ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮನ
ವಿಧಾನಸೌಧದಲ್ಲಿ ನಡೆದ ಯಾವುದೇ ಹೈಡ್ರಾಮಾ ತಿಳಿದಿಲ್ಲ, ನಮ್ಮದು ಸ್ನೇಹಕ್ಕಾಗಿ ಹೋರಾಟ ಎಂದು ಬೆಂಗಳೂರಿನಲ್ಲಿ ಡಿಕೆಶಿ ಹೇಳಿದ್ದಾರೆ.
23:48 July 10
ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮನ
ವಿಧಾನಸೌಧದಲ್ಲಿ ನಡೆದ ಯಾವುದೇ ಹೈಡ್ರಾಮಾ ತಿಳಿದಿಲ್ಲ, ನಮ್ಮದು ಸ್ನೇಹಕ್ಕಾಗಿ ಹೋರಾಟ ಎಂದು ಬೆಂಗಳೂರಿನಲ್ಲಿ ಡಿಕೆಶಿ ಹೇಳಿದ್ದಾರೆ.
22:51 July 10
ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್ 144 ಜಾರಿ ಮಾಡಿ ಆದೇಶ
ಜುಲೈ 11ರಿಂದ 14ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ವಿಧಾನ ಸೌಧದಲ್ಲಿ ಆವರಣದಲ್ಲಿ ನಾಳೆಯಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ.
ದೇವೇಗೌಡರ ನಿವಾಸಕ್ಕೆ ಆಗಮಿಸಿರುವ ಸಿಎಂ ಕುಮಾರಸ್ವಾಮಿ ಅವರು ಮೂರು ಗಂಟೆಗಳಿಂದ ಚರ್ಚಿಸುತ್ತಿದ್ದಾರೆ, ಜೊತೆಯಲ್ಲಿ ಸಚಿವ ರೇವಣ್ಣ ಸಹ ಇದ್ದಾರೆ.
ಕಾಂಗ್ರೆಸ್ ನ ಮತ್ತಿಬ್ಬರು ರಾಜೀನಾಮೆ ನೀಡಿರುವ ಕುರಿತು ಗಂಭೀರ ಚರ್ಚೆ ಸದ್ಯ ನಡೆಯುತ್ತಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿರುವುದು ಭಾರಿ ಕುತೂಹಲ ಮೂಡಿಸಿದೆ.
ಇದರ ಮಧ್ಯೆ ನಾಳೆ ರೇವಣ್ಣನವರು ತಿರುಪತಿ ಗೆ ಹೋಗುವ ಸಾಧ್ಯತೆ ಇದೆ.
ವಿಧಾನಸಭೆ ವಿಸರ್ಜನೆ ಮಾಡುವ ಬಗ್ಗೆಯೂ ಕುಮಾರಸ್ವಾಮಿ ಚಿಂತನೆ ನಡೆಸುತ್ತಿದ್ದಾರೆ. ಈ ಕುರಿತು ದೇವೇಗೌಡ ನಿವಾಸದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ
22:51 July 10
ಮೈತ್ರಿ ಸರ್ಕಾರದ ಅಳಿವು ಉಳಿವಿನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಂಬಂಧ ಚರ್ಚಿಸಲು ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ದೇವೇಗೌಡರ ಭೇಟಿಗೆ ಮುಂದಾಗಿದ್ದಾರೆ.
ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ನಾಯಕರು ತೆರಳಿದ್ದು, ತಡರಾತ್ರಿಯವರೆಗೂ ಸಭೆ ನಡೆಸುವ ಸಾಧ್ಯತೆ ಇದೆ
ಸಿಎಂ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಹೇಗಾದರೂ ಸರ್ಕಾರ ಉಳಿಸಿಕೊಳ್ಳುವ ಇನ್ನೊಂದು ಹಂತದ ಹಾಗೂ ಕಡೆಯ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದಾದರೆ ಶಾಸಕ ಬೆಂಬಲದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಮುಂದಿನ ನಿರ್ಧಾರ ಸದ್ಯ ಕುತೂಹಲ ಮೂಡಿಸಿದೆ.
22:15 July 10
ಈ ಸರ್ಕಾರದ ಆಯಸ್ಸು ಇನ್ನು ಎರಡು ಮೂರು ದಿನ ಮಾತ್ರ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ರಾಜಕೀಯ ಬೆಳವಣಿಗೆಯನ್ನು ಸದ್ಯಯದಲ್ಲೇ ದೆಹಲಿಗೆ ತೆರಳಿ ಮೋದಿ,ಅಮಿತ್ ಶಾ ಅವರಿಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಇಂದಿನ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಾಳೆಗೆ ಮುಂದೂಡಿದ ಯಡಿಯೂರಪ್ಪ ಕಚೇರಿಗೆ ಆಗಮಿಸಿದ್ದ ಶಾಸಕರನ್ನು ವಿಧಾನಸೌಧಕ್ಕೆ ಕಳಿಸಿಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀದರ್ ರಾವ್, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಮತ್ತಿತರು ಪ್ರಮುಖ ನಾಯಕರ ಸಭೆಯಲ್ಲಿ ಭಾಗಿಯಾಗಿದ್ದರು.
21:19 July 10
ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಅಸ್ಥಿರತೆಯ ಚರ್ಚಿಸಲು ಕಾಂಗ್ರೆಸ್ ನಾಯಕರು ಕುಮಾರಕೃಪಾ ಅತಿಥಿಗೃಹದಲ್ಲಿ ಸೇರಿದ್ದಾರೆ.
ಗೊಂದಲಗಳ ನಿವಾರಣೆಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರುಗಳ ಪ್ರವೇಶ ಆಗಿದ್ದು ನಿರಂತರವಾಗಿ ಕುಮಾರಕೃಪ ಅತಿಥಿಗೃಹದಲ್ಲಿ ಸಭೆಗಳು ನಡೆಯುತ್ತಿವೆ.
ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಯುಟಿ ಖಾದರ್, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ವಿ.ಎಸ್. ಉಗ್ರಪ್ಪ, ಸಚಿವ ಆರ್.ವಿ. ದೇಶಪಾಂಡೆ, ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಆಗಮಿಸಿದ್ದು, ಕೆ.ಸಿ. ವೇಣುಗೋಪಾಲ ಆಗಮಿಸುತ್ತಿದ್ದಂತೆ ಇನ್ನೊಂದು ಸುತ್ತು ಸಭೆ ನಡೆಸಲಿದ್ದಾರೆ.
20:18 July 10
ಬಿಜೆಪಿ ಲಜ್ಜೆಗೇಡಿ ವರ್ತನೆ ಮಾಡುತ್ತಿದೆ, ಕಾಂಗ್ರೆಸ್ ಮಣಿಸುವ ಬಿಜೆಪಿ ಕಾರ್ಯ ಎಂದಿಗೂ ಯಶಸ್ವಿಯಾಗಲ್ಲ: ಸಿದ್ಧರಾಮಯ್ಯ
ಭಾರತೀಯ ಜನತಾ ಪಾರ್ಟಿಯ ಕುದುರೆ ವ್ಯಾಪಾರ ಉತ್ತಮ ರಾಜಕೀಯವಲ್ಲ ಎಂದು ಸಿದ್ಧರಾಮಯ್ಯ ಗುಡುಗಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ಮಾಡಿ ಐದು ಬಾರಿ ಸೋತಿದೆ ಮತ್ತು ಈ ಬಾರಿಯೂ ಸೋಲಲಿದೆ: ಸಿದ್ಧರಾಮಯ್ಯ
ರಾಜೀನಾಮೆ ನೀಡಿರುವ ಕೆ.ಸುಧಾಕರ್ ಅವರನ್ನು ಮನವೊಲಿಸಿದ್ದು, ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
20:03 July 10
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು: ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹ
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪ್ರಮಾಣವಚನ ಮಾಡಿ ಅಧಿಕಾರ ವಹಿಸಿಕೊಂಡ ಸಿಎಂಗೆ ನೈತಿಕತೆ ಇದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಕಿಡಿಕಾರಿದ್ದಾರೆ
19:01 July 10
ರಾಜ್ಯಪಾಲರ ಕಚೇರಿಯಲ್ಲಿ ಸುಧಾಕರ್ಗಾಗಿ ಕಾದು ಕುಳಿತಿರುವ ಎಂಟಿಬಿ ನಾಗರಾಜ್
ಭಾಷೆ ಕೊರತೆಯಿಂದಾಗಿ ಸುಧಾಕರ್ಗಾಗಿ ಕಾಯುತ್ತಿರುವ ಎಂಟಿಬಿ
ರಾಜೀನಾಮೆ ಕೊಟ್ಟ ಬಳಿಕ ಜೊತೆಯಲ್ಲೇ ಹೊರಟಿದ್ದ ಎಂಟಿಬಿ ಹಾಗೂ ಸುಧಾಕರ್
ಆದರೆ ಈ ವೇಳೆ ಕಾಂಗ್ರೆಸ್ ನಾಯಕರು ಸುಧಾಕರ್ರನ್ನು ಅಡ್ಡಗಟ್ಟಿ ಮನವೊಲಿಸುವ ಕಾರ್ಯ ಮಾಡಿದ್ದರು
ಕೆ.ಜೆ.ಜಾರ್ಜ್ ಕಚೇರಿಗೆ ಕರೆದೊಯ್ದು ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದರು
ಕಳೆದ ಒಂದು ಗಂಟೆಯಿಂದ ರಾಜಭವನದಲ್ಲಿ ಕಾಯುತ್ತಿರುವ ಶಾಸಕ ಎಂಟಿಬಿ ನಾಗರಾಜ್
ವಿಧಾನಸೌಧ ಹೊರಬಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
ಶಾಸಕ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ, ಜಾರ್ಜ್ ವಿರುದ್ಧ ಕೆಂಡಕಾರಿದ ಬೊಮ್ಮಾಯಿ
ಕಾಂಗ್ರೆಸ್ ಪಕ್ಷವು ಸಂಖ್ಯೆಯಲ್ಲಿ ಅಲ್ಪಸಂಖ್ಯಾತವಾಗಿದೆ
ಹಲ್ಲೆ ನಡೆಸಿರುವ ವಿರುದ್ಧ ಜನಾಂದೋಲನ ರೂಪಿಸುತ್ತೇವೆ
18:45 July 10
ಸಿಐಡಿಯಿಂದ ಎಸಿಬಿಗೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ
ಎಸಿಬಿ(ಭ್ರಷ್ಟಚಾರ ನಿಗ್ರಹ ದಳ) ಐಜಿಪಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ
ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಪತಿ ಹೇಮಂತ್ ನಿಂಬಾಳ್ಕರ್
ಅತೃಪ್ತ ಶಾಸಕರ ಬಣದಲ್ಲಿ ಗುರ್ತಿಸಿಕೊಂಡಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್
ರಾಜಕೀಯ ಅಸ್ಥಿರತೆ ವೇಳೆ ಸರ್ಕಾರದಿಂದ ಧಿಡೀರ್ ವರ್ಗಾವಣೆ ಆದೇಶ
18:31 July 10
ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಶಾಸಕ ಡಾ.ಕೆ.ಸುಧಾಕರ್ ನಡುವಿನ ಮಾತುಕತೆ ಅಂತ್ಯ.
ಪೊಲೀಸ್ ಬಿಗಿ ಭದ್ರತೆಯಲ್ಲಿ ರಾಜಭವನದತ್ತ ತೆರಳಿದ ಡಾ.ಕೆ.ಸುಧಾಕರ್
ಸುಧಾಕರ್ರನ್ನು ತಕ್ಷಣವೇ ರಾಜಭವನಕ್ಕೆ ಕರೆತರುವಂತೆ ರಾಜ್ಯಪಾಲರು ಪೊಲೀಸ್ ಕಮೀಷನರ್ಗೆ ಆದೇಶಿಸಿದ್ದರು.
ಸುಧಾಕರ್ ರಾಜೀನಾಮೆ ನೀಡಿದ ವೇಳೆ ಗದ್ದಲ ಉಂಟಾಗಿತ್ತು.
18:25 July 10
ಪೊಲೀಸರ ವಶದಲ್ಲಿದ್ದ ಡಿ.ಕೆ.ಶಿವಕುಮಾರ್ ಬಿಡುಗಡೆಗೊಂಡಿದ್ದಾರೆ.
ಬಿಡುಗಡೆಯ ಬಳಿಕ ಮಾತನಾಡಿರುವ ಡಿಕೆಶಿ, ಮಹಾರಾಷ್ಟ್ರ ಪೊಲೀಸರ ನಡೆ ನಿಜಕ್ಕೂ ನಾಚಿಕೆಗೇಡು ಎಂದು ಹರಿಹಾಯ್ದಿದಿದ್ದಾರೆ.
ತಮ್ಮ ಹೋಟೆಲ್ ಬುಕಿಂಗ್ ರದ್ದಾಗಿರುವುದನ್ನು ಡಿಕೆಶಿ ಖಂಡಿಸಿದ್ದಾರೆ.
ಅತೃಪ್ತ ಶಾಸಕರ ಭೇಟಿಗೆ ಹಲವು ಗಂಟೆಗಳ ಕಾಲ ರಿಸನೈಸನ್ಸ್ ಹೋಟೆಲ್ ಹೊರಭಾಗದಲ್ಲಿ ಕಾದಿದ್ದ ಡಿಕೆಶಿಯನ್ನು ಪೊಲೀಸರು ಮಧ್ಯಾಹ್ನದ ವೇಳೆ ಬಂಧಿಸಿದ್ದರು.
18:14 July 10
ಬಿಡುಗಡೆಯ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್
ವಿಧಾನಸೌಧದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಳ
ಶಕ್ತಿ ಸೌಧಕ್ಕೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆಗಮನ
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದ ಗದ್ದಲದ ವಾತಾವರಣ ನಿರ್ಮಾಣ
ವಿಧಾನಸೌಧದ ಮೂರನೇ ಮಹಡಿಯಲ್ಲಿ ಹೈಡ್ರಾಮಾ
ರಾಜೀನಾಮೆ ನೀಡಿ ವಾಪಸಾಗುತ್ತಿದ್ದ ಸುಧಾಕರ್ ರನ್ನು ಎಳೆದೊಯ್ದ ಕಾಂಗ್ರೆಸ್ ನಾಯಕರು
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೆ.ಜೆ.ಜಾರ್ಜ್ ಕಚೇರಿಗೆ ಕರೆದೊಯ್ದ ಕೈ ನಾಯಕರು
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್ ಉಪಸ್ಥಿತಿ
17:42 July 10
ಡಾ.ಕೆ.ಸುಧಾಕರ್ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಗದ್ದಲ
ಸಚಿವರನ್ನ ಬಲಾತ್ಕಾರವಾಗಿ ಬಂಧಿಸಿದ್ದು ನಿಜಕ್ಕೂ ಉತ್ತಮ ನಡೆಯಲ್ಲ, ಇಂದಿನ ದಿನ ಪ್ರಜಾಪ್ರಭುತ್ವದಲ್ಲಿ ಕಪ್ಪು ಚುಕ್ಕೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿಎಂ, ತಮ್ಮ ಟ್ವೀಟ್ನಲ್ಲಿ ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ರನ್ನು ಟ್ಯಾಗ್ ಮಾಡಿದ್ದಾರೆ.
17:22 July 10
ಟ್ವೀಟ್ ಮೂಲಕ ಬಿಜೆಪಿಯನ್ನು ಕುಟುಕಿದ ಸಿಎಂ ಕುಮಾರಸ್ವಾಮಿ
ಶಾಂತಿಯುತವಾಗಿ ನಾವೆಲ್ಲ ನಾಯಕರು ಹೋಟೆಲ್ ಮುಂಭಾಗದಲ್ಲಿ ಕುಳಿತಿದ್ದರೂ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದು ಪ್ರಾಯೋಜಿತ ಬೆದರಿಕೆಯ ಉದಾಹರಣೆ ಎಂದು ವಿಡಿಯೋ ಟ್ವೀಟ್ ಮೂಲಕ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದಿಯೋರ ಕಿಡಿಕಾರಿದ್ದಾರೆ.
17:13 July 10
ವಿಡಿಯೋ ಟ್ವೀಟ್ ಮಾಡಿದ ಮಿಲಿಂದ್ ದಿಯೋರ
ರಾಜೀನಾಮೆ ಬಗ್ಗೆ ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್, ಯಾವುದೇ ರಾಜೀನಾಮೆಯನ್ನು ಇದುವರೆಗೂ ಅಂಗೀಕಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ತಿಂಗಳ 17ರವರೆಗೆ ಸಮಯವನ್ನು ನೀಡಿದ್ದು, ರಾಜೀನಾಮೆಯನ್ನು ಕ್ರಮಬದ್ಧವಾಗಿ ವಿಚಾರಣೆ ನಡೆಸುವುದಾಗಿ ಸ್ಪೀಕರ್ ಹೇಳಿದ್ದಾರೆ.
16:55 July 10
ಯಾವುದೇ ರಾಜೀನಾಮೆ ಅಂಗೀಕಾರವಾಗಿಲ್ಲ: ಸ್ಪೀಕರ್
ರಾಜೀನಾಮೆ ಸಲ್ಲಿಕೆ ಬಳಿಕ ರಾಜಭವನದತ್ತ ತೆರಳಿದ ಸಚಿವ ಎಂ.ಟಿ.ಬಿ. ನಾಗರಾಜ್, ಹಾಗೂ ಡಾ.ಕೆ.ಸುಧಾಕರ್
ಶಾಸಕಿ ಅಂಜಲಿ ನಿಂಬಾಳ್ಕರ್ ರಾಜೀನಾಮೆ ಸಾಧ್ಯತೆ
ಇಬ್ಬರ ರಾಜೀನಾಮೆಯಿಂದ ಮೈತ್ರಿ ಸರ್ಕಾರದ ಸಂಖ್ಯಾಬಲ ಮತ್ತಷ್ಟು ಕುಸಿತ
ರಾಜೀನಾಮೆ ಸಲ್ಲಿಸಿದ ಸಚಿವ ಎಂ.ಟಿ.ಬಿ. ನಾಗರಾಜ್, ಹಾಗೂ ಡಾ.ಕೆ.ಸುಧಾಕರ್
ಸ್ಪೀಕರ್ ಕಚೇರಿಗೆ ಆಗಮಿಸಿದ ಸಚಿವ ಎಂ.ಟಿ.ಬಿ ನಾಗರಾಜ್ ಹಾಗೂ ಸುಧಾಕರ್
ಸದ್ಯ ಸ್ಪೀಕರ್ ಕಚೇರಿಯತ್ತ ಬಿಎಸ್ವೈ ನೇತೃತ್ವದ ಬಿಜೆಪಿ ನಿಯೋಗ ಆಗಮಿಸಿದೆ.
ರಿನಯಸೈನ್ಸ್ ಹೋಟೆಲ್ ಮುಂಭಾಗದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಮುಂಬೈ ಪೊಲೀಸರು ಡಿ.ಕೆ.ಶಿವಕುಮಾರ್ರನ್ನು ಬಂಧಿಸಿ ಕಳಿನಾ ಯುನಿವರ್ಸಿಟಿಗೆ ಕರೆದೊಯ್ದಿದಿದ್ದಾರೆ.
15:32 July 10
ಮತ್ತೆ ರಾಜೀನಾಮೆ ಬಿಸಿ..!
ಮುಂಬೈನ ರಿನೈಸೆನ್ಸ್ ಹೋಟೆಲ್ ಎದುರುಗಡೆ ಹೋಟೆಲ್ ಒಳಗೆ ಬಿಡುವಂತೆ ಒತ್ತಾಯಿಸಿ ಕಾದು ಕುಳಿತಿದ್ದ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಮುಂಬೈ ಪೊಲೀಸರ ವರ್ತನೆಗೆ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ವಿರುದ್ಧ ಅವರೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
15:12 July 10
ಮುಂಬೈ ಪೊಲೀಸರ ವಶಕ್ಕೆ ಸಚಿವ ಡಿಕೆಶಿ: ತಾರಕಕ್ಕೇರಿದ ರಾಜಕೀಯ ಸಂಘರ್ಷ
ರಾಜಭವನಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರ ಮುತ್ತಿಗೆ 100 ಮೀಟರ್ ಅಂತರದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕರೆದೊಯ್ದ ಪೋಲಿಸರು
ಪ್ರತಿಭಟನಾ ಮೆರವಣಿಗೆಯಲ್ಲಿ ತೊಡಗಿದ್ದ ನಾಯಕರಾದ ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಡಿಸಿಎಂ ಡಾ ಜಿ ಪರಮೇಶ್ವರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು
14:50 July 10
ರಾಜಭವನಕ್ಕೆ ಕಾಂಗ್ರೆಸ್ ಮುತ್ತಿಗೆ ಯತ್ನ: ಪೊಲೀಸರಿಂದ ತಡೆ
ರಾಜಭವನಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರ ಮುತ್ತಿಗೆ 100 ಮೀಟರ್ ಅಂತರದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕರೆದೊಯ್ದ ಪೋಲಿಸರು
ಪ್ರತಿಭಟನಾ ಮೆರವಣಿಗೆಯಲ್ಲಿ ತೊಡಗಿದ್ದ ನಾಯಕರಾದ ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಡಿಸಿಎಂ ಡಾ ಜಿ ಪರಮೇಶ್ವರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು
14:34 July 10
ಮುಂಬೈ ಪೊಲೀಸರ ವಶಕ್ಕೆ ಸಚಿವ ಡಿಕೆಶಿ: ತಾರಕಕ್ಕೇರಿದ ರಾಜಕೀಯ ಸಂಘರ್ಷ
120 ಶಾಸಕರ ಬೆಂಬಲ ಹೊಂದಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದು
ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
14:31 July 10
ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
14:26 July 10
ಡಿಕೆಶಿ ಮುಂಬೈ ವಿಸಿಟ್ ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ರಾ? ಆಪ್ತರ ಬಳಿ ಸಿದ್ದು ಅಸಮಾಧಾನ?
ರಾಜಭವನಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರ ಮುತ್ತಿಗೆ 100 ಮೀಟರ್ ಅಂತರದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕರೆದೊಯ್ದ ಪೋಲಿಸರು
ಪ್ರತಿಭಟನಾ ಮೆರವಣಿಗೆಯಲ್ಲಿ ತೊಡಗಿದ್ದ ನಾಯಕರಾದ ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಡಿಸಿಎಂ ಡಾ ಜಿ ಪರಮೇಶ್ವರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು
ಮಾಜಿ ಪ್ರಧಾನಿ ದೇವೇಗೌಡರು ಬಸ್ ಬದಲು ತಮ್ಮ ಖಾಸಗಿ ಕಾರಿನಲ್ಲಿ ಪ್ರತಿಭಟನಕಾರರನ್ನು ಕರೆದ ಕಡೆ ತೆರಳಿದರು
ಕಾಂಗ್ರೆಸ್ ಮತ್ತು ಜೆಡಿಎಸ್ ನ ನೂರಾರು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯಲಾಯಿತು
ರಸ್ತೆಯಲ್ಲೇ ಕುಳಿತು ಪ್ರತಿಭಟಿಸುತ್ತಿರುವ ಸಿದ್ದರಾಮಯ್ಯ
14:21 July 10
ರಸ್ತೆಯಲ್ಲೇ ಕುಳಿತ ಸಿದ್ದರಾಮಯ್ಯ: ಪೊಲೀಸರಿಗೆ ಜಗ್ಗದ ಮಾಜಿ ಸಿಎಂ
ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇವೆ.
ಇನ್ನೂ ಬಹುಮತ ಕಳೆದುಕೊಂಡಿರುವ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು.
ಕುಮಾರಸ್ವಾಮಿ ಬಹುಮತ ಕಳ್ಕೊಂಡಿದ್ದು, ತಕ್ಷಣ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು ಎಂದು ಇದೇ ವೇಳೆ ಬಿಎಸ್ವೈ ಒತ್ತಾಯಿಸಿದರು
14:05 July 10
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ
ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುತ್ತಿದ್ದೇವೆ.
ಇನ್ನೂ ಬಹುಮತ ಕಳೆದುಕೊಂಡಿರುವ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು.
ಕುಮಾರಸ್ವಾಮಿ ಬಹುಮತ ಕಳ್ಕೊಂಡಿದ್ದು, ತಕ್ಷಣ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು ಎಂದು ಇದೇ ವೇಳೆ ಬಿಎಸ್ವೈ ಒತ್ತಾಯಿಸಿದರು
13:57 July 10
8 ಶಾಸಕರಿಂದ ಮತ್ತೆ ರಾಜೀನಾಮೆ.. ಸ್ಪೀಡ್ ಪೋಸ್ಟ್ ಮೂಲಕ ರವಾನೆ
8 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂಬ ಸ್ಪೀಕರ್ ಹೇಳಿಕೆ ಹಿನ್ನೆಲೆಯಲ್ಲಿ ಆ ಎಂಟು ಶಾಸಕರು ಮತ್ತೊಮ್ಮೆ ರಾಜೀನಾಮೆ ನೀಡಿದ್ದು, ಸ್ಪೀಡ್ ಪೋಸ್ಟ್ ಮೂಲಕ ಸ್ಪೀಕರ್ಗೆ ರವಾನೆ ಮಾಡಿದ್ದಾರೆ ಎಂದು ಮುಂಬೈನಿಂದ ರೆಬೆಲ್ ಶಾಸಕರ ಮೂಲಗಳು ಸ್ಪಷ್ಟ ಪಡಿಸಿವೆ.
13:44 July 10
ಸ್ಪೀಕರ್ ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು: ಶ್ರೀರಾಮುಲು
ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು ಸಂವಿಧಾನವನ್ನು ಕಾಪಾಡುವ ಕೆಲಸ ಮಾಡಬೇಕು ಶಾಸಕರು ರಾಜೀನಾಮೆ ಕೊಟ್ಟಾಗ ಕ್ರಮಬದ್ಧವಾಗಿ ಇಲ್ಲ ಎನ್ನುವುದು ಸರಿಯಲ್ಲ ಎಂದು ಶಾಸಕ ಶ್ರೀ ರಾಮುಲು ಹೇಳಿದ್ದಾರೆ.
13:38 July 10
ಸರ್ಕಾರ ಅಲ್ಪಮತಕ್ಕೆ ಕುಸಿದಿದೆ: ಬಿಎಸ್ವೈ
14 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.ಆದರೂ ಸರ್ಕಾರದ ಹಗಲು ದರೋಡೆ ಮುಂದುವರಿದಿದೆ. ಹಾಗಾಗಿ ನಾವು ಇಂದು ರಾಜ್ಯಪಾಲರನ್ನು ಭೇಟಿಯಾಗಿ ಈ ಸರ್ಕಾರವನ್ನು ಕಿತ್ತೊಗೆಯುವಂತೆ ಮನವಿ ಮಾಡುತ್ತೇವೆ. ಸ್ಪೀಕರ್ ಅವರನ್ನು ಸಹ ಭೇಟಿ ಮಾಡಿ ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಒತ್ತಾಯಿಸುತ್ತೇವೆ.
13:32 July 10
ನಾನು ಪಕ್ಷ ಬಿಟ್ಟು ಹೋಗುವುದಿಲ್ಲ: ಬಿಜೆಪಿಯವರ ಸಂಪರ್ಕದಲ್ಲಿ ನಾನಿಲ್ಲ: ರೂಪಾ ಶಶಿಧರ್
ಬೆಂಗಳೂರು:ನಾನು ಪಕ್ಷಕ್ಕೆ ನಿಷ್ಠಾವಂತೆಯಾಗಿದ್ದು, ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಅತೃಪ್ತರ ಲಿಸ್ಟ್ ನಲ್ಲಿ ನಾನು ಇಲ್ಲ ಎಂದು ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ಸ್ಪಷ್ಟ ಪಡಿಸಿದ್ದಾರೆ.
ವಿಧಾನಸೌಧದಲ್ಲಿ ಕಾಣಿಸಿಕೊಂಡ ಅವರು ಈಟಿವಿ ಭಾರತ್ ಜತೆ ಮಾತನಾಡುತ್ತಾ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಕೆಲಸ ಇತ್ತು. ಅದಕ್ಕಾಗಿ ವಿಧಾನಸೌಧಕ್ಕೆ ಬಂದಿದ್ದೇನೆ. ಪಕ್ಷ ನಮ್ಮನ್ನು ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಿದೆ. ಕ್ಷೇತ್ರದ ಜನರು, ಕಾರ್ಯಕರ್ತರು ಗೌರವ ಉಳಿಸಿಕೊಳ್ಳಬೇಕು. ಕಷ್ಟದಲ್ಲಿ ಇರುವಾಗ ಪಕ್ಷ ನನಗೆ ಅವಕಾಶವನ್ನು ನೀಡಿದೆ. ಏನೇ ಕಷ್ಟ ಬಂದರೂ ನಮಗೆ ಪಕ್ಷ ಇದೆ. ಪಕ್ಷ ವಿರೋಧಿ ಚಟುವಟಿಕೆಯನ್ನು ನಾನು ಯಾವತ್ತು ಮಾಡಿಲ್ಲ. ಪಕ್ಷಕ್ಕೆ ಗೌರವ ತರುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
13:26 July 10
ಮುಂಬೈಗೆ ಹಾರಿದ ಶಾಸಕ ಶ್ರೀನಿವಾಸಗೌಡ..!?
ಬೆಂಗಳೂರು:ಕೆಎಐಎಲ್ ನಿಂದ ಪ್ರಯಾಣ ಬೆಳೆಸಿದ ಶಾಸಕ ಶ್ರೀನಿವಾಸಗೌಡ ನೇರವಾಗಿ ಮುಂಬೈಗೆ ಹೊರಟಿದ್ದಾರೆ ಎನ್ನಲಾಗಿದೆ.. ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದ ವರ ವಿರುದ್ದ ಗರಂ ಆಗಿದಲ್ಲದೇ ತರಾತುರಿಯಲ್ಲಿ ದೌಡಾಯಿಸಿದ್ರು
ಅಂದ ಹಾಗೆ ಶ್ರೀನಿವಾಸಗೌಡ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ
13:16 July 10
ಕುಮಾರಸ್ವಾಮಿ ರಾಜೀನಾಮೆಗೆ ಬಿಎಸ್ವೈ ಆಗ್ರಹ: 3 ಗಂಟೆಗೆ ಸ್ಪೀಕರ್ ಭೇಟಿ
ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಭೇಟಿ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ
ರೆಬೆಲ್ ಎಂಎಲ್ಎ ರಾಜೀನಾಮೆ ಪತ್ರ ಹರಿದು ಹಾಕಿರುವ ಸಚಿವ ಡಿಕೆಶಿ ಕ್ರಮವನ್ನ ಸ್ಪೀಕರ್ ಖಂಡಿಸಿಲ್ಲ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ
12ಕ್ಕೆ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಸಿಎಂ ಬಳಿ ಬೇಕಾದಷ್ಟು ಸದಸ್ಯರಿಲ್ಲ. ಈ ಸಮಯದಲ್ಲಿ ಸದನ ನಡೆಸಿದರೆ, ಇದೊಂದು ಅಕ್ರಮ ಸದನ ಆಗಲಿದೆ. ಈಗಲೂ ಕಾಲ ಮಿಂಚಿಲ್ಲ. ಈಗಲಾದರೂ ನೀವು ರಾಜೀನಾಮೆ ನೀಡಿ. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಿ ಎಂದು ಬಿಎಸ್ವೈ ಒತ್ತಾಯಿಸಿದ್ದಾರೆ.
13:15 July 10
ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರತಿಭಟನೆ
ಕಬ್ಬನ್ ಉದ್ಯಾನ ಸಮೀಪದ ಮಿನ್ಸ್ ಚೌಕದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರತಿಭಟನೆ
ಕುತಂತ್ರದಿಂದ ಸರ್ಕಾರ ಬೀಳಿಸುವ ಯತ್ನವನ್ನ ಬಿಜೆಪಿ ಮಾಡುತ್ತಿದೆ: ಜಾರ್ಜ್
13:09 July 10
ಸಿದ್ದರಾಮಯ್ಯ ವಿರುದ್ಧ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಪರೋಕ್ಷ ವಾಗ್ದಾಳಿ
ಪ್ರಸಕ್ತ ರಾಜಕೀಯ ಬೆಳವಣಿಗಿಗಳ ಹಿಂದೆ ಒಬ್ಬ ಸೂತ್ರದಾರನಿದ್ದಾನೆ.
ಆ ಸೂತ್ರದಾರ ಯಾರು ಎಂದು ಎಲ್ಲರಿಗೂ ಗೊತ್ತಿದೆ.
ಮಾಜಿ ಸಿ.ಎಂ.ಸಿದ್ದರಾಮಯ್ಯ ವಿರುದ್ಧ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಪರೋಕ್ಷ ವಾಗ್ದಾಳಿ
13:04 July 10
ರಾಜಭವನಕ್ಕೆ ತೆರಳಿದ ಬಿಎಸ್ವೈ:
ರಾಜಭವನಕ್ಕೆ ಆಗಮಿಸಿದ ಬಿಜೆಪಿ ನಾಯಕರ ನಿಯೋಗ
ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ವೈ ನೇತೃತ್ವದಲ್ಲಿ ರಾಜಭವನಕ್ಕೆ ಆಗಮಿಸಿರುವ ನಾಯಕರು
ಸ್ಪೀಕರ್ ಕ್ರಮದ ಕುರಿತು ರಾಜ್ಯಪಾಲರೊಂದಿಗೆ ಚರ್ಚೆ ಸಾಧ್ಯತೆ
12:56 July 10
ಮೈತ್ರಿ ನಾಯಕರ ರಿವರ್ಸ್ ಆಪರೇಷನ್ ಸಕ್ಸಸ್ ಆಗಲ್ಲ: ಬಿಜೆಪಿ ವಿಶ್ವಾಸ
ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರು ಪಕ್ಷ ತೊರೆಯಲ್ಲ ರಿವರ್ಸ್ ಆಪರೇಷನ್ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಮೈತ್ರಿ ಸರ್ಕಾರದ ಸಂಪರ್ಕಕ್ಕೆ ಸಿಲುಕಿದ್ದಾರೆ ಎನ್ನುವ ಶಾಸಕ ಬೆಳ್ಳಿ ಪ್ರಕಾಶ್, ರಾಜಕೀಯದಲ್ಲಿ ಇರುವವರೆಗೂ ಬಿಜೆಪಿ ತೊರೆಯಲ್ಲ ಎಂದರು.
ರಿವರ್ಸ್ ಆಪರೇಷನ್ ಮಾಡುತ್ತಿರುವುದು ನಿಜ ಆದರೆ ಆಪರೇಷನ್ ಮಾಡಲು ಅವರಿಗೆ ಪೇಷಂಟ್ ಸಿಗುತ್ತಿಲ್ಲ, ಅವರ ಪ್ರಯತ್ನ ಸಫಲವಾಗಲ್ಲ ಎಂದರು.
ಹಾಸನ ಶಾಸಕ ಪ್ರೀತಂಗೌಡ ಮಾತನಾಡಿ, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಹಾಗಾಗಿ ನಮ್ಮ ಶಾಸಕರ ಸೆಳೆಯಲು ಯತ್ನಿಸಿದ್ದೇ ಆದರೆ ಯಾವ ಮುಖ ಇಟ್ಟುಕೊಂಡು ಅವರು ನಮ್ಮ ಶಾಸಕರಿಗೆ ಆಹ್ವಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾವ ಕಾರಣಕ್ಕೂ ಬಸವರಾಜ್ ದಢೇಸೂಗೂರು ಸೇರಿ ಯಾರೂ ಕೂಡ ರಿವರ್ಸ್ ಆಪರೇಷನ್ ಗೆ ಒಳಗಾಗಲ್ಲ,ಮೈತ್ರಿ ನಾಯಕರ ಪ್ರಯತ್ನ ಸಫಲವಾಗಲ್ಲ ಎಂದರು.
12:44 July 10
ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಸಜ್ಜು
ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಜಂಟಿಯಾಗಿ ಕರೆದಿರುವ ರಾಜಭವನ ಮುತ್ತಿಗೆ ಹಾಗೂ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದ್ದು ನೂರಾರು ಕಾರ್ಯಕರ್ತರು ಮಿನ್ಸ್ ಚೌಕ ಸಮೀಪ ಜಮಾವಣೆಗೊಂಡು ಪ್ರತಿಕೃತಿ ದಹಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖರು ಸ್ಥಳಕ್ಕೆ ಇನ್ನೂ ಆಗಮಿಸಿಲ್ಲ. ಆದರೆ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಹಾಗೂ ರಾಜ್ಯ ಬಿಜೆಪಿ ನಾಯಕರ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು ಸಂಖ್ಯೆಯಲ್ಲಿ ಸೇರ್ಪಡೆ ಯಾಗುವ ಸಾಧ್ಯತೆ ಇರುವ ಹಿನ್ನೆಲೆ ಇವರನ್ನು ರಾಜಭವನಕ್ಕೆ ತೆರಳದಂತೆ ಮಧ್ಯದಲ್ಲಿಯೇ ತಡೆಯಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರತಿಭಟನಾ ಸ್ಥಳದಿಂದ 100 ಅಡಿ ದೂರದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಸಿದ್ಧತೆ ಕೈಗೊಂಡಿರುವ ಪೊಲೀಸರು ಬಿಎಂಟಿಸಿ ಬಸ್ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ರಾಜಭವನ ರಸ್ತೆಗೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಲು ಅಗತ್ಯ ಸಂಖ್ಯೆಯ ಬ್ಯಾರಿಕೇಡ್ ಗಳನ್ನು ಜೋಡಿಸಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರನ್ನು ತಡೆಯಲು ಸಿದ್ಧತೆ ಕೈಗೊಳ್ಳಲಾಗಿದೆ.
12:33 July 10
ಡಿಕೆಶಿಗೆ ಮಿಲಿಂದಾ ದಿಯೋರಾ ಅಭಯ
ಮುಂಬೈನಲ್ಲಿ ಇರುವ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಮಿಲಿಂದಾ ದಿಯೋರಾ.. ಸಚಿವ ಡಿಕೆಶಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ
12:31 July 10
ಬಂಡಾಯ ಕಾಂಗ್ರೆಸ್ ನಾಯಕ ಬಿ. ಬಸವರಾಜ್ ಹೇಳಿಕೆ
ನಾವು ಡಿ.ಕೆ.ಶಿವಕುಮಾರ್ ಅವರನ್ನು ಅವಮಾನಿಸುವ ಉದ್ದೇಶ ಹೊಂದಿಲ್ಲ. ನಮಗೆ ಅವರ ಮೇಲೆ ನಂಬಿಕೆ ಇದೆ. ಆದರೆ, ನಮ್ಮ ಈ ನಿಲುವಿಗೆ ಕಾರಣವಿದೆ ಎಂದು ಬಿ.ಬಸವರಾಜ್ ಹೇಳಿದ್ದಾರೆ.
ಸ್ನೇಹ, ಪ್ರೀತಿ ಮತ್ತು ವಾತ್ಸಲ್ಯ ಎಲ್ಲಾ ಒಂದು ಕಡೆ. ನಾವು ಇಂದು ಅವರನ್ನು ಏಕೆ ಭೇಟಿಯಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ ಎಂದರು.
12:27 July 10
ನಿಸರ್ಗ ನಾರಾಯಣಸ್ವಾಮಿ ಹೇಳಿಕೆ
ಬಿಜೆಪಿಯ ಯಾವುದೇ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ
ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಹೇಳಿಕೆ
12:20 July 10
ರೆಸಾರ್ಟ್ ರಾಜಕೀಯ ಕುರಿತು ಮಾತನಾಡಿದ ಜೆಡಿಎಸ್ ಶಾಸಕ ಅನ್ನಧಾನಿ
ಸಿಎಂ ನಿರ್ಧಾರಗಳಿಗೆ ನಾವು ಬದ್ದ. ಅವರ ಆದೇಶದಂತೆ ರೆಸಾರ್ಟ್ ಬಂದಿದ್ದೇವೆ.
ಮಾಧ್ಯಮದವರಿಗೆ ಹೆಚ್ಚು ಮಾಹಿತಿ ನೀಡಬಾರದೆಂಬುದು ಕೂಡ ಸಿಎಂ ಸೂಚನೆ.
12:16 July 10
ಸ್ಪೀಕರ್ ನಡೆಗೆ ಬಿಎಸ್ವೈ ಗರಂ!
ಕ್ರಮಬದ್ದವಾದ ರಾಜೀನಾಮೆ ಪತ್ರವನ್ನು ಅಂಗೀಕಾರಕ್ಕೆ ಸ್ಪೀಕರ್ ವಿಳಂಬ
ಬಿಎಸ್ವೈ ಬಳಗ ವಿಧಾನಸೌಧಕ್ಕೆ ತೆರಳಿ ಗಾಂಧಿ ಪ್ರತಿಮೆ ಬಳಿ ಧರಣಿ ಮಾಡುವುದಾಗಿ ಎಚ್ಚರ.
ಮಧ್ಯಾಹ್ನ ಸ್ಪೀಕರ್ ಭೇಟಿಗೂ ಮುನ್ನ ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂದ ಬಿಎಸ್ವೈ
ಸ್ಪೀಕರ್ ಕಚೇರಿಯಲ್ಲಿ ಡಿಕೆಶಿ ರಾಜೀನಾಮೆ ಪತ್ರ ಹರಿದಿದ್ದು, ಸ್ಪೀಕರ್ ಏನು ಪ್ರಶ್ನಿಸಿಲ್ಲ ಏಕೆ: ಬಿಎಸ್ವೈ ಗರಂ!
12:13 July 10
ಬಿಜೆಪಿ ಕಾರ್ಯಕರ್ತರ ಧರಣಿ:
ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಧರಣಿ ನಡೆಸಲಿದೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಬಿಜೆಪಿ ನಾಯಕರು, ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.
ಗೊಂದಲಕ್ಕೀಡಾಗಿರುವ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆ.
12:09 July 10
ರಾಜಕೀಯದಲ್ಲಿ ಒಟ್ಟಿಗೆ ಜನಿಸಿರುವ ನಾವು ಒಟ್ಟಿಗೆ ಸಾಯುತ್ತೇವೆ- ಡಿಕೆಶಿ
ಮುಂಬೈ ಪೊಲೀಸ್ ತಮ್ಮ ಕರ್ತವ್ಯವನ್ನು ಮಾಡಲಿ.
ನಾವು ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ.
ರಾಜಕೀಯದಲ್ಲಿ ಒಟ್ಟಿಗೆ ಜನಿಸಿರುವ ನಾವು ಒಟ್ಟಿಗೆ ಸಾಯುತ್ತೇವೆ- ಡಿಕೆಶಿ
12:08 July 10
ಮುಂಬೈನಲ್ಲಿ ಡಿಕೆಶಿ ಹೇಳಿಕೆ
ಮುಂಬೈ ಕನ್ವೆನ್ಷನ್ ಸೆಂಟರ್ ಹೋಟೆಲ್ ತಲುಪಿದ ಡಿ.ಕೆ.ಶಿವಕುಮಾರ್
ನಾನು ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಿದ್ದು, ಇಲ್ಲೇ ಇರುವ ನನ್ನ ಸ್ನೇಹಿತರನ್ನು ಭೇಟಿ ಮಾಡಬೇಕಿದೆ.
ಯಾರಿಗೂ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ, ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದ ಡಿಕೆಶಿ.
ಡಿ.ಕೆ.ಶಿವಕುಮಾರ್ ಅವರನ್ನು ಹೋಟೆಲ್ ದ್ವಾರದಿಂದ ಆಚೆಗೆ ಕರೆದೊಯ್ದ ಪೊಲೀಸರು.
12:06 July 10
ಪೊಲೀಸರ ಮೊರೆ ಹೋಗಿರುವ ರೆಬೆಲ್ ಶಾಸಕರು
ರೆಬೆಲ್ ಶಾಸಕರು ಪೊಲೀಸರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ "ಸಿಎಂ ಮತ್ತು ಡಿಕೆ ಶಿವಕುಮಾರ್ ಹೋಟೆಲ್ ಅನ್ನು ಅಪ್ಪಳಿಸಲಿದ್ದಾರೆ ಎಂದು ನಾವು ಕೇಳಿದ್ದೇವೆ, ಅವರಿಂದ ನಮಗೆ ಬೆದರಿಕೆ ಇದೆ" ಎಂದು ಬರೆಯಲಾಗಿದೆ.
12:02 July 10
ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಬಳ್ಳಾರಿ: ಬಳ್ಳಾರಿಯ ರಾಯಲ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಸರಕಾರ ಅಲ್ಪಮತಕ್ಕೆ ಕುಸಿದಿದ್ದು, ಈ ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
08:18 July 10
ರಾಜಕೀಯದಲ್ಲಿ ಒಟ್ಟಿಗೆ ಜನಿಸಿರುವ ನಾವು ಒಟ್ಟಿಗೆ ಸಾಯುತ್ತೇವೆ: ಡಿಕೆಶಿ
ಮುಂಬೈ ಪೊಲೀಸ್ ತಮ್ಮ ಕರ್ತವ್ಯವನ್ನು ಮಾಡಲಿ.
ನಾವು ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ.
ರಾಜಕೀಯದಲ್ಲಿ ಒಟ್ಟಿಗೆ ಜನಿಸಿರುವ ನಾವು ಒಟ್ಟಿಗೆ ಸಾಯುತ್ತೇವೆ- ಡಿಕೆಶಿ
08:12 July 10
ಬಿಜೆಪಿ ಕಾರ್ಯಕರ್ತರ ಧರಣಿ
ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಧರಣಿ ನಡೆಸಲಿದೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಬಿಜೆಪಿ ನಾಯಕರು, ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ.
ಗೊಂದಲಕ್ಕೀಡಾಗಿರುವ ಸಿಎಂ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆ.
07:22 July 10
ಡಿಕೆಶಿಗೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸಾಥ್
ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅತೃಪ್ತ ಶಾಸಕರನ್ನು ಭೇಟಿಯಾಗಲು ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದಾರೆ.