ಬೆಂಗಳೂರು:ಡಿ ಕೆ ಶಿವಕುಮಾರ್ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಕಣ್ಣೀರು ಹಾಕಿ ಜೈಲಿಗೆ ಹೋದರೆ ಅನುಕಂಪ ಬರುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದ್ರೆ ಇಂತಹ ಎಷ್ಟು ಸ್ಟೋರಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ದುರ್ಬಳಕೆ ಸಂಬಂಧ ಬಿಜೆಪಿ ವಿರುದ್ಧ ನಿರಾಧಾರ ಆರೋಪ ಮಾಡಲಾಗುತ್ತಿದೆ. ಪಿ.ಚಿದಂಬರಂ ಮತ್ತು ಡಿ.ಕೆ ಶಿವಕುಮಾರ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ವರೆಗೆ ಅವರ ವಾದವನ್ನು ತಳ್ಳಿ ಹಾಕಿದ್ದಾರೆ. ಅವರ ವಾದದಲ್ಲಿ ಒಂದಂಶವಾದರೂ ಸತ್ಯವಿದ್ದರೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳುತ್ತಿತ್ತು ಎಂದು ಡಿಕೆಶಿ ಬಂಧನವನ್ನು ಸಮರ್ಥಿಸಿಕೊಂಡರು.