ಕರ್ನಾಟಕ

karnataka

ETV Bharat / state

ಪಕ್ಷ ಸಂಘಟನೆಗೆ ಒತ್ತು: ಮತ್ತೊಂದು ಸುತ್ತಿನ ಪ್ರವಾಸ ಕೈಗೊಂಡ ಡಿ.ಕೆ. ಶಿವಕುಮಾರ್ - ಉತ್ತರ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡ ಡಿ.ಕೆ. ಶಿವಕುಮಾರ್

ಬಿಜೆಪಿ ಪಕ್ಷ ಪ್ರಬಲವಾಗಿರುವ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಹಾಗೂ ಹುರಿದುಂಬಿಸುವ ಜತೆಗೆ, ಜನರ ಒಲವು ಗಿಟ್ಟಿಸುವ ಯತ್ನವನ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮಾಡುತ್ತಿದ್ದಾರೆ.

DK Shivakumar Tour of Northern Karnataka and Coastal Districts
ಪಕ್ಷ ಸಂಘಟನೆಗೆ ಇನ್ನೊಂದು ಸುತ್ತಿನ ಪ್ರವಾಸ ಕೈಗೊಂಡ ಡಿಕೆಶಿ

By

Published : Nov 26, 2020, 11:05 AM IST

ಬೆಂಗಳೂರು:ಪಕ್ಷ ಸಂಘಟನೆ ಹಾಗೂ ತಳಮಟ್ಟದ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸಲು ಜಿಲ್ಲಾ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇನ್ನೊಂದು ಹಂತದ ಪ್ರವಾಸ ಆರಂಭಿಸಿದ್ದಾರೆ.

ನ.22 ರಿಂದ ನಾಲ್ಕು ದಿನ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದ ಶಿವಕುಮಾರ್, ನ.25ರಂದು ಸಿಬಿಐ ವಿಚಾರಣೆಗೂ ಹಾಜರಾಗಿದ್ದರು. ಇದೀಗ ಅದನ್ನು ಮುಗಿಸಿ ಗುಜರಾತ್ ಗೆ ತೆರಳಿರುವ ಅವರು ನ.28 ಮತ್ತು 29 ರಂದು ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಭೇಟಿ ಕೊಡಲಿದ್ದಾರೆ. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಚರ್ಚಿಸಲಿದ್ದಾರೆ.

ಡಿ.ಕೆ. ಶಿವಕುಮಾರ್ ಪ್ರವಾಸದ ವಿವರ

ಬಿಜೆಪಿ ಪಕ್ಷ ಪ್ರಭಲವಾಗಿರುವ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಹಾಗೂ ಹುರಿದುಂಬಿಸುವ ಜತೆಗೆ, ಜನರ ಒಲವು ಗಿಟ್ಟಿಸುವ ಯತ್ನವನ್ನೂ ಮಾಡುತ್ತಿರುವ ಡಿಕೆಶಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ... ಅಹ್ಮದ್ ಪಟೇಲ್ ಪಾರ್ಥಿವ ಶರೀರದ ದರ್ಶನಕ್ಕಾಗಿ ಗುಜರಾತ್​ ತಲುಪಿದ ಡಿಕೆಶಿ, ರಾಹುಲ್

ಗುಜರಾತ್ ಪ್ರಯಾಣ : ನಿನ್ನೆ ಸಂಜೆ ವಿಶೇಷ ವಿಮಾನದಲ್ಲಿ ಗುಜರಾತ್​ಗೆ ಪ್ರಯಾಣ ಬೆಳೆಸಿರುವ ಡಿ.ಕೆ. ಶಿವಕುಮಾರ್ ಇಂದು ರಾಜ್ಯಸಭೆ ಸದಸ್ಯರಾಗಿದ್ದ ದಿ. ಅಹ್ಮದ್ ಪಟೇಲ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ವಡೋದರಾಗೆ ಆಗಮಿಸಿ, ಗೋವಾಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಸಂಜೆ ಗೋವಾದಲ್ಲಿ ತಂಗಲಿದ್ದು, ನಾಳೆ ಬೆಳಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಅಲ್ಲಿಂದ ಹೊರಟು ಸಂಜೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನ.28 ರಂದು ಶಿರಸಿಯಲ್ಲಿ ಆಯೋಜಿಸಿರುವ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವರು. ಇದಾದ ಬಳಿಕ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಜತೆ ಸಭೆ ನಡೆಸುವರು. ಅಂದು ಸಂಜೆ ಉಡುಪಿ ಜಿಲ್ಲೆಯ ಕೊಲ್ಲೂರಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ನ.29 ರಂದು ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಮಾಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಉಡುಪಿಗೆ ಆಗಮಿಸಿ ಅಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಜತೆ ಸಭೆ ನಡೆಸಲಿದ್ದಾರೆ. ಪಕ್ಷ ಸಂಘಟನೆಗೆ ಅಗತ್ಯವಿರುವ ಮಾಹಿತಿ, ಸಲಹೆ, ಸೂಚನೆ ಸ್ವೀಕರಿಸಲಿದ್ದಾರೆ. ಉತ್ತರ ಕನ್ನಡ, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಹಸಕ್ಕೆ ಕೈ ಹಾಕಿರುವ ಡಿಕೆಶಿ ಚುನಾವಣೆಗೆ ಎರಡೂವರೆ ವರ್ಷ ಇರುವಾಗಲೇ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಸಂಜೆ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

For All Latest Updates

TAGGED:

ABOUT THE AUTHOR

...view details