ಕರ್ನಾಟಕ

karnataka

ETV Bharat / state

ವಿಧಾನಸೌಧ ಮೊಗಸಾಲೆಯಲ್ಲಿ ಡಿಸಿಎಂ ಡಿಕೆಶಿ- ಬಿಜೆಪಿ ಶಾಸಕರ ಫ್ರೆಂಡ್‌ಶಿಪ್; ಪರಸ್ಪರ ಕೈ ಕುಲುಕಿ ಕುಶಲೋಪರಿ - ಈಟಿವಿ ಭಾರತ ಕನ್ನಡ

ಇಂದು ವಿಧಾನಸಭೆ ಮೊಗಸಾಲೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷ ಶಾಸಕರು ಪರಸ್ಪರ ಕೈ ಕುಲುಕಿ ಶುಭ ಹಾರೈಸಿಕೊಂಡರು.

ಡಿಕೆಶಿ ಬಿಜೆಪಿ ಶಾಸಕರ ಫ್ರೆಂಡ್ ಶಿಪ್
ಡಿಕೆಶಿ ಬಿಜೆಪಿ ಶಾಸಕರ ಫ್ರೆಂಡ್ ಶಿಪ್

By

Published : May 22, 2023, 2:12 PM IST

Updated : May 22, 2023, 3:00 PM IST

ವಿಪಕ್ಷ ನಾಯಕರೊಂದಿಗೆ ಡಿಸಿಎಂ ಮಾತುಕತೆ

ಬೆಂಗಳೂರು: ಜಿದ್ದಾಜಿದ್ದಿನ ಚುನಾವಣಾ ಸ್ಪರ್ಧೆಯ ಬಳಿಕ ಇದೀಗ ಗೆದ್ದು ಬಂದ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ಶಾಸಕರು ವಿಧಾನಸೌಧದಲ್ಲಿ ಪರಸ್ಪರ ‌ಕುಶಲೋಪರಿ ವಿಚಾರಿಸುವ ಮೂಲಕ ಫ್ರೆಂಡ್‌ಶಿಪ್ ಪ್ರದರ್ಶಿಸಿದರು. ಮೂರು ದಿನಗಳ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಗೆದ್ದು ಬಂದ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹಿರಿಯರು, ನೂತನ ಶಾಸಕರು ಪರಸ್ಪರ ಹಸ್ತಲಾಘವ ಮಾಡಿ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.

ವಿಧಾನಸಭೆಯಲ್ಲಿ ಈಗ ಸ್ಥಳ ಅದಲು ಬದಲಾಗಿದ್ದು, ಆಡಳಿತ ಪಕ್ಷವಾಗಿದ್ದ ಬಿಜೆಪಿ ಶಾಸಕರು ಈಗ ವಿಪಕ್ಷ ಮೊಗಸಾಲೆಗೆ ಆಗಮಿಸಿದ್ದಾರೆ. ನಿರ್ಗಮಿತ ಸಿಎಂ ಬೊಮ್ಮಾಯಿ, ಶಾಸಕರಾದ ಬಸನಗೌಡ ಯತ್ನಾಳ್, ಎಸ್.ಟಿ.ಸೋಮಶೇಖರ್, ಆರಗ ಜ್ಞಾನೇಂದ್ರ, ಆರ್.ಅಶೋಕ್, ಕೃಷ್ಣಪ್ಪ, ರಮೇಶ್ ಜಾರಕಿಹೊಳಿ, ಎಸ್.ಆರ್ ವಿಶ್ವನಾಥ್, ಸಿ.ಸಿ. ಪಾಟೀಲ್ ಮುಂತಾದವರಿಂದ ಮೊಗಸಾಲೆಯಲ್ಲಿ ಉಭಯ ಕುಶಲೋಪರಿ, ಪರಸ್ಪರ ಆಲಿಂಗನ, ಹ್ಯಾಂಡ್ ಶೇಕ್ ಮಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಗೆ ಆಗಮಿಸಿ ವಿಪಕ್ಷರ ಶಾಸಕರ ಕುಶಲೋಪರಿ ವಿಚಾರಿಸಿದರು. ವಿಪಕ್ಷ ಮೊಗಸಾಲೆಗೆ ಬಂದು ವಿಪಕ್ಷ ಸದಸ್ಯರಿಗೆ ಶುಭ ಕೋರಿದ ಡಿಕೆಶಿ, ಬೊಮ್ಮಾಯಿ, ಯತ್ನಾಳ್, ಮುನಿರತ್ನ, ಅಶೋಕ್, ರಮೇಶ್ ಜಾರಕಿಹೊಳಿ ಮತ್ತಿತರರಿಗೆ ಹ್ಯಾಂಡ್ ಶೇಕ್ ಮಾಡಿದರು. ವಿಪಕ್ಷ ಸದಸ್ಯರ ಜತೆ ಜತೆಗೆ ನಿಂತು ಡಿಕೆಶಿ ಫೋಟೋಗೆ ಪೋಸ್ ಕೊಟ್ಟರು. ಜನಾರ್ದನ ರೆಡ್ಡಿ ಕೈ ಕುಲುಕಿ ಶುಭಾಶಯ ಕೋರಿದ ಡಿಕೆಶಿ ಬಳಿಕ ಒಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡರು.

ಇನ್ನು ರಮೇಶ್ ಜಾರಕಿಹೊಳಿಗೂ ಹೇಗಿದ್ದೀರಾ ಅಂತ ಕೇಳಿ ಡಿಕೆಶಿ ಕೈ ಕುಲುಕಿದರು. ಇತ್ತ ಮೊಗಸಾಲೆಯಲ್ಲಿ ನೂತನ ಶಾಸಕರ ಫೋಟೋ ಸೆಷನ್ ನಡೆಯಿತು. ಒಬ್ಬೊಬ್ಬ ಶಾಸಕರ ಪ್ರೊಫೈಲ್ ಫೊಟೋ ತೆಗೆಯಲಾಯಿತು.

ಡಿಕೆಶಿ, ಆರ್‌‌.ಅಶೋಕ್ ಮುಖಾಮುಖಿ:ಕನಕಪುರದಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದ ಡಿಸಿಎಂ ಡಿಕೆಶಿ ಹಾಗೂ ಬಿಜೆಪಿ ಶಾಸಕ ಆರ್.ಅಶೋಕ್ ಮೊಗಸಾಲೆಯಲ್ಲಿ ಮುಖಾಮುಖಿಯಾದರು. ಇಬ್ಬರ ನಡುವೆ ಸ್ವಾರಸ್ಯಕರ ಸಂಭಾಷಣೆ ನಡೆಯಿತು. ಮಾಜಿ ಸಚಿವ ಆರ್.ಅಶೋಕ್ ಅವ​ರನ್ನು ನೋಡುತ್ತಿದ್ದ ಹಾಗೆ ಡಿಕೆಶಿ ಏ.. ಅಶೋಕ್ ಬಾರಪ್ಪ ಎಂದು ಕರೆದರು. ಮುಂದೆ ಬಂದ ಆರ್.ಅಶೋಕ್ ಬೇಡಪ್ಪ ನಾನು ಏನೂ ಮಾಡಿಲ್ಲ ಎಂದು ಹಾಸ್ಯವಾಗಿ ಪ್ರತಿಕ್ರಿಯಿಸಿದರು. ಬಳಿಕ ಡಿಕೆಶಿ ಏ ನೀ ಏನೂ ಮಾಡಬೇಡ ಪಕ್ಕ ಬಾ ಎಂದು ಕರೆದು ತಮ್ಮ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗೆಸಿಕೊಂಡರು. ಮೊದಲ ದಿನ ವಿಧಾನಸೌಧ ಪ್ರವೇಶಿಸಿದ ನೂತನ ಹೊಸ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ಬಂದು ಅಧಿವೇಶನದಲ್ಲಿ ವೀಕ್ಷಕರ ಲಾಂಜ್​ನಲ್ಲಿ ಕೂತು ಪ್ರಮಾಣವಚನ ಸ್ವೀಕಾರಕ್ಕೆ ಸಾಕ್ಷಿಯಾದರು.

ಎಸ್​ ಎಂ ಕೃಷ್ಣ ಭೇಟಿ ಮಾಡಿದ ಡಿಕೆಶಿ:ಇಂದು ಬೆಳಗ್ಗೆಡಿ ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಬೆಂಗಳೂರಿನ ಇತಿಹಾಸದ ಪುಸ್ತಕವನ್ನು ಸ್ವಹಸ್ತಾಕ್ಷರದೊಂದಿಗೆ ಪ್ರೀತಿ ಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ:ಮೊದಲ ದಿನದ ವಿಧಾನಸಭಾ ಅಧಿವೇಶನ: ಎತ್ತಿನ ಗಾಡಿಯಲ್ಲಿ ಆಗಮಿಸಿದ ನೂತನ ಶಾಸಕರು- ವಿಡಿಯೋ

Last Updated : May 22, 2023, 3:00 PM IST

ABOUT THE AUTHOR

...view details