾವಳಿ ಹಬ್ಬ ಆಚರಿಸಿ ಎಂದು ಸಚಿವ ಬೈರತಿ ಬಸವರಾಜ್ ತಿಳಿಸಿದರು.

birathi-basavaraj
ಸಚಿವ ಬೈರತಿ ಬಸವರಾಜ್

By

Published : Nov 11, 2020, 8:39 PM IST

ಬೆಂಗಳೂರು: ಪಟಾಕಿ ಸಿಡಿಸದೆ ದೀಪಗಳನ್ನು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಸಚಿವ ಬೈರತಿ ಬಸವರಾಜ್ ತಿಳಿಸಿದರು.

ಹೊರಮಾವಿನ ಬಂಜಾರ ಬಡಾವಣೆಯಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಸಚಿವ ಬೈರತಿ ಬಸವರಾಜ್ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕೊರೊನಾ ಈಗಾಗಲೇ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದರ ಮಧ್ಯೆ ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಿಂದ ಜನರಿಗೆ ಇನ್ನಷ್ಟು ಆರೋಗ್ಯ ಹದಗೆಡುತ್ತದೆ ಆದ್ದರಿಂದ ದೀಪ ಹಚ್ಚಿ ದೀಪಾವಳಿ ಹಬ್ಬ ಆಚರಿಸಿ ಎಂದರು.

ರಸ್ತೆ ಡಾಂಬರೀಕರಣಕ್ಕೆ ಸಚಿವ ಬೈರತಿ ಬಸವರಾಜ್ ಚಾಲನೆ

ಗುಣಮಟ್ಟದ ರಸ್ತೆ ಡಾಂಬರು ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಬೈರತಿ ಬಸವರಾಜ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯದಿರಿ ಎಂದರು. ರಾಜ್ಯದಲ್ಲಿ ಎರಡು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಯಡಿಯೂರಪ್ಪ ಅವರಿಗೆ ಹೆಚ್ಚಿನ ಬಲ ತುಂಬಿಸಲಾಗಿದೆ. ಕ್ಷೇತ್ರದಲ್ಲಿ ಎರಡು ತಿಂಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಮುಗಿಸಿಕೊಡುವುದಾಗಿ ಹೇಳಿದರು.

ABOUT THE AUTHOR

...view details