ಕರ್ನಾಟಕ

karnataka

ETV Bharat / state

ನನಗೆ ಯಾವ ಅಕ್ರಮ ಗಣಿಗಾರಿಕೆ ಬಗ್ಗೆನೂ ಗೊತ್ತಿಲ್ಲ, ನನಗೆ ಈ ಬಗ್ಗೆ ಯಾರೂ ಹೇಳಿಲ್ಲ: ಡಿ.ಕೆ. ಶಿವಕುಮಾರ್ - ಸುಮಲತಾ ಹೆಚ್​​ಡಿಕೆ ವಾಗ್ವಾದ

ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಹಾನಿಯಾಗುತ್ತಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆ ವಿಷಯ ನನಗೆ ಗೊತ್ತೇ ಇಲ್ಲ ಎಂದಿದ್ದಾರೆ.

Kpcc president DK Shivkumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

By

Published : Jul 11, 2021, 1:39 PM IST

ಬೆಂಗಳೂರು : ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾನು ಸಚಿವನಾಗಿದ್ದ ಸಂದರ್ಭ ಯಾವುದೇ ಮಾಹಿತಿಯನ್ನು ಯಾರೂ ನೀಡಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಮಂಡ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಒಂದಷ್ಟು ದಿನ ಜಿಲ್ಲಾ ಮಂತ್ರಿ ಆಗಿದ್ದೆ, ನೀರಾವರಿ ಮಂತ್ರಿನೂ ಆಗಿದ್ದೆ. ಯಾರೂ ಬಂದು ಗಣಿಗಾರಿಕೆಯ ಸುದ್ದಿ ಮಾತನಾಡಿಲ್ಲ. ಎಲ್ಲೋ ಒಂದು 10 -15 ಕಿ.ಮೀ ಗೂ ಜಲ್ಲಿ ಕಲ್ಲಿಂದ ಏನು ವ್ಯತ್ಯಾಸ ಆಗುವುದಿಲ್ಲ. ಅದಕ್ಕೆಲ್ಲ ಬೌಂಡರಿ ಇದೆ, ಯಾರ್ಡ್ ಸ್ಟಿಕ್ ಇದೆ, ಲೆಕ್ಕಾಚಾರ ಇದೆ, ಗಣಿ ಇಲಾಖೆ ಇದೆ. ನೂರಾರು ಇಂಜಿನಿಯರ್​ಗಳು ಇದ್ದಾರೆ. ಅವರೆಲ್ಲ ನೋಡಿಕೊಳ್ಳುತ್ತಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ನಾವು ನಿಮ್ಮ ಜೊತೆ ಮಾತನಾಡಿ ಕೆಆರ್​ಎಸ್​ ಬಿರುಕು ಬಿಟ್ಟಿದೆ ಅಂತ ಜನರಲ್ಲಿ ಆತಂಕ ಮೂಡಿಸಿ ಚೀಪ್ ಪಾಪ್ಯುಲಾರಿಟಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಇದು ಅತ್ಯಂತ ಸೂಕ್ಷ ವಿಚಾರ, ಕೆಆರ್​​​ಎಸ್​ ಡ್ಯಾಂ ರಾಜ್ಯ, ರಾಷ್ಟ್ರದ ಆಸ್ತಿ. ಈ ಆಸ್ತಿ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿದ್ದು, ಸರಿಯಾಗಿ ಹೇಳಬೇಕು.

ನಮ್ಮ ಮನೆಯಲ್ಲಿ ಕೂಡ ಕೆಆರ್​ಎಸ್​ ಬಗ್ಗೆ ಗಾಬರಿ ಆಗ್ತಿದೆ ಎನ್ನುತ್ತಿದ್ದಾರೆ. ನಮಗೆಲ್ಲ ಗೊತ್ತಿದೆ, ಅದರ ಎಫೆಕ್ಟ್ ಏನು ಎಂದ ಅಂತ ಹೇಳಿದರು. ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಹಾನಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಆ ಸುದ್ದೀನೇ ನನಗೆ ಗೊತ್ತಿಲಪ್ಪ ಎಂದರು.

ಓದಿ : ಮಂಡ್ಯ ಜನ ಒಂದು ಸಾರಿ ಕೆರಳಿದ್ರೆ ಅತಿರೇಕಕ್ಕೆ ಹೋಗ್ತಾರೆ : ರಾಕ್​ಲೈನ್​ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು

ಮದ್ದೂರಿನ ಕೆ.ಎಂ ದೊಡ್ಡಿಯಲ್ಲಿ ಕಾರ್ಯಕರ್ತನಿಗೆ ಹೊಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಅವನು ನಮ್ ಹುಡುಗನೇ, ನನ್ ಸಂಬಂಧಿಕ. ಏನೋ ಹೆಗಲ ಮೇಲೆ ಕೈ ಹಾಕೋಕ್ ಬರ್ತಾ ಇದ್ದ. ನೋಡಿದವರು ಏನಂತಾರೆ? ಟಿವಿಯವರು ಏನಂತಾರೆ? ಅದಕ್ಕೆ ಒಂದೇಟು ಜೋರಾಗಿ ಹೊಡೆದೆ ಅಂದ್ರು.

ಜಾತಿ ಗಣತಿ ವಿಚಾರ ಪ್ರಸ್ತಾಪಿಸಿ, ಹಿಂದುಳಿದ ಸಮುದಾಯಗಳ ನಾಯಕರು ನನ್ನ ಭೇಟಿ ಮಾಡಿದ್ದಾರೆ. ಸರ್ಕಾರ 170 ಕೋಟಿ ರೂ. ಖರ್ಚುಮಾಡಿದೆ. ಹಾಗಾಗಿ, ಬೇಗ ಜಾತಿ ಗಣತಿಯ ವರದಿ ಬೇಗ ಬಿಡುಗಡೆ ಮಾಡಲಿ ಎಂದಿದ್ದಾರೆ. ಈ ವಿಚಾರದಲ್ಲಿ ನಾನೊಬ್ಬನೇ ಹೇಳಲು ಸಾಧ್ಯವಿಲ್ಲ. ನಾನು ಪಕ್ಷದ ಅಧ್ಯಕ್ಷ, ನಾನು ಮತ್ತು ಪ್ರತಿಪಕ್ಷದ ನಾಯಕರು ಚರ್ಚೆ ಮಾಡಿದ್ದೇವೆ. ಬಿಜೆಪಿಯವರು ಏನು ಚರ್ಚೆ ಮಾಡುತ್ತಾರೋ ನೋಡೋಣ ಎಂದು ಹೇಳಿದರು.

ABOUT THE AUTHOR

...view details