ಕರ್ನಾಟಕ

karnataka

ETV Bharat / state

ಪಾದರಾಯನಪುರ ಗಲಭೆಯಲ್ಲಿ ನಮ್ಮ ಪಕ್ಷದವರು ತಪ್ಪು ಮಾಡಿದ್ರೆ ಶಿಕ್ಷಿಸಲಿ: ಡಿ.ಕೆ. ಶಿವಕುಮಾರ್ - ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬಸವಣ್ಣನವರು ಕೊಟ್ಟ ಮಾರ್ಗದರ್ಶನ, ನೀತಿ, ವಚನಗಳಿಂದಲೇ ಉಸಿರಾಡುತ್ತಿದ್ದೇವೆ, ಬದುಕಿದ್ದೇವೆ. ಅವರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ಹೆಮ್ಮೆಯ ಸಂಗತಿ. ಪ್ರಜಾಪ್ರಭುತ್ವದಲ್ಲಿ ನಾವಿಂದು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರೆ ಅದು ಅವರ ಕಲ್ಪನೆಯೇ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಲ್ಲದೆ, ಪಾದರಾಯನಪುರ ಪ್ರಕರಣದಲ್ಲಿ ನಮ್ಮ ಪಕ್ಷದವರು ತಪ್ಪು ಮಾಡಿದ್ದರೆ ಅಂತವರನ್ನು ಹಿಡಿದು ಶಿಕ್ಷಿಸಲಿ ಎಂದು ಡಿಕೆಶಿ ಹೇಳಿದ್ರು.

qwsqws
ಪಾದರಾಯನಪುರ ಗಲಭೆಯಲ್ಲಿ ನಮ್ಮ ಪಕ್ಷದವರು ತಪ್ಪು ಮಾಡಿದ್ರೆ ಶಿಕ್ಷಿಸಲಿ:ಡಿ.ಕೆ ಶಿವಕುಮಾರ್

By

Published : Apr 26, 2020, 3:26 PM IST

ಬೆಂಗಳೂರು: ಪಾದರಾಯನಪುರದಲ್ಲಿ ನಮ್ಮ ಪಕ್ಷದ ಯಾರಾದರೂ ತಪ್ಪು ಮಾಡಿ ಕಾನೂನು ಉಲ್ಲಂಘಿಸಿದ್ದರೆ ಶಿಕ್ಷೆ ವಿಧಿಸುವ ಕಾರ್ಯವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪಾದರಾಯನಪುರ ಗಲಭೆಯಲ್ಲಿ ನಮ್ಮ ಪಕ್ಷದವರು ತಪ್ಪು ಮಾಡಿದ್ರೆ ಶಿಕ್ಷಿಸಲಿ:ಡಿ.ಕೆ ಶಿವಕುಮಾರ್

ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿd ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕು, ಪಾಲಿಸಬೇಕು. ಆಡಳಿತ ಪಕ್ಷಕ್ಕೆ ಒಂದು ನ್ಯಾಯ, ಪ್ರತಿಪಕ್ಷಕ್ಕೆ ಒಂದು ನ್ಯಾಯ ಇದೆಯೇ? ಅವರನ್ನೊಂದು, ಇವರನ್ನೊಂದು ರೀತಿ ಬಿಂಬಿಸುವುದು ಸರಿಯಲ್ಲ. ಸರ್ಕಾರಕ್ಕೆ ಅಸಹಕಾರ ಕೊಡುವ ರೀತಿ ಬಿಜೆಪಿಯಲ್ಲೇ ಒಂದೊಂದು ಬಣ ಸೃಷ್ಟಿಯಾಗಿವೆ ಎಂದರು.

ಮಂಗಳೂರು, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆಯಲ್ಲಿ ಯಾರ್ಯಾರು ಏನೇನು ಹೇಳಿಕೆ ನೀಡಿದರು, ತಪ್ಪು ಮಾಡಿದರು. ಎಲ್ಲೆಲ್ಲಿ ಯಾರು ತಪ್ಪು ಮಾಡಿದ್ದಾರೆ. ಎನ್ನುವುದನ್ನು ಮಾಧ್ಯಮಗಳು ನೋಡಬೇಕು. ಮಂಡ್ಯದಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡರಿಂದ ಮಾಧ್ಯಮಗಳ ಮೇಲೆ ದೌರ್ಜನ್ಯ ಆಗಿದೆ ಎಂಬುದನ್ನೇ ದೊಡ್ಡದಾಗಿಸುವ ಕಾರ್ಯ ಮಾತ್ರ ಮಾಡಬೇಡಿ. ಎಲ್ಲಾ ಕಡೆ ತಪ್ಪಾಗಿದೆ, ಅದನ್ನು ಗಮನಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕೆಂದು ಡಿ ಕೆ ಶಿವಕುಮಾರ್​ ಸಲಹೆ ಇತ್ತರು.

ಅಕ್ಕಿ ದಾಸ್ತಾನು ಅಕ್ರಮ ಆರೋಪ ಸಂಬಂಧ ಸಚಿವ ಗೋಪಾಲಯ್ಯಗೆ ಮತ್ತೆ ತಿವಿದ ಡಿಕೆಶಿ, ನಾನು ಗೋಪಾಲಯ್ಯಗಿಂತ ಮೊದಲು ಸಚಿವ ಆದವನು. ಅವರ ನನ್ನ ನಡುವೆ ಈಗ ಬೇಡ. ಸರ್ಕಾರ ಹೇಗೆ ನಡೆಯುತ್ತದೆ, ಸಿಸ್ಟಮ್ ಹೇಗೆ ಇರುತ್ತದೆ ಎಂದು ಗೊತ್ತಿದೆ. ಅವರ ಸರ್ಕಾರ, ಅಧಿಕಾರಿಗಳು ಏನೆಂದು ನನಗೆ ಗೊತ್ತು. ಏನು ಹೇಳಿದರೂ ಮುಚ್ಚಿ ಹಾಕುತ್ತಾರೆ, ಇಲ್ಲವೇ ಸಮಜಾಯಿಷಿ ನೀಡುತ್ತಾರೆ ಎನ್ನುವುದು ಗೊತ್ತು ಎಂದು ಡಿಕೆಶಿ ಕುಟುಕಿದ್ದಾರೆ.

ABOUT THE AUTHOR

...view details