ಬೆಂಗಳೂರು: ಅಂಗನವಾಡಿ ಮತ್ತು ಅಂಗನವಾಡಿಯಿಂದ ಹೊರಗುಳಿದ 0-6 ವರ್ಷದ ಮಕ್ಕಳ ವೈದ್ಯಕೀಯ ತಪಾಸಣೆಗೆ ಸರ್ಕಾರ ಸೂಚಿಸಿದ್ದು, ಅಪೌಷ್ಠಿಕ ಮಕ್ಕಳಿಗೆ ಸಿಗಬೇಕಾದ ಸವಲತ್ತು ನೀಡಲು 21-06-2020 ರಿಂದ ಒಂದು ವಾರ ಕಾಲ ಅಂಗನವಾಡಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಲು ತಿಳಿಸಿದೆ. ಆದರೆ, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದೇ ಮಕ್ಕಳ ಆರೋಗ್ಯ ತಪಾಸಣೆ ಅಗತ್ಯವಿದೆಯಾ ಎಂದು ಅಂಗನವಾಡಿ ಕಾರ್ಯಕರ್ತೆಯರ ಎಐಟಿಯುಸಿ ಸಂಘಟನೆ ಪ್ರಶ್ನಿಸಿದೆ.
ಈಗ ಮಕ್ಕಳ ಆರೋಗ್ಯ ತಪಾಸಣೆ ಅಗತ್ಯವಿದೆಯಾ?: ಎಐಟಿಯುಸಿ ಸಂಘಟನೆ ಪ್ರಶ್ನೆ - AITUC Organization
ಅಂಗನವಾಡಿ ಮತ್ತು ಅಂಗನವಾಡಿಯಿಂದ ಹೊರಗುಳಿದ 0-6 ವರ್ಷದ ಮಕ್ಕಳ ವೈದ್ಯಕೀಯ ತಪಾಸಣೆಗೆ ಸರ್ಕಾರ ಸೂಚಿಸಿದ್ದು, ಕೋವಿಡ್ ಹರಡುತ್ತಿರುವ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದೇ ಮಕ್ಕಳ ಆರೋಗ್ಯ ತಪಾಸಣೆ ಅಗತ್ಯವಿದೆಯಾ ಎಂದು ಅಂಗನವಾಡಿ ಕಾರ್ಯಕರ್ತೆಯರ ಎಐಟಿಯುಸಿ ಸಂಘಟನೆ ಪ್ರಶ್ನಿಸಿದೆ.
ಈ ಹಿಂದೆ ಪ್ರತಿ ಮಕ್ಕಳ ಮನೆ - ಮನೆಗೆ ಪೌಷ್ಠಿಕ ಆಹಾರ ತಲುಪಿಸಲಾಗಿತ್ತು. ಆದರೆ, ಈಗ ಅಪೌಷ್ಠಿಕ ಮಕ್ಕಳನ್ನು ಗುರುತಿಸಲು ಪೋಷಕರ ಜೊತೆ ಮಕ್ಕಳನ್ನೂ ಅಂಗನವಾಡಿಗೆ ಕರೆತಂದು, ತಪಾಸಣೆ ಮಾಡುತ್ತಿರುವುದು ಅಪಾಯಕಾರಿ. ಅಂಗನವಾಡಿಯನ್ನು ಸೋಂಕು ಮುಕ್ತಗೊಳಿಸಲು, ಅಂತರ ಕಾಪಾಡುವಂತೆ ಉಚಿತ ಆಸನ ವ್ಯವಸ್ಥೆಗಳನ್ನು ಮಾಡಲು ಸೌಲಭ್ಯದ ಕೊರತೆ ಇದೆ.
ಇನ್ನು ಅಂಗನವಾಡಿಗಳಲ್ಲಿ ನೀರಿನ ಸಮಸ್ಯೆ ಇದೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ತೂಕ ಲೆಕ್ಕ ಹಾಕುವಾಗ, ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ಆದರೆ, ಇದರ ವ್ಯವಸ್ಥೆ ಮಾಡಿಲ್ಲ. ಇದ್ಯಾವುದನ್ನೂ ಕೊಡದೇ ಆರೋಗ್ಯ ತಪಾಸಣೆಗೆ ಸುತ್ತೋಲೆ ಹೊರಡಿಸಿರುವುದು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡಿದ ಹಾಗೆ ಎಂದು ಎಐಟಿಯುಸಿ ಅಧ್ಯಕ್ಷೆ ಜಯಮ್ಮ ಈಟಿವಿ ಭಾರತಕ್ಕೆ ತಿಳಿಸಿದರು.