ಕರ್ನಾಟಕ

karnataka

ETV Bharat / state

ಕೋವಿಡ್-19 ನಿರ್ವಹಣೆ ಹಾಗೂ ರಾಜಕೀಯ ವಿಷಯ ಗಮನಕ್ಕೆ ಉಸ್ತುವಾರಿ ನೇಮಿಸಿದ ಡಿಕೆಶಿ - charge to congress leaders to Kovid-19

ಪ್ರತಿ ವಿಧಾನಸಭಾ ಕ್ಷೇತ್ರವಾರು ಒಬ್ಬೊಬ್ಬ ನಾಯಕರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ತಾವು ಈ ಕೆಳಕಂಡಂತೆ ನೀಡಲಾಗಿರುವ ವಿಧಾನಸಭೆ ಕ್ಷೇತ್ರಗಳ ಜವಾಬ್ದಾರಿಗಳನ್ನು ವಹಿಸಿಕೊಂಡು ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ಕೋವಿಡ್-19ಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳ ನಿರ್ವಹಣೆ ಹಾಗೂ ಕೆಪಿಸಿಸಿ ನೀಡುವ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿ ಕೋರುತ್ತೇನೆ ಎಂದು ಪ್ರಕಟಣೆ ಮೂಲಕ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.

ಡಿಕೆಶಿ
ಡಿಕೆಶಿ

By

Published : May 20, 2021, 10:48 PM IST

ಬೆಂಗಳೂರು: ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಕೋವಿಡ್-19 ಕಾರ್ಯಚಟುವಟಿಕೆಗಳ ನಿರ್ವಹಣೆ ಹಾಗೂ ಇತರ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಲು ಪಕ್ಷದ ಹಿರಿಯ ನಾಯಕರನ್ನು, ಮಾಜಿ ಸಚಿವರು ಹಾಗೂ ಶಾಸಕರನ್ನ ನಿಯೋಜಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ಒಬ್ಬೊಬ್ಬ ನಾಯಕರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ. ತಾವು ಈ ಕೆಳಕಂಡಂತೆ ನೀಡಲಾಗಿರುವ ವಿಧಾನಸಭೆ ಕ್ಷೇತ್ರಗಳ ಜವಾಬ್ದಾರಿಗಳನ್ನು ವಹಿಸಿಕೊಂಡು ಸ್ಥಳೀಯ ಮುಖಂಡರುಗಳ ಸಹಕಾರದೊಂದಿಗೆ ಕೋವಿಡ್-19ಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳ ನಿರ್ವಹಣೆ ಹಾಗೂ ಕೆಪಿಸಿಸಿ ನೀಡುವ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿ ಕೋರುತ್ತೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕೋವಿಡ್-19 ಹಾಗೂ ಕ್ಷೇತ್ರಗಳ ರಾಜಕೀಯ ಚಟುವಟಿಕೆಗಳ ವಿಧಾನಸಭಾವಾರು ಉಸ್ತುವಾರಿ ಇಂತಿದೆ.

ದಿನೇಶ್ ಗುಂಡೂರಾವ್ (ರಾಜಾಜಿನಗರ), ಕೆಜಿಎಫ್ ಜಾರ್ಜ್ (ಸಿವಿ ರಾಮನಗರ), ಕೃಷ್ಣಬೈರೇಗೌಡ (ಯಲಹಂಕ), ಸಂಸದ ಡಾ ಎಲ್ ಹನುಮಂತಯ್ಯ ಅವರಿಗೆ ಎಐಸಿಸಿ, ಕೆಪಿಸಿಸಿ ಹಾಗೂ ಡಿಸಿಸಿ ಸಮನ್ವಯಕಾರರ ಜವಾಬ್ದಾರಿ ನೀಡಲಾಗಿದೆ.

ಕೋವಿಡ್-19 ನಿರ್ವಹಣೆ ಹಾಗೂ ರಾಜಕೀಯ ವಿಷಯ ಗಮನಕ್ಕೆ ಉಸ್ತುವಾರಿಗಳ ನೇಮಕ

ಜಿ ಸಿ ಚಂದ್ರಶೇಖರರಿಗೆ ಮಲ್ಲೇಶ್ವರ, ಪ್ರೊ. ರಾಜೀವ್ ಗೌಡಗೆ ಪದ್ಮನಾಭನಗರ, ಎಂ ಕೃಷ್ಣಪ್ಪಗೆ ಯಶವಂತಪುರ, ಹೆಚ್​ಎಂ ರೇವಣ್ಣಗೆ ಗೋವಿಂದರಾಜನಗರ, ಜಮೀರ್ ಅಹಮದ್ ಖಾನ್​ಗೆ ಬೊಮ್ಮನಹಳ್ಳಿ, ಎಂ.ನಾರಾಯಣಸ್ವಾಮಿಗೆ ಮಹದೇವಪುರ/ಕೆಆರ್ ಪುರ, ಎನ್​ಎ ಹ್ಯಾರಿಸ್​ಗೆ ರಾಜರಾಜೇಶ್ವರಿನಗರ, ವೆಂಕಟರಾಮಯ್ಯಗೆ ದೇವನಹಳ್ಳಿ, ಕೆ ಗೋವಿಂದರಾಜ್​ಗೆ ಚನ್ನಪಟ್ಟಣ, ಎಸ್ ರವಿಗೆ ನೆಲಮಂಗಲ, ಬಿ ಸುರೇಶ್​ಗೆ ಮಹಾಲಕ್ಷ್ಮಿಲೇಔಟ್, ಯೂಬಿ ವೆಂಕಟೇಶ್​ಗೆ ಬಸವನಗುಡಿ, ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣ ಹಾಗೂ ರಿಜ್ವಾನ್ ಅರ್ಷದ್​ಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ.

ABOUT THE AUTHOR

...view details