ಬೆಂಗಳೂರು: ಕನಕಪುರದಲ್ಲಿ ಕಲ್ಲು ಪಲ್ಲೊ ಒಡ್ಕೊಂಡು ಇರ್ತಿನಿ. ಆದ್ರೆ ದಿಲ್ಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕನಕಪುರದಲ್ಲೇ ಕಲ್ಲೊ ಪಲ್ಲೊ ಒಡ್ಕೊಂಡಿರ್ತಿನಿ, ದೆಹಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ: ಡಿಕೆಶಿ - DKS Reaction about KPCC President Post
ಕನಕಪುರದಲ್ಲಿ ಕಲ್ಲು ಹೊಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ, ದಿಲ್ಲಿ ರಾಜಕೀಯಕ್ಕೆ ಮಾತ್ರ ಹೋಗಲ್ಲ. ರಾಜ್ಯದಲ್ಲಷ್ಟೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುವುದಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ ಬೆಳೆಯುತ್ತೇನೆ. ರಾಜ್ಯದಲ್ಲಷ್ಟೇ ರಾಜಕಾರಣ ಮಾಡುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಟ್ರೆ ನಿಭಾಯಿಸುವುದಾಗಿ ಹೇಳಿದ್ರು.
ನೋಟಿಸ್ ಬಂದಿಲ್ಲ:ನನಗೆ ಇಡಿ ನೋಟಿಸ್ ಬಂದಿಲ್ಲ. ಈ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಅಷ್ಟೇ. ಡಿನೋಟಿಫಿಕೇಷನ್ ಪ್ರಕರಣವನ್ನು ಸುಪ್ರೀಂಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐನಿಂದಲೂ ಯಾವುದೇ ನೋಟಿಸ್ ಬಂದಿಲ್ಲ. ಒಂದು ಸಿಬಿಐ ತನಿಖೆಗೆ ಬಂದ್ರೆ ನನ್ನ ಮನೆ ಬಾಗಿಲು ತರೆದೇ ಇರುತ್ತೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ರು.