ಕರ್ನಾಟಕ

karnataka

ಹಾಸಿಗೆ ಹೊಲಿಯುವ ಕಾರ್ಮಿಕರಿಗೆ ಪರಿಹಾರ ನೀಡಲು ಸಿಎಂಗೆ ಡಿಕೆಶಿ ಮನವಿ

By

Published : Aug 3, 2020, 7:18 PM IST

ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಹಾಸಿಗೆ ಹೊಲಿಯುವ ಕೆಲಸ ಮಾಡುತ್ತಿದ್ದು, ಇದರಿಂದ ಅವರ ಜೀವನ ನಿರ್ವಹಣೆ ನಡೆಯುತ್ತಿದೆ. ಲಾಕ್ ಡೌನ್ ಪರಿಸ್ಥಿತಿ ಹಾಗೂ ಜಾಗತಿಕ ಕಂಪನಿಗಳ ಭರಾಟೆಯಿಂದಾಗಿ ಉದ್ಯೋಗವಿಲ್ಲದೆ ದಿನದ ಜೀವನ ನಿರ್ವಹಣೆಗೂ ಪರಿತಪಿಸುವಂತಾಗಿದೆ. ಈ ಹಿನ್ನೆಲೆ ಅವರಿಗೆ ಪರಿಹಾರ ನೀಡಿ ಎಂದು ಸಿಎಂಗೆ ಡಿಕೆಶಿ ಮನವಿ ಮಾಡಿದ್ದಾರೆ.

DKS appeals to CM  for provide fund to bed sewing workers
ಹಾಸಿಗೆ ಹೊಲಿಯುವ ಕಾರ್ಮಿಕರಿಗೆ ಪರಿಹಾರ ನೀಡಲು ಸಿಎಂಗೆ ಡಿಕೆಶಿ ಮನವಿ

ಬೆಂಗಳೂರು: ಹಾಸಿಗೆ ಹೊಲಿಯುವ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮನವಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಪ್ರವರ್ಗ 1 ರಲ್ಲಿ ಬರುವ ಸಮುದಾಯದ ನಾಗರಿಕರ ಅಹವಾಲು ಸ್ವೀಕರಿಸಿದ ನಂತರ ಅವರು, ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಹಾಸಿಗೆ ಹೊಲಿಯುವ ಕೆಲಸ ಮಾಡುತ್ತಿದ್ದು, ಇದರಿಂದ ಅವರ ಜೀವನ ನಿರ್ವಹಣೆ ನಡೆಯುತ್ತಿದೆ. ಅವರನ್ನು ಪ್ರವರ್ಗ-1 ರಲ್ಲಿ ಬರುವ ಪಿಂಜಾರ, ನದಾಫ್, ಮನ್ಸೂರಿ, ದೂದೆಖುಲಾ ಲಾದನ್‌ ಹೆಸರಿನಿಂದ ಗುರುತಿಸಲಾಗಿದೆ. ಸದರಿ ಸಮುದಾಯದವರು ಕೋವಿಡ್ ಸಂಕಷ್ಟ, ಲಾಕ್ ಡೌನ್ ಪರಿಸ್ಥಿತಿ ಹಾಗೂ ಜಾಗತಿಕ ಕಂಪನಿಗಳ ಭರಾಟೆಯಿಂದಾಗಿ ಉದ್ಯೋಗವಿಲ್ಲದೆ ದಿನದ ಜೀವನ ನಿರ್ವಹಣೆಗೂ ಪರಿತಪಿಸುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮನವಿ ಪತ್ರ

ಈ ಸಮುದಾಯದವರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿಯಂತೆ ಪರಿಹಾರ ನೀಡಬೇಕು ಎಂದು ಪತ್ರದ ಮೂಲಕ ತಮ್ಮನ್ನು ಆಗ್ರಹಿಸುತ್ತಿದ್ದೇನೆ. ಜತೆಗೆ ಈ ಸಮಾಜದಒಕ್ಕೂಟ ಆಲ್ ಇಂಡಿಯಾ (ರಿ) ಜಮೀಯತುಲ್ ಮನ್ಸೂರ್ ಕರ್ನಾಟಕ ಸಂಘಟನೆ ಪದಾಧಿಕಾರಿಗಳನ್ನು ಕರೆದು ತಾವೇ ಖುದ್ದಾಗಿ ಅವರ ಅಹವಾಲುಗಳನ್ನು ಆಲಿಸಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details