ಕರ್ನಾಟಕ

karnataka

ETV Bharat / state

ಡಿ.ಕೆ.ಸುರೇಶ್​​​​ಗೆ ಇಡಿಯಿಂದ ಯಾವುದೇ ನೋಟಿಸ್​​​​​​​​​​​ ಬಂದಿಲ್ಲ: ಉಗ್ರಪ್ಪ - DKSuresh has not get any notice by ED .

ಸಂಸದ ಡಿ.ಕೆ.ಸುರೇಶ್​ಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿಲ್ಲ. ನನಗೆ ಅವರೇ ಈ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.

ವಿ.ಎಸ್.ಉಗ್ರಪ್ಪ

By

Published : Oct 1, 2019, 11:13 PM IST

ಬೆಂಗಳೂರು: ಸಂಸದ ಡಿ.ಕೆ.ಸುರೇಶ್​ಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿಲ್ಲ. ನನಗೆ ಅವರೇ ಈ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.

ಡಿ.ಕೆ.ಸುರೇಶ್​​ಗೆ ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ: ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಗ್ರಪ್ಪ, ಡಿ.ಕೆ.ಸುರೇಶ್​​ಗೆ ಜಾರಿ ನಿರ್ದೇಶನಾಲಯದ ನೋಟಿಸ್ ಬಂದಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಆದರೆ ನಾನು ಇಂದು ಮಧ್ಯಾಹ್ನ ಅವರೊಂದಿಗೆ ಮಾತನಾಡಿದ್ದು, ಇಂತಹ ಯಾವುದೇ ನೋಟಿಸ್ ಬಂದಿಲ್ಲ ಎಂದು ಅವರು ದೃಢಪಡಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಜನಪರ ಕಾಳಜಿ ಇಲ್ಲ. ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ವಿಧದಲ್ಲಿಯೂ ಆಡಳಿತ ನಡೆಸಲಾಗದೆ ವಿಫಲಗೊಂಡಿದೆ. ಈ ಸಂದರ್ಭ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಬಿಜೆಪಿಯೇತರ ಪಕ್ಷಗಳ ನಾಯಕರ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಜರಿದರು.

ಈಗಾಗಲೇ ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಂಡು ಬಂಧಿಸಿದೆ. ರಾಜಕೀಯದ ಅನುಕೂಲದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸುರೇಶ್​ಗೂ ನೋಟಿಸ್ ಜಾರಿಗೊಳಿಸಿದರೆ ಅಚ್ಚರಿಯಿಲ್ಲ. ಬಿಜೆಪಿ ಸೇಡಿನ ರಾಜಕೀಯದಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸುವ ಬದಲು ರಾಜ್ಯದ ಹಾಗೂ ರಾಷ್ಟ್ರದ ಜನತೆಯ ಸಮಸ್ಯೆಯತ್ತ ಸರ್ಕಾರ ಗಮನ ಹರಿಸಲಿ. ರಾಜಕೀಯ ಸೇಡಿನಿಂದ ಏನಾದರೂ ಸಾಧನೆ ಮಾಡುತ್ತೇವೆ ಎಂದು ಹೊರಟರೆ ಜನ ಬ್ಯಾಲೆಟ್ ಮೂಲಕವೇ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವಿಎಂ ಸಮರ್ಪಕವಾಗಿಲ್ಲ. ಇಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಜನರೇ ಹೇಳುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನರೇ ಮೌನ ಕ್ರಾಂತಿಗೆ ಮುಂದಾಗಲಿದ್ದಾರೆ. ಇವಿಎಂ ಬದಲು ಮತ್ತೆ ಬ್ಯಾಲೆಟ್​​ ಪೇಪರ್​​​​ ಬಳಕೆ ಜಾರಿಗೆ ಬರುವ ದಿನ ದೂರವಿಲ್ಲ ಎಂದು ಭವಿಷ್ಯ ನುಡಿದರು.

ABOUT THE AUTHOR

...view details