ಕರ್ನಾಟಕ

karnataka

ETV Bharat / state

ಫಲ ಕೊಡದ ಉಪಸಮರ... ಯಶ ಕಾಣಲಿಲ್ಲ ಡಿಕೆಶಿ, ಹೆಚ್​ಡಿಕೆ ಆಂತರಿಕ ತಂತ್ರಗಾರಿಕೆ - ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಸುದ್ದಿ

ಅನರ್ಹರ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ಹೆಣೆದಿದ್ದ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಂತರಿಕ ತಂತ್ರಗಾರಿಕೆ ಯಶಸ್ಸಿಗಿಂತ ಸೋಲನ್ನೇ ದೊಡ್ಡಮಟ್ಟದಲ್ಲಿ ತಂದಿದೆ.

ಡಿಕೆಶಿ - ಎಚ್ ಡಿಕೆ ತಂತ್ರ, ಪ್ರತಿತಂತ್ರ
ಡಿಕೆಶಿ - ಎಚ್ ಡಿಕೆ ತಂತ್ರ, ಪ್ರತಿತಂತ್ರ

By

Published : Dec 9, 2019, 10:34 PM IST

Updated : Dec 9, 2019, 11:11 PM IST

ಬೆಂಗಳೂರು: ಅನರ್ಹರ ವಿರುದ್ಧ ಸೇಡು ತೀರಿಸಿಕೊಳ್ಳಲು ತಂತ್ರ ಹೆಣೆದಿದ್ದ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಆಂತರಿಕ ತಂತ್ರಗಾರಿಕೆ ಯಶಸ್ಸಿಗಿಂತ ಸೋಲನ್ನೇ ದೊಡ್ಡಮಟ್ಟದಲ್ಲಿ ತಂದಿದೆ.

ಇಬ್ಬರೂ ನಾಯಕರು ಒಟ್ಟಾಗಿ ತಂತ್ರಗಾರಿಕೆ ಹೆಣೆಯುವ ಮೂಲಕ ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರನ್ನು ಎಲ್ಲಾ ಕಡೆ ಸೋಲಿಸಬೇಕು ಎಂದು ಪಣ ತೊಟ್ಟಿದ್ದರು, ಆದರೆ ಹೊಸಕೋಟೆ ಹುಣಸೂರಿನಲ್ಲಿ ಮಾತ್ರ ಈ ಜುಗಲ್ ಬಂದಿಗೆ ಯಶಸ್ಸು ಸಿಕ್ಕಿದ್ದು, ಉಳಿದ ಯಾವ ಕ್ಷೇತ್ರದಲ್ಲಿಯೂ ಫಲ ಸಿಕ್ಕಿಲ್ಲ.

ಹೆಚ್‌ಡಿಕೆ, ಡಿಕೆಶಿ ಹೆಣೆದಿದ್ದ ತಂತ್ರಗಳು ಎಲ್ಲಾ ಕಡೆಯೂ ನಿರಾಸೆ ಎದುರಾಗಿದೆ. ಯಶವಂತಪುರ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲೆಕ್ಕಾಚಾರ ಹಾಕಿದ್ದ ಇವರಿಗೆ ಎಲ್ಲಿಯೂ ಫಲ ಸಿಕ್ಕಿಲ್ಲ. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸೂತ್ರದಂತೆ ಪಕ್ಷ‌ ಮೀರಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ಹೀಗಾಗಿ ಈ ಇಬ್ಬರು ನಾಯಕರು ರೂಪಿಸಿದ್ದ ತಂತ್ರಗಳೂ ಸಂಪೂರ್ಣ ಉಲ್ಟಾ ಹೊಡೆದಿವೆ.

ಒಕ್ಕಲಿಗ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಹೇಳದಿದ್ದರೂ ಅದು ಕೈಗೂಡಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ ಗೆ ಸಂಪೂರ್ಣ ಸಹಕಾರ ನೀಡಿದ್ದರೂ ಇಲ್ಲಿ ಡಿಕೆಶಿಗೆ ಬಿಜೆಪಿ ಅಭ್ಯರ್ಯಾಗಿ ಕಣಕ್ಕಿಳಿದಿದ್ದ ಎಸ್.ಟಿ ಸೋಮಶೇಖರ್ ಸೋಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ಜಾತಿ ಲೆಕ್ಕಾಚಾರದಲ್ಲೇ ತಂತ್ರ ಹೆಣೆದಿದ್ದರೂ ಫಲಕೊಟ್ಟಿಲ್ಲ. ಇದಕ್ಕಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದ ಡಿಕೆಶಿಗೆ ಆಸೆ ಕೈಗೂಡಿಲ್ಲ.

ಎರಡು ಮೂರು ಬಾರಿ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿದ್ದ ಡಿಕೆಶಿ, ಹೆಚ್‌ಡಿಕೆ ಜೋಡಿಯಿಂದ ಸುಧಾಕರ್ ಬಲ ಮಣಿಸಲು ಸಾಧ್ಯವಾಗಲೇ ಇಲ್ಲ. ಏನೇ ಪ್ರತಿತಂತ್ರ ರೂಪಿಸಿದರೂ ಡಾ. ಸುಧಾಕರ್ ಭಾರೀ ‌ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಹೆಚ್​ಡಿಕೆ ಡಿಕೆಶಿ ಜೋಡಿಗೆ ತೀವ್ರ ಹಿನ್ನೆಡೆ ಎದುರಾಗುವಂತೆ ಆಗಿದೆ.

Last Updated : Dec 9, 2019, 11:11 PM IST

ABOUT THE AUTHOR

...view details