ಕರ್ನಾಟಕ

karnataka

ETV Bharat / state

ಪಕ್ಷದ ತತ್ವ ಸಿದ್ಧಾಂತ ತಿಳಿಸಿ ಮಹಿಳಾ ಸಮುದಾಯವನ್ನು ಸೆಳೆಯಿರಿ : ಸ್ತ್ರೀಶಕ್ತಿ ಸಮಿತಿಗೆ ಡಿಕೆಶಿ ಸಲಹೆ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಮಹಿಳೆಯರೆಲ್ಲ ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕೈಗೊಳ್ಳುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಚಾರಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ, ಮಹಿಳೆಯರನ್ನು ವಿಶ್ವಾಸಕ್ಕೆ ಪಡೆದು ಅವರಿಗೆ ಕಾಂಗ್ರೆಸ್ ಪಕ್ಷದ ತತ್ವ,ಸಿದ್ಧಾಂತ ಹಾಗೂ ಮಹಿಳೆಯರಿಗೆ ನೀಡಿದ ಕಾರ್ಯಕ್ರಮಗಳ ಕುರಿತು ಮನವರಿಕೆ ಮಾಡಿ ಕೊಡಿ. ಯುವ ಸಾಧಕಿಯರನ್ನ ಗುರುತಿಸಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿ..

committee
ಪಕ್ಷಕ್ಕೆ ಮಹಿಳಾ ಸಮುದಾಯವನ್ನು ಸೆಳೆಯಲು ಕರೆ

By

Published : Jul 12, 2021, 3:58 PM IST

ಬೆಂಗಳೂರು: ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದಕ್ಕೆಂದು ಪ್ರತ್ಯೇಕ ಸ್ತ್ರೀಶಕ್ತಿ ಸಂಘಟನಾ ಸಮಿತಿಯನ್ನು ರಚಿಸಿದ್ದು, ಅದರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ನಡೆಸಿದರು.

ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಧೃವನಾರಾಯಣ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್, ಸುಮಾ ವಸಂತ್, ಉಮಾಶ್ರೀ, ಜಯಮಾಲಾ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ರೂಪ ಶಶಿಧರ್, ಕುಸುಮಾ ಶಿವಳ್ಳಿ, ಮುಖಂಡರಾದ ಮಲ್ಲಾಜಮ್ಮ, ವಾಸಂತಿ ಶಿವಣ್ಣ, ಅಕ್ಕಯ್ ಪದ್ಮಶಾಲಿ, ಕುಸುಮಾ ಹೆಚ್ ಹಾಗೂ ಮತ್ತಿತರರು ಸಭೆಯಲ್ಲಿದ್ದರು.

ಪಕ್ಷಕ್ಕೆ ಮಹಿಳಾ ಸಮುದಾಯವನ್ನು ಸೆಳೆಯಲು ಕರೆ

ಮಾಜಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ 28 ಮಹಿಳಾ ಸದಸ್ಯರ ಸಮಿತಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರ ಒಗ್ಗೂಡಿಸುವಿಕೆ, ವಿಶೇಷ ಸ್ತ್ರೀಶಕ್ತಿ ಸಂಘಟನೆಗಳ ರಚನೆ ಹಾಗೂ ಇರುವ ಸಂಘಟನೆಗಳ ಬಲವರ್ಧನೆಗೆ ಕಾರ್ಯನಿರ್ವಹಿಸಲಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ರಚನೆಯಾಗಿರುವ ಸ್ತ್ರೀಶಕ್ತಿ ಸಂಘಟನೆಗಳಿಗೆ ಇನ್ನಷ್ಟು ಬಲ ತುಂಬುವ ಹಾಗೂ 2023ರ ವಿಧಾನಸಭೆ ಚುನಾವಣೆಗೆ ಮಹಿಳಾ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ.

ಸ್ತ್ರೀಶಕ್ತಿ ಸಮಿತಿ ಸಭೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲಹೆ :ಮುಂಬರುವ ದಿನಗಳಲ್ಲಿ ಪಕ್ಷದ ಈ ಸಮಿತಿಯ 28 ಸದಸ್ಯರು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ರಾಜ್ಯ ಪ್ರವಾಸ ಕೈಗೊಳ್ಳುವ ಸಂದರ್ಭ ಮಹಿಳೆಯರನ್ನು ಯಾವ ರೀತಿ ಸಂಪರ್ಕಿಸಬೇಕು. ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ಯಾವ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು.

ಸಚಿವರಾಗಿ ಉಮಾಶ್ರೀ, ಜಯಮಾಲಾ, ಮೋಟಮ್ಮ ಸೇರಿದಂತೆ ವಿವಿಧ ನಾಯಕಿಯರು ನೀಡಿರುವ ಕಾರ್ಯಕ್ರಮಗಳು ಯಾವುದು? ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಎಷ್ಟಿದೆ? ಮಹಿಳಾ ಶಕ್ತಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಯಾವ ರೀತಿ ಸಹಕಾರ ನೀಡಲಿದೆ.

ಮಹಿಳೆಯರೆಲ್ಲ ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕೈಗೊಳ್ಳುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಚಾರಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ, ಮಹಿಳೆಯರನ್ನು ವಿಶ್ವಾಸಕ್ಕೆ ಪಡೆದು ಅವರಿಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಮಹಿಳೆಯರಿಗೆ ನೀಡಿದ ಕಾರ್ಯಕ್ರಮಗಳ ಕುರಿತು ಮನವರಿಕೆ ಮಾಡಿಕೊಡಿ.

ಸ್ತ್ರೀಶಕ್ತಿ ಸಮಿತಿ

ಯುವ ಸಾಧಕಿಯರನ್ನ ಗುರುತಿಸಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿ. ತನ್ಮೂಲಕ ಪಕ್ಷಕ್ಕೆ ಒಂದು ತಾರಾ ಮೆರುಗನ್ನು ನೀಡಿ, ಇನ್ನಷ್ಟು ವರ್ಚಸ್ಸು ವೃದ್ಧಿಸುವ ಕಾರ್ಯಕ್ಕೆ ಮುಂದಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲಹೆ ನೀಡಿದ್ರು.

ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷದಲ್ಲಿ ಮಹಿಳಾ ಪ್ರಾಬಲ್ಯ ವೃದ್ಧಿಗೆ ಒತ್ತು :ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷದಲ್ಲಿ ಮಹಿಳಾ ಪ್ರಾಬಲ್ಯ ವೃದ್ಧಿಯಾಗಬೇಕು. ಇರುವ ಕಾರ್ಯಕರ್ತೆಯರನ್ನು ಹುರಿದುಂಬಿಸುವ ಜೊತೆಗೆ ಹೊಸಬರನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಮಾಡಬೇಕು.

ಇದೊಂದು ಹೊಸ ಸವಾಲು ಎಂಬಂತೆ ಸ್ವೀಕರಿಸಿ ಸ್ತ್ರೀಶಕ್ತಿ ಸಮಿತಿ ಕಾರ್ಯನಿರ್ವಹಿಸಬೇಕು. ಸಮಿತಿಯಲ್ಲಿ ಯಾರು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯ ಮಾಡುತ್ತೇವೆ.

ಆದಷ್ಟು ಹೆಚ್ಚಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂಬ ಸಲಹೆ ನೀಡಿರುವ ಶಿವಕುಮಾರ್, ಯುವ ಸಮುದಾಯವನ್ನು ಸಂಪರ್ಕಿಸಿ ಪಕ್ಷದ ಇತಿಹಾಸವನ್ನು ತಿಳಿಸುವ ಕಾರ್ಯ ಮಾಡಿ ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details