ಬೆಂಗಳೂರು:ಮಾಜಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ಇಡಿ ಅಧಿಕಾರಿಗಳು ಅಗಸ್ಟ್ 29ರಂದು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಇಡೀ ರಾತ್ರಿ ಆಪ್ತರು, ಕಾನೂನು ಸಲಹೆಗಾರರ ಜತೆ ದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇಡಿ ಅಧಿಕಾರಿಗಳಿಂದ ಸಮನ್ಸ್ ಹಿನ್ನೆಲೆ.. ರಾತ್ರೋರಾತ್ರಿ ವಕೀಲರು, ಆಪ್ತರ ಜೊತೆಗೆ ಡಿಕೆಶಿ ಚರ್ಚೆ.. - ಇಡಿ ಅಧಿಕಾರಿಗಳಿಂದ ಸಮನ್ಸ್
ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆಪ್ತರು, ಕಾನೂನು ಸಲಹೆಗಾರರೊಂದಿಗೆ ಈ ಕುರಿತು ರಾತ್ರಿಯಿಡಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಡಿಕೆಶಿ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಮಾಜಿ ಸಂಸದ ಶಿವರಾಮೇಗೌಡ, ಆಪ್ತ ವಿಜಯ್ ಮುಳಗುಂದ ಸೇರಿದಂತೆ ಇನ್ನು ಕೆಲ ಆಪ್ತರೊಂದಿಗೆ ಡಿಕೆಶಿ ಮನೆಯಲ್ಲಿಯೇ ಚರ್ಚೆ ನಡೆಸಿದ್ದಾರೆ. ವಿಚಾರಣೆ ವೇಳೆ ಏನು ಮಾಡಬೇಕು? ಅಧಿಕಾರಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಸಿಕ್ಕಿರುವ ಹಣದ ಮೂಲಗಳ ಬಗ್ಗೆ ಮಾಹಿತಿ ನೀಡುವಂತೆ ಡಿಕೆಶಿಗೆ ಇಡಿ ಸಮನ್ಸ್ ನೀಡಿದೆ. ದಾಖಲಾತಿ ನೀಡಲು ಕಾಲಾವಕಾಶ ಕೇಳಬಹುದು ಅಥವಾ ಇಂದು ವಿಚಾರಣೆಗೆ ಹಾಜರಾಗಲು ವಕೀಲರ ಜೊತೆ ತೆರಳುವ ಸಾಧ್ಯತೆಯೂ ಇದೆ. ಅನುಮತಿಯ ಮೇರೆಗೆ ಡಿಕೆಶಿ ಅವರನ್ನು ಬಂಧಿಸಲೂಬಹುದು.