ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಿಂದ ದೇಶದ ಬಲವರ್ಧನೆ.. ಬಿಜೆಪಿಯಿಂದ ಅವನತಿ ಎಂದ ಡಿ ಕೆ ಶಿವಕುಮಾರ್​

ಕಾಂಗ್ರೆಸ್​ ನಾಯಕರು ಇಂದು ಬೆಂಗಳೂರಿನ ರೇಸ್​ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನವನ್ನು ಆಚರಿಸಿದರು.

KN_BNG_03_CONGRESS_BHAVANA_DKS_TALK_SCRIPT_7208077
ಮಾಜಿ ಕಾಂಗ್ರೆಸ್​ ನಾಯಕರ ಜನ್ಮದಿನಾಚರಣೆ

By

Published : Aug 20, 2022, 5:11 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶವನ್ನು ಬಲವರ್ಧನೆಗೊಳಿಸುವ ಪ್ರಯತ್ನವನ್ನ ಮಾಡಿದರೆ, ಬಿಜೆಪಿ ಸರ್ಕಾರ ದೇಶವನ್ನು ಅವಸಾನದತ್ತ ಕೊಂಡೊಯ್ಯುವ ಕಾರ್ಯ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹರಿಹಾಯ್ದರು.

ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯಕ್ಕೆ ಮತ್ತು ದೇಶಕ್ಕೆ ಇದೊಂದು ಪವಿತ್ರವಾದ ದಿನ. ಧೀಮಂತ ನಾಯಕರನ್ನು ನೀಡಿದ ದಿನ ಇದಾಗಿದೆ ಎಂದು ಸ್ಮರಿಸಿದರು.

ದೇವರಾಜ್ ಅರಸು ಹಾಗೂ ರಾಜೀವ್ ಗಾಂಧಿ ಈ ದೇಶಕ್ಕೆ, ನಾಡಿಗೆ, ನಮಗೆ-ನಿಮಗೆ ನೀಡಿರುವ ಕೊಡುಗೆಯನ್ನು ನಾವು ಮೆಲುಕು ಹಾಕಬೇಕು. ಬಹಳ ಚಿಕ್ಕ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರಿಗೆ ಆಕಸ್ಮಿಕವಾಗಿ ಪ್ರಧಾನಿ ಸ್ಥಾನ ಲಭಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಿಂದಲೇ ಅವರ ಅಧಿಕಾರ ಆರಂಭವಾಯಿತು. ಆ ಸಂದರ್ಭದಲ್ಲಿ ನಾಯಕರು ಸಿದ್ಧವಾಗುತ್ತಿದ್ದರು. ಪಂಚಾಯಿತಿ, ಮಠದಿಂದ ದೇಶದವರೆಗೂ ಒಬ್ಬ ಉತ್ತಮ ನಾಯಕರ ಅಗತ್ಯ ಇತ್ತು. ಈ ಕಾರ್ಯಕ್ಕೆ 73 ಮತ್ತು 74ನೇ ತಿದ್ದುಪಡಿ ಅತ್ಯಂತ ಸಹಕಾರಿಯಾಯಿತು ಎಂದರು.

ರಾಜಕೀಯಕ್ಕೆ ಯುವಕರನ್ನು ಕರೆತಂದ ರಾಜೀವ್​ ಗಾಂಧಿ:

ಸಾಕಷ್ಟು ಮಂದಿ ಯುವಕರನ್ನು ಅಂದು ರಾಜಕೀಯಕ್ಕೆ ಕರೆತಂದು ಬೆಳೆಸುವ ಕಾರ್ಯವನ್ನು ರಾಜೀವ್ ಗಾಂಧಿ ಮಾಡಿದ್ದರು. ಸಾಕಷ್ಟು ಮಂದಿ ಯುವ ನಾಯಕರನ್ನು ರೂಪಿಸಿದ ಕೀರ್ತಿ ರಾಜೀವ್ ಗಾಂಧಿಗೆ ಸಲ್ಲುತ್ತದೆ. ಮಹಿಳೆಯರಿಗೆ ಮೀಸಲಾತಿ ತರಲೇಬೇಕಾದ ಅನಿವಾರ್ಯತೆ ಇದೆ. ಹೆಣ್ಣು ಮಕ್ಕಳಲ್ಲೂ ನಾಯಕತ್ವದ ಗುಣ ಇದೆ. ಅದನ್ನು ಹೊರ ತರುವ ಪ್ರಯತ್ನ ಆಗಲಿ. ಮತದಾನದ ವಯೋಮಿತಿಯನ್ನು 18ಕ್ಕೆ ಇಳಿಸುವ ಸಂದರ್ಭ ಬಿಜೆಪಿಯವರು ಸಾಕಷ್ಟು ವಿರೋಧ ಮಾಡಿದ್ದರು. ಯುವಕರ ಮೇಲೆ ಅಪಾರ ನಂಬಿಕೆ ಹಾಗೂ ವಿಶ್ವಾಸವನ್ನು ಇಟ್ಟು ರಾಜೀವ್ ಗಾಂಧಿ ಯುವಕರಿಗೆ ಮತದಾನದ ಹಕ್ಕು ನೀಡಿದರು ಎಂದು ಡಿಕೆಶಿ ಸ್ಮರಿಸಿದರು.

ಇದೇ ಸಂದರ್ಭ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜೀವ್ ಗಾಂಧಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬೃಹತ್ ರಾಷ್ಟ್ರದ ಪ್ರಧಾನಿ ಆಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕೊಂಡಯ್ಯಬೇಕೆಂಬ ಚಿಂತನೆ ಮಾಡಿದ್ದರು. ವಿಜ್ಞಾನ ತಂತ್ರಜ್ಞಾನ ಸಂಪರ್ಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಜಗತ್ತಿನ ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ನಾವು ನಿಲ್ಲಬೇಕೆಂಬ ತೀರ್ಮಾನ ಮಾಡಿ ಆ ನಿಟ್ಟಿನಲ್ಲಿ ಅಗತ್ಯ ಬೆಳವಣಿಗೆಗಳಿಗೆ ಪ್ರಯತ್ನ ಮಾಡಿದ್ದರು.

ಯಾರಿಗೆ ಇತಿಹಾಸ ಗೊತ್ತಿಲ್ಲವೊ ಅವರು ದೇಶದ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಇದರಿಂದ ಭಾರತೀಯ ಜನತಾ ಪಕ್ಷದವರು ನೈಜತೆ ತಿಳಿಯಬಾರದು ಎಂದು ದೇಶದ ಇತಿಹಾಸವನ್ನೇ ತೀರುಚಲು ಹೊರಟಿದ್ದಾರೆ. ದೇಶದ ಸಾಧಕರ ಕೊಡುಗೆಯನ್ನು ಬದಲಿಸಲು ಹೊರಟಿದ್ದಾರೆ. ಇತಿಹಾಸದಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಜನರ ಚರಿತ್ರೆಯನ್ನು ಬದಲಿಸುವ ಕಾರ್ಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮೊದಲಿನಿಂದಲೂ ಮಾಡುತ್ತಿದ್ದರು, ಈಗಲೂ ಮುಂದುವರಿಸಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ಸತ್ಯ ಇಡೀ ಜಗತ್ತಿಗೆ ಗೊತ್ತು: ಸಿಎಂ ಬೊಮ್ಮಾಯಿ‌

ABOUT THE AUTHOR

...view details