ಬೆಂಗಳೂರು :ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿದ್ದಾರೆ.
ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ಆಶಾ ಕಾರ್ಯಕರ್ತರಿಗೆ ಡಿಕೆಶಿ ಸನ್ಮಾನ - ಡಿ.ಕೆ. ಶಿವಕುಮಾರ್ ಸುದ್ದಿ
ಕೆಪಿಸಿಸಿ ನೂತನ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್, ಕೊಡೆ ಹಾಗೂ ಕೊರೊನಾದಿಂದ ರಕ್ಷಿಸಿಕೊಳ್ಳಲು ಫೇಸ್ ಶೀಲ್ಡ್‌ನ ಉಡುಗೊರೆಯಾಗಿ ನೀಡಿದ ಡಿಕೆಶಿ, ಶಾಲು ಹೊದಿಸಿ ಅವರಿಗೆಲ್ಲ ಸನ್ಮಾನ ಮಾಡಿದರು.
ಡಿ.ಕೆ. ಶಿವಕುಮಾರ್
ಇದೇ ವೇಳೆ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಪರ ನಿಂತಿರುತ್ತೆ. ಕೊರೊನಾದ ಸಂಕಷ್ಟಕದ ಸಮದಯಲ್ಲೂ ಕೆಲಸ ಮಾಡ್ತಿರುವ ಆಶಾ ಕಾರ್ಯಕರ್ತೆಯರ ಪರ ನಾವು ಯಾವಾಗಲೂ ಇರುತ್ತೇವೆ. ಅವರ ಸಮಸ್ಯೆ ನಮ್ಮ ಸಮಸ್ಯೆ ಎಂದು ತಿಳಿದು ಸದಾ ಅವರ ಪರವಾಗಿ ನಾವು ಇರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.