ಕರ್ನಾಟಕ

karnataka

ETV Bharat / state

ಅಖಂಡ ಶ್ರೀನಿವಾಸಮೂರ್ತಿಗೆ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಡಿಕೆಶಿ ಆಗ್ರಹ - MLA Akhandasrinivasa Murthy

ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

D.K Shivakumar
D.K Shivakumar

By

Published : Aug 15, 2020, 8:25 PM IST

ಬೆಂಗಳೂರು:ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಟ್ವೀಟ್ ಮೂಲಕ ಆಗ್ರಹ ಮಾಡಿರುವ ಅವರು, ನಮ್ಮ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮೇಲೆ ದಾಳಿ ನಡೆದರೂ, ಬಿಜೆಪಿ ಸರ್ಕಾರ ಅವರಿಗೆ ಇನ್ನೂ ಪೊಲೀಸ್ ಭದ್ರತೆ ನೀಡಿಲ್ಲ. ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ಹೊಂದಿರುವ ಅಸಡ್ಡೆ ಮತ್ತು ಪಿತೂರಿ ಮನೋಭಾವವನ್ನು ಇದು ತೋರಿಸುತ್ತದೆ. ನಮ್ಮ ಶಾಸಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಕ್ಷಣ ಭದ್ರತೆಯನ್ನು ಒದಗಿಸುವಂತೆ ಬಿಎಸ್​ವೈ ಅವರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ನಡೆಸಿದ ಸುದ್ದಿಗೋಷ್ಠಿ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಅಖಂಡ ಶ್ರೀನಿವಾಸಮೂರ್ತಿ ತಮಗೆ ಜೀವ ಬೆದರಿಗೆ ಇದೆ. ಪೊಲೀಸ್ ಭದ್ರತೆ ಒದಗಿಸುವಂತೆ ಕೋರಿದ್ದೆ. ಇದುವರೆಗೂ ಸರ್ಕಾರ ಒದಗಿಸಿಲ್ಲ. ಗನ್ ಮ್ಯಾನ್ ಬಿಟ್ಟರೆ ಬೇರೆ ಭದ್ರತಾ ಸಿಬ್ಬಂದಿ ಇಲ್ಲ. ನಾನು ಪಕ್ಷದ ನಾಯಕರಲ್ಲಿ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರುತ್ತೇನೆ ಎಂದಿದ್ದರು.

ಇದೇ ಸಂದರ್ಭ ಉಪಸ್ಥಿತರಿದ್ದ ಡಿಕೆಶಿ ಕೂಡ ಸರ್ಕಾರಕ್ಕೆ ಎಚ್ಚರಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಟ್ವೀಟ್ ಮಾಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ತಮಗೆ ಭದ್ರತೆ ಒದಗಿಸುವಂತೆ ಅಖಂಡ ಶ್ರೀನಿವಾಸ ಮೂರ್ತಿ ನಿನ್ನೆ ಅಷ್ಟೇ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಸರ್ಕಾರಕ್ಕೂ ಈಗಾಗಲೇ ಕೇಳಿಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೂ ಭದ್ರತೆ ಒದಗಿಸಿಲ್ಲ.

ABOUT THE AUTHOR

...view details