ಬೆಂಗಳೂರು:ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ. ರಾಹುಲ್ ಗಾಂಧಿ ಅವರು ಯಾವುದೆ ಸೂಚನೆಯನ್ನು ಕೊಟ್ಟಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ವರ್ಧೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆಯವರು ಬೇರೆ ಬೇರೆ ರೀತಿ ವಿಮರ್ಷೆ ಮಾಡಿರಬಹುದು. 224 ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎಲ್ಲಿ ಬೇಕಾದರು ಸ್ಪರ್ಧೆ ಮಾಡಬಹುದು. ಕೋಲಾರ ಇಡೀ ಜಿಲ್ಲೆಯ ವಾತಾವರಣ ಚೆನ್ನಾಗಿದೆ. ಕೋಲಾರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಕೋಲಾರ ಜಿಲ್ಲೆ ನಾಯಕರೆ ಕೇಳಿದ್ದಾರೆ. ಸಿದ್ದರಾಮಯ್ಯ ಎಲ್ಲಿ ಕೇಳಿದರೆ ಅಲ್ಲಿ ಟಿಕೆಟ್ ಕೊಡ್ತಾರೆ. ಅವರೇ ಟಿಕೆಟ್ ಕೊಡೋರು ಅವರಿಗೆ ಟಿಕೆಟ್ ಸಿಗಲ್ವಾ ಎಂದು ಹೇಳಿದರು.
ರಾಜ್ಯಕ್ಕೆ ರಾಹುಲ್ ಬರುವುದರಿಂದ ಮುಂಬರುವ ಚುನಾವಣೆ ಮೇಲೆ ಪರಿಣಾಮ ಬಿರುವುದಿಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಹೇಳಿರುವುದು ನಮಗಲ್ಲ. ಪ್ರಧಾನಿ ಮೋದಿ, ಅಮಿಶ್ ಶಾ ಅವರಿಗೆ. ಕನ್ನಡ ಅವರಿಗೆ ಬರುತ್ತಾ, ನಡ್ಡಾ ಅವರಿಗೆ ಕನ್ನಡ ಬರುತ್ತಾ ಎನ್ರಿ? ಹಿಂದಿ ಹೇರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಕನ್ನಡಿಗರು ಸ್ವಾಭಿಮಾನಿಗಳು, ನಿಮ್ಮ ಮಾತಿಗೆ ಮರುಳು ಆಗುವುದಿಲ್ಲ. ನಿಮ್ಮ ಪೊಳ್ಳು ಭರವಸೆ ಇದೆ ಅಲ್ವ? ಸುಳ್ಳು ಹೇಳಿ ಅಧಿಕಾರ ಗಿಟ್ಟಿಸುವುದು ಇವೆಲ್ಲ ಬಯಲಾಗಿದೆ. ಇದು ನಡೆಯುವುದಿಲ್ಲ. ಶೋಭಾ ಕರಂದ್ಲಾಜೆ ಅವರ ನಾಯಕರಿಗೆ ಹೇಳಿರೋದು. ರಾಹುಲ್ ಗಾಂಧಿಗೆ ಅಲ್ಲ ಎಂದು ತಿರುಗೇಟು ನೀಡಿದರು.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಜಾತಿ ಕಾರಣಗಳಿಂದ ರಾಜಕೀಯ ಮಾಡ್ತಾ ಇರೋದು ಬಿಜೆಪಿ. ಅವರಿಗೆ ಆ ಭಾಗದಲ್ಲಿ ಅಸ್ತಿತ್ವ ಇಲ್ಲ. ಎನಾದ್ರು ಒಂದು ಹೊಸದು ಹುಟ್ಟು ಹಾಕಬೇಕು ಅಲ್ವ? ಅಲ್ಲಿ ಎಲ್ಲೂ ರಾಮನ ಹುಟ್ಟಿಹಾಕಿದ್ರು, ಇನ್ನೆಲ್ಲೊ ಹನುಮಂತನ ಹುಟ್ಟಿಹಾಕಿದ್ರು. ಕೃಷ್ಣನ ಹುಟ್ಟಿಹಾಕಿದ್ರು. ಎಲ್ಲ ತಾಲ್ಲೂಕಿನಲ್ಲಿ ರಾಮದೇವರ ಬೆಟ್ಟ ಇದೆ. ಎಲ್ಲ ಕಡೆ ಪ್ರತಿಮೆ ಮಾಡ್ತಾರಾ? ಎಲ್ಲ ತಾಲ್ಲೂಕಿನಲ್ಲಿ ಅಂಜನಾದ್ರಿ ಬೆಟ್ಟಗಳಿವೆ. ಜನ ನಂಬಿಕೆಯಿಂದ ಬೆಟ್ಟಗಳಿಗೆ ಇಂತವರು ಬಂದಿದ್ರು ಅಂತ ಹೇಳಿ. ಇತಿಹಾಸದಲ್ಲಿ ಇದೆ ಅಂತ ಹೇಳಿ ಪೂಜೆ ಮಾಡ್ತಾ ಇದ್ದಾರೆ. ಹಾಗಾದ್ರೆ ಎಲ್ಲ ಕಡೆ ಪ್ರತಿಮೆ ಇಡ್ತಾರಾ ಇವ್ರು? ಚುನಾವಣಾ ಗಿಮಿಕ್ ಬಿಟ್ರೆ ಬೇರೆ ಎನು ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ನಿರೀಕ್ಷೆ ಮೀರಿ ಹೆಚ್ಚಿನ ಸ್ಥಾನ ಗಳಿಸುತ್ತೇವೆ:ಶಿವರಾಮೇಗೌಡ ಬಿಜೆಪಿ ಸೇರ್ಪಡೆ ವಿಚಾರ ಮಾತನಾಡಿ, ಮೋದಿ ಇತ್ತೀಚೆಗೆ ರೌಡಿ ಫೈಟರ್ ರವಿಗೆ ನಮಸ್ಕಾರ ಮಾಡಿದ್ರು ಅದರ ಬಗ್ಗೆ ಮಾತಾಡಿ. ಸ್ಯಾಂಟ್ರೊ ರವಿ ಆಯ್ತು, ಫೈಟರ್ ರವಿಗೆ ನಮಸ್ಕಾರ ಮಾಡಿಸಿದ್ರಲ್ಲಪ್ಪ. ಏನೇನು ನಡೆಯುತ್ತಾ ಇದೆ. ರಾಜ್ಯದ ಜನರು ನೋಡ್ತಾ ಇದ್ದಾರೆ. ಹಳೆ ಮೈಸೂರು ಭಾಗದಲ್ಲಿ ಎಷ್ಟು ಸ್ಥಾನ ಕಾಂಗ್ರೆಸ್ ಗಳಿಸುತ್ತೆ ಎಂಬ ವಿಚಾರವಾಗಿ ನನಗೆ ಅಷ್ಟೇಲ್ಲ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಎಲ್ಲಾ 8 ಕಡೆ ಗೆಲ್ಲಬೇಕು. ಮಂಡ್ಯದಲ್ಲಿ ನಿರೀಕ್ಷೆ ಮೀರಿ ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದರು.