ಕರ್ನಾಟಕ

karnataka

ETV Bharat / state

ಆರ್‌ಎಸ್‌ಎಸ್‌ನ ತತ್ವವನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವುದು ಖಂಡನೀಯ : ಡಿಕೆಶಿ ಟ್ವೀಟ್ - ಪಠ್ಯ ಪುಸ್ತಕ ಪರಿಷ್ಕರಣೆ

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಬಿಜೆಪಿ ಎಲ್ಲರ ವಿರೋಧವನ್ನು ಎದುರಿಸುತ್ತಿದೆ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಇದರ ನಡುವೆ ಎನ್​ಈಪಿ ಹೆಸರಿನಲ್ಲಿ ʼನಾಗ್ಪುರ ಶಿಕ್ಷಣ ನೀತಿʼ ಜಾರಿಗೆ ತರುವ ಧಾವಂತಕ್ಕೆ ರಾಜ್ಯ ಸರ್ಕಾರ ಬಿದ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ..

dk shivakumar tweet
ಡಿಕೆಶಿ ಟ್ವೀಟ್

By

Published : May 27, 2022, 2:02 PM IST

ಬೆಂಗಳೂರು: ಆರ್‌ಎಸ್‌ಎಸ್‌ನ ತತ್ವವನ್ನು ಮಕ್ಕಳ ತಲೆಗೆ ತುಂಬಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಡಿಪಾಯ. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಹೊರಟಿದೆ. ನೈಜ ಇತಿಹಾಸವನ್ನು ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸವನ್ನು ನೀಡುವ ಕಾರ್ಯದಲ್ಲಿ ಮಗ್ನವಾಗಿದೆ ಎಂದು ಕಿಡಿ ಕಾರಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಬಿಜೆಪಿ ಎಲ್ಲರ ವಿರೋಧವನ್ನು ಎದುರಿಸುತ್ತಿದೆ. ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಇದರ ನಡುವೆ ಎನ್​ಈಪಿ ಹೆಸರಿನಲ್ಲಿ ʼನಾಗ್ಪುರ ಶಿಕ್ಷಣ ನೀತಿʼ ಜಾರಿಗೆ ತರುವ ಧಾವಂತಕ್ಕೆ ರಾಜ್ಯ ಸರ್ಕಾರ ಬಿದ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ : ನಕಲಿ‌ ಎಸಿಬಿ ಅಧಿಕಾರಿ ವಿರುದ್ಧ ದೂರು

ಶಿಕ್ಷಣ ಕ್ಷೇತ್ರವನ್ನು ಮತ್ತೆ ಸರಿಯಾದ ದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ವರ್ಗದವರೂ ಧ್ವನಿಗೂಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಿಕ್ಷಣವು ಮಕ್ಕಳ ಭವಿಷ್ಯಕ್ಕೆ ಒಂದು ಭದ್ರ ಅಡಿಪಾಯ. ಆ ಅಡಿಪಾಯವು ಎಂದಿಗೂ ಅಲುಗಾಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details