ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ಗೆ ಮತ್ತೆ ಹಳೆ ವೈಭವ ತಂದುಕೊಡುವ ಪ್ರಯತ್ನ; ಡಿಕೆಶಿ ಭೇಟಿ ಮಾಡಿದ ತೆಲಂಗಾಣ ಸಂಸದ - ತೆಲಂಗಾಣ ವಿಭಜನೆಗೆ ಮುನ್ನ ಕಾಂಗ್ರೆಸ್ ಸ್ಥಿತಿಗತಿ

ಕಾಂಗ್ರೆಸ್​ಗೆ ಮತ್ತೆ ಹಳೆ ವೈಭವ ತಂದುಕೊಡುವ ಪ್ರಯತ್ನ ತೆಲಂಗಾಣ ರಾಜ್ಯದಲ್ಲಿ ಗಂಭೀರವಾಗಿ ನಡೆದಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ವಿವಿಧ ರಾಜ್ಯಗಳಿಗೆ ತೆರಳಿ ಅಲ್ಲಿನ ಪ್ರಭಾವಿ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಸಂಸದ ಕೋಮ್ಟಿರೆಡ್ಡಿ ವೆಂಕಟರೆಡ್ಡಿ ರಾಜ್ಯಕ್ಕೆ ಭೇಟಿಕೊಟ್ಟಿದ್ದರು.

DK Sivakumar discussed with Telangana MP
ತೆಲಂಗಾಣ ಸಂಸದನೊಂದಿಗೆ ಚರ್ಚೆ ನಡೆಸಿದ ಡಿಕೆ ಶಿವಕುಮಾರ್

By

Published : Dec 23, 2020, 1:57 AM IST

ಬೆಂಗಳೂರು:ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನಕ್ಕೆ ತೆರಳಿ ವಾಪಸಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲಿ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ಕನಕಪುರಕ್ಕೆ ತೆರಳಿ ಮತದಾನ ಮಾಡಿದ ನಂತರ ಸಂಜೆ ಸದಾಶಿವನಗರ ನಿವಾಸಕ್ಕೆ ವಾಪಸಾದ ಡಿಕೆಶಿ, ವಿವಿಧ ನಾಯಕರನ್ನು ಭೇಟಿ ಮಾಡಿ ರಾಜಕೀಯ ಚರ್ಚೆ ನಡೆಸಿದರು. ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು ನಿರಂತರವಾಗಿ ಭೇಟಿ ಮಾಡಿ ಸಮಾಲೋಚಿಸುತ್ತಿರುವ ಶಿವಕುಮಾರ್, ಪಕ್ಷ ಸಂಘಟನೆ ಹಾಗೂ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದ್ದಾರೆ.

ಮಂಗಳವಾರ ಸಂಜೆ ತೆಲಂಗಾಣದ ಬೋಂಗಿರ್ ಲೋಕಸಭಾ ಕ್ಷೇತ್ರದ ಸದಸ್ಯ ಕೋಮ್ಟಿರೆಡ್ಡಿ ವೆಂಕಟರೆಡ್ಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಸಂಜೆ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ನಾಯಕರ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ ತಾರೀಖ್ ಅನ್ವರ್

ವಿಭಜನೆಗೂ ಮುನ್ನ ಕಾಂಗ್ರೆಸ್​ಗೆ ಉತ್ತಮ ನೆಲೆ ನೀಡಿದ ತೆಲಂಗಾಣ ಭಾಗದಲ್ಲಿ ಮತ್ತೊಮ್ಮೆ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಕ್ಕೆ ಡಿಕೆಶಿ ಒಂದಿಷ್ಟು ಸಲಹೆ ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ವಿಭಜನೆಗೆ ಮುನ್ನ ಕಾಂಗ್ರೆಸ್ ಶಕ್ತಿಶಾಲಿ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಇದೀಗ ಟಿಎಸ್ಆರ್, ವೈಎಸ್ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳ ಪ್ರಭಾವದ ಮುಂದೆ ಮಂಕಾಗಿದೆ. ಕಾಂಗ್ರೆಸ್​ಗೆ ಮತ್ತೆ ಹಳೆ ವೈಭವ ತಂದುಕೊಡುವ ಪ್ರಯತ್ನ ತೆಲಂಗಾಣ ರಾಜ್ಯದಲ್ಲಿ ಗಂಭೀರವಾಗಿ ನಡೆದಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ವಿವಿಧ ರಾಜ್ಯಗಳಿಗೆ ತೆರಳಿ ಅಲ್ಲಿನ ಪ್ರಭಾವಿ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಸಂಸದ ಕೋಮ್ಟಿರೆಡ್ಡಿ ವೆಂಕಟರೆಡ್ಡಿ ರಾಜ್ಯಕ್ಕೆ ಭೇಟಿಕೊಟ್ಟಿದ್ದರು.

ತಾರೀಖ್ ಅನ್ವರ್ ಅವರನ್ನು ಸನ್ಮಾನಿಸಿದ ಡಿಕೆ ಶಿವಕುಮಾರ್

ತಾರೀಖ್ ಅನ್ವರ್ ಭೇಟಿ:

ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ರಾತ್ರಿ ಭೇಟಿ ಮಾಡಿ, ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ತಾರೀಖ್ ಅನ್ವರ್ ಅವರನ್ನು ಸನ್ಮಾನಿಸಿದರು.

ABOUT THE AUTHOR

...view details