ಕರ್ನಾಟಕ

karnataka

ETV Bharat / state

ಸಿಬಿಐ ವಶಕ್ಕೆ ಪಡೆದಿದ್ದ ಹಣ ಹಿಂದಿರುಗಿಸುವಂತೆ ಕೋರಿ ಡಿಕೆಶಿ ಆಪ್ತ ಸಲ್ಲಿಸಿದ್ದ ಅರ್ಜಿ ವಜಾ - D K Shivakumar news

ಸಿಬಿಐ ಅಧಿಕಾರಿಗಳು 2017ರ ಅಕ್ಟೋಬರ್ 5ರಂದು ಸಚಿನ್ ಒಡೆತನದ ಹಾಸನ ಹಾಗೂ ಬೆಂಗಳೂರಿನ ಕಚೇರಿಗಳನ್ನು ತಪಾಸಣೆ ಮಾಡಿದ್ದರು. ಈ ವೇಳೆ ಸಚಿನ್ ಅವರ ವೆಲ್ ವರ್ತ್ ಸಾಫ್ಟವೇರ್ ಕಚೇರಿಯಲ್ಲಿದ್ದ 53.46 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು. ಈ ಹಣವನ್ನು ವಾಪಸ್​​ ಕೊಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : Nov 25, 2020, 12:20 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ವಶಪಡಿಸಿಕೊಂಡಿದ್ದ, 53 ಲಕ್ಷ ರೂಪಾಯಿ ಹಣವನ್ನು ಹಿಂದಿರುಗಿಸಲು ನಿರ್ದೇಶಿಸುವಂತೆ ಕೋರಿ ಡಿಕೆಶಿ ಆಪ್ತ ಸಚಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಡಿಕೆಶಿ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು 2017ರ ಅಕ್ಟೋಬರ್ 5ರಂದು ಸಚಿನ್ ಒಡೆತನದ ಹಾಸನ ಹಾಗೂ ಬೆಂಗಳೂರಿನ ಕಚೇರಿಗಳನ್ನೂ ತಪಾಸಣೆ ಮಾಡಿದ್ದರು. ಈ ವೇಳೆ ಸಚಿನ್ ಅವರ ವೆಲ್ ವರ್ತ್ ಸಾಫ್ಟವೇರ್ ಕಚೇರಿಯಲ್ಲಿದ್ದ 53.46 ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು.

ಐಎಂಎ ವಂಚನೆ ಪ್ರಕರಣ: ಬೇಗ್​ರನ್ನು ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ

ಈ ಹಣವನ್ನು ವಾಪಸ್​​ ಕೊಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸಚಿನ್ ತಮ್ಮ ಕಂಪನಿಯ ವಿವಿಧ ಟೆಲಿವಿಷನ್ ಕೇಬಲ್ ನೆಟ್​​ವರ್ಕ್​ಗಳಿಗೆ ಸಂಪರ್ಕ ಒದಗಿಸುತ್ತದೆ. ಅದಕ್ಕಾಗಿ ಕೇಬಲ್ ಆಪರೇಟರ್​​ಗಳು ಹಣ ಪಾವತಿಸುತ್ತಾರೆ. ಈ ಹಣವನ್ನು ಸಿಬಿಐ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಆದ್ದರಿಂದ ಈ ಹಣವನ್ನು ಹಿಂದಿರುಗಿಸಲು ಸಿಬಿಐ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಸಿಬಿಐ ಪರ ವಕೀಲರು ಹಣವನ್ನು ಅರ್ಜಿದಾರರ ಸಮ್ಮುಖದಲ್ಲೇ ವಶಪಡಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಜತೆಗೆ ಹಣ ಮೂಲದ ಬಗ್ಗೆ ವಿವರಿಸಲು ಅಥವಾ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರು. ಡಿಕೆಶಿ ಮತ್ತು ಸಚಿನ್ ನಡುವೆ ಹಣದ ವ್ಯವಹಾರವಿದ್ದು, ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಹಣ ಹಿಂದಿರುಗಿಸಲು ನಿರ್ದೇಶಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸಿಬಿಐ ಪರ ವಕೀಲರ ಕೋರಿಕೆ ಪುರಸ್ಕರಿಸಿದ ನ್ಯಾಯಾಲಯ ಸಚಿನ್ ಮನವಿಯನ್ನು ತಿರಸ್ಕರಿಸಿದೆ.

ABOUT THE AUTHOR

...view details