ಬೆಂಗಳೂರು:ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ಇಡಿ ಬಂಧಿಸಿ ವಿಚಾರಣೆಗೆ ಗುರಿ ಪಡಿಸಿದ ಬೆನ್ನಲ್ಲಿಯೇ ಬಂಧನದಿಂದ ರಕ್ಷಣೆ ಕೋರಿ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮಾ ಹಾಗೂ ಆಂಜನೇಯ ಹನುಮಂತಯ್ಯ, ರಾಜೇಂದ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಹೈಕೋರ್ಟ್ ತಮ್ಮನ್ನ ನಾಲ್ಕು ವಾರಗಳ ಅವಧಿಗೆ ಬಂಧಿಸದಂತೆ ಇಡಿಗೆ ಆದೇಶ ನೀಡಿತ್ತು. ಜಾರಿ ನಿರ್ದೇಶನಾಲಯ ತಮ್ಮನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಆತಂಕ ಇದೆ. ಹೀಗಾಗಿ ಇಡಿ ಬಂಧಿಸಬಾರದೆಂದು ತಡೆಯಾಜ್ಞೆ ನೀಡುವಂತೆ ಡಿಕೆಶಿ ಆಪ್ತರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.